ಅಮ್ಜದ್ ಅಲಿ ಖಾನ್ ಲೈವ್ : ಉಸ್ತಾದ್ ಸರೋದ್ ವಾದನಕ್ಕೆ ತಲೆದೂಗಿದ ಶ್ರೋತೃಗಳು

ಶುಕ್ರವಾರ ಸಂಜೆ 55ನೇ ಬೆಂಗಳೂರು ಗಣೇಶ ಉತ್ಸವದಲ್ಲಿ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ವಾದ್ಯಸಂಗೀತಗಾರ ಉಸ್ತಾದ್ ಅಮ್ಜದ್ ಅಲಿ ಖಾನ್, ಸರೋದ್ ವಾದನದ ಮೂಲಕ ಸಂಗೀತ ಪ್ರಿಯರ ಮನಸ್ಸನ್ನು ಮುದಗೊಳಿಸಿದರು. ವಿಜಯ್ ಘಾಟೆ ತಬಲಾ ಹಾಗೂ ಗಿರಿಧರ ಉಡುಪ ಅವರು ಘಟಂ ವಾದ್ಯದಲ್ಲಿ ಸಾಥ್ ನೀಡಿದರು. ಉಸ್ತಾದ್ ಅಮ್ಜದ್ ಅಲಿ ಖಾನ್, ತಾವೇ ರಚಿಸಿದ ಗಣೇಶ ಕಲ್ಯಾಣ್ ರಾಗದ ಮೂಲಕ ಕಾರ್ಯಕ್ರಮ ಆರಂಭಿಸಿದರು. ಸರೋದ್ ವಾದನದ ನುಡಿಸುವಿಕೆಗೆ ಹೊಂದಿಕೆಯಾಗುವ ‘ಜಿಲಾ ಕಾಫಿ’ ರಾಗದ ರಚನೆಯನ್ನು ಪ್ರಸ್ತುತಪಡಿಸಿದರು.

Image may contain: one or more people and child

Image may contain: 1 person, playing a musical instrument, beard and indoor

Image may contain: 1 person, smiling

ನಂತರ ರವೀಂದ್ರನಾಥ್ ಟ್ಯಾಗೋರ್ ಅವರ ಸುಪ್ರಸಿದ್ಧ ರಚನೆಯಾದ ‘ ಏಕ್ಲಾ ಚಲೋರೆ ‘ ಗೀತೆಯನ್ನು ನುಡಿಸಿದರು. ನಂತರ ಅತ್ಯಂತ ಪ್ರಾಚಿನ ರಾಗಗಳಲ್ಲಿ ಒಂದಾದ ಮಾಲಕಂಸ ರಾಗದಲ್ಲಿ ತರಾನಾ ನುಡಿಸಿದರು. ಯಾವುದೇ ಶಬ್ದಗಳನ್ನು ಬಳಸದೇ ಹಾಡಲಾಗುವ ‘ ತರಾನಾ ‘ಎನ್ನುವ ಗಾಯನ ಪ್ರಕಾರವನ್ನು ಹುಟ್ಟುಹಾಕಿದ್ದು ಅಮೀರ್ ಖುಸ್ರೋ ಎಂಬುದಾಗಿ ಉಸ್ತಾದ್ ಹೇಳಿದರು. ಮಿಯಾ ತಾನಸೇನ್ ಕಂಡುಹಿಡಿದ ದರ್ಬಾರಿ ಕನಾಡಾ ರಾಗವನ್ನು ಪ್ರಸ್ತುತಪಡಿಸಿದರು. ಈ ನಡುವೆ ಹಿರಿಯ ಪ್ರೇಕ್ಷಕರೊಬ್ಬರು ವೇದಿಕೆ ಮೇಲೆ ಹೋಗಿ ಉಸ್ತಾದ್ ಅವರೊಂದಿಗೆ ಫೋಟೊ ತೆಗೆಸಿಕೊಳ್ಳುಬ ಹಂಬಲ ವ್ಯಕ್ತಪಡಿಸಿದರು. ಕಾರ್ಯಕರ್ತರು ಆ ಹಿರಿಯರನ್ನು ವೇದಿಕೆಯಿಂದ ಕೆಳಗಿಳಿಸಲು ಪ್ರಯತ್ನಿಸಿದರಾದರು. ಆದರೆ ಅಮ್ಜದ್ ಅಲಿ ಖಾನ್ ಅವರು ಕಾರ್ಯಕ್ರಮ ಆಯೋಜಕರಿಗೆ ಫೋಟೊ ತೆಗೆಯುವಂತೆ ಹೇಳಿ, ಹಸ್ತಾಕ್ಷರ ನೀಡಿ, ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಮಾತನಾಡಿ ಕಳುಹಿಸಿದ್ದು, ಅವರ ಸರಳತೆ ಅನನ್ಯ ಎನಿಸಿತು. ಆ ಹಿರಿಯ ನಾಗರಿಕರ ಕೋರಿಕೆಯ ಮೇರೆಗೆ ವೈಷ್ಣವ ಜನತೋ ಹಾಡನ್ನು ನುಡಿಸಿದರು. ವಿಜಯ್ ಘಾಟೆ ತಬಲಾ ಹಾಗೂ ಗಿರಿಧರ್ ಉಡುಪ ಅವರ ಘಟಂ ಜುಗಲಬಂದಿ ಜನರ ಜೋರಾದ ಚಪ್ಪಾಳೆಯನ್ನು ಗಿಟ್ಟಿಸಿತು.

One thought on “ಅಮ್ಜದ್ ಅಲಿ ಖಾನ್ ಲೈವ್ : ಉಸ್ತಾದ್ ಸರೋದ್ ವಾದನಕ್ಕೆ ತಲೆದೂಗಿದ ಶ್ರೋತೃಗಳು

  • October 20, 2017 at 9:39 PM
    Permalink

    This web page won’t render properly on my blackberry – you might want to try and repair that

Comments are closed.

Social Media Auto Publish Powered By : XYZScripts.com