ತಲೆಗೂದಲು ಕತ್ತರಿಸಿ ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ ಪತಿಯ ಬಂಧನ

ಪತ್ನಿಯ ತಲೆಗೂದಲು ಕತ್ತರಿಸಿ ಸಿಗರೇಟಿನಿಂದ ಸುಟ್ಟಿದ್ದ ಪ್ರಕರಣದ ಆರೋಪಿಯನ್ನು ಪೋಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಯಮಕನಮರಡಿ ಪೋಲೀಸರು ಪತಿ ಅರ್ಜುನ ಸೇರಿ ಮೂವರನ್ನು ಬಂಧಿಸಿದ್ದಾರೆ.

ಬೆಂಗಳೂರು ಲೋಕಾಯುಕ್ತ ಕಚೇರಿಯ ಗುಮಾಸ್ತನ ಕೆಲಸ ಮಾಡುತ್ತಿದ್ದ ಅರ್ಜುನ್‌ ಬಾಗರಾಯ್‌ ಎಂಬಾತ ಕೃತ್ಯ ಎಸಗಿದ್ದು, ನೊಂದ ಪತ್ನಿ ಕಾವೇರಿ ವಾಲಿ ಎಂದು ತಿಳಿದುಬಂದಿದೆ. ಮೂಲತಃ ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದ ನಿವಾಸಿಯಾದ ಅರ್ಜುನ್‌ ಹಾಗೂ  ಕಾವೇರಿ ಕಳೆದ 9 ತಿಂಗಳಿನಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಅರ್ಜುನ್‌ ಪ್ರತಿನಿತ್ಯ ಕುಡಿದು ಬಂದು ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದುದ್ದಲ್ಲದೆ, ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ನಿನ್ನೆ ಸಹ ಕುಡಿದು ಬಂದು ಪತ್ನಿಯ ಕೂದಲು ಕತ್ತರಿಸಿ, ಸಿಗರೇಟ್‌ನಿಂದ ಸುಟ್ಟು, ಚಾಕುವಿನಿಂದ ಹಲ್ಲೆ ಮಾಡಿದ್ದ. ಪತಿಯ ವಿರುದ್ಧ ಕಾವೇರಿ ಯಮಕನಮರಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

One thought on “ತಲೆಗೂದಲು ಕತ್ತರಿಸಿ ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ ಪತಿಯ ಬಂಧನ

  • October 20, 2017 at 11:53 PM
    Permalink

    Side Affects To Amoxicillin Xenical Achat En Ligne Viagra Kauflich Erwerben cialis Viagra From India Cheap Acheter Kamagra Original Amoxicillin Clavum

Comments are closed.