ದಿಶಾ – ಟೈಗರ್ ಶ್ರಾಫ್ ಡೇಟಿಂಗ್.? ಕ್ಯಾಮೆರಾದಲ್ಲಿ ಸೆರೆಯಾಯ್ತು ಯುವಜೋಡಿಯ ಸೀಕ್ರೆಟ್..!

ನೇಶನ್ಸ್ ಕ್ರಶ್ ಎಂದೇ ಖ್ಯಾತಿಯಾದ ದಿಶಾ ಪಠಾನಿ ಟೈಗರ್ ಹಾಗೂ ಟೈಗರ್ ಶ್ರಾಫ್ ಡೇಟಿಂಗ್ ಮಾಡ್ತಿದಾರಾ..? ಹೌದು ಅಂತಿವೆ ಮೂಲಗಳು. ಅವರಿಬ್ಬರ ಮಧ್ಯೆ ಡೇಟಿಂಗ್ ನಡೀತಿದೆ ಎನ್ನುವ ಸುದ್ದಿ ಒಂದು ವರ್ಷದಿಂದಲೂ ಕೇಳಿಬರ್ತಿದ್ದು, ಅದಕ್ಕೀಗ ಸಾಕ್ಷಿಯೂ ಸಿಕ್ಕಿದೆ. ಮುಂಬೈನ ಬಾಂದ್ರಾದ ರೆಸ್ಟೋರೆಂಟ್ ಒಂದರಿಂದ, ಈ ಯುವಜೋಡಿ ಲಂಚ್ ಡೇಟ್ ಮುಗಿಸಿಕೊಂಡು ಹೊರಬರುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಕಳೆದವಾರ ಟೈಗರ್, ಬಾಂದ್ರಾದ ‘ವಾಸ್ತು’ ಅಪಾರ್ಟಮೆಂಟ್ ನಲ್ಲಿರುವ ದಿಶಾ ಮನೆಗೆ ತೆರಳಿದ್ದು ದೊಡ್ಡ ಸುದ್ದಿಯಾಗಿತ್ತು.

tiger shroff disha patani ndtv

tiger shroff disha patani ndtv

Related image

Related image

ಅಹಮದ್ ಖಾನ್ ನಿರ್ದೇಶನದ ‘ಬಾಘೀ – 2’ ಚಿತ್ರದಲ್ಲಿ ಇಬ್ಬರೂ ಜೊತೆಯಾಗಿ ನಟಿಸುತ್ತಿದ್ದು, ಮುಂದಿನ ವರ್ಷ ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ. ಈ ಮೊದಲು ಇವರಿಬ್ಬರು, ‘ಬೇಫಿಕರಾ’ ಎಂಬ ವಿಡಿಯೋ ಅಲ್ಬಮ್ ಸಾಂಗ್ ನಲ್ಲಿ ಜೊತೆಯಾಗಿ ಅಭಿನಯಿಸಿದ್ದರು. ಪಿಟಿಐ ಗೆ ನೀಡಿದ ಸಂದರ್ಶನದಲ್ಲಿ ಟೈಗರ್ ‘ನಮ್ಮಿಬ್ಬರ ನಡುವೆ ಉತ್ತಮ ಬಾಂಡಿಗ್ ಇದ್ದು, ಜೊತೆಯಲ್ಲಿ ಕೆಲಸ ಮಾಡುವಾಗ ತುಂಬ ಸರಳ ಅನಿಸುತ್ತದೆ ‘ ಎಂದು ಹೇಳಿದ್ದರು. 2015 ರಲ್ಲಿ ತೆಲುಗಿನ ‘ಲೋಫರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ದಿಶಾ, ನಂತರ ಧೋನಿ – ದಿ ಅನ್ ಟೋಲ್ಡ್ ಸ್ಟೋರಿ ಚಿತ್ರದ ಮೂಲಕ, ಪಡ್ಡೆ ಹುಡುಗರ ಕ್ರಶ್ ಎನಿಸಿಕೊಂಡಿದ್ದರು. ಜ್ಯಾಕೀಚಾನ್ ಅವರೊಂದಿಗೆ ‘ಕುಂಗ್ ಫೂ ಯೋಗಾ’ ಚಿತ್ರದಲ್ಲಿಯೂ ದಿಶಾ ನಟಿಸಿದ್ದಾರೆ.

Comments are closed.