ಪದ್ಮಾವತಿಗಾಗಿ 24 ಬಾರಿ ಏಟು ತಿಂದ ನಟ ರಣವೀರ್‌ ಸಿಂಗ್‌?!!

ದೆಹಲಿ : ಬಾಲಿವುಡ್‌ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಪದ್ಮಾವತಿ.  ಸಂಜಯ್‌ ಲೀಲಾ ಬನ್ಸಾಲಿ ಅವರ ನಿರ್ದೇಶನದ ಈ ಸಿನಿಮಾದಲ್ಲಿ ರಣವೀರ್‌ ಸಿಂಗ್‌ ಹಾಗೂ ದೀಪಿಕಾ ಪಡುಕೋಣೆ ಅಭಿನಯಿಸುತ್ತಿರುವುದು ಎಲ್ಲರಿಗೂ ತಿಳಿದೇ ಇದೆ.

ಈ ಸಿನಿಮಾದಲ್ಲಿ ಪ್ರೇಕ್ಷಕರು ತಪ್ಪು ಕಂಡು ಹಿಡಿಯಬಾರದು, ಸಿನಿಮಾ ಪರ್ಫೆಕ್ಟ್ ಆಗಿ ಬರಬೇಕು ಎಂಬ ಕಾರಣಕ್ಕಾಗಿ ರಣವೀರ್‌ ಸಿಂಗ್‌ ತಮ್ಮ ಸಹ ಕಲಾವಿದ ರಾಝಾ ಮುರಾದ್ ಅವರ ಕೈಯಲ್ಲಿ 24 ಬಾರಿ ಪೆಟ್ಟು ತಿಂದಿದ್ದಾರೆ. ಬಾಲಿವುಡ್‌ ಲೈಫ್‌ ವರದಿ ಪ್ರಕಾರ ದೃಶ್ಯ ಸರಿಯಾಗಿ ಬರಬೇಕು ಎಂಬ ಕಾರಣದಿಂದ ರಣವೀರ್‌ ಸಿಂಗ್‌ 24 ಬಾರಿ ಏಟು ತಿಂದಿದ್ದಾರೆ ಎಂದು ವರದಿ ಮಾಡಿದೆ.

ಈ ಸಿನಿಮಾದಲ್ಲಿ ದೀಪಿಕಾ, ರಾಣಿ ಪದ್ಮಿನಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದು, ರಣವೀರ್‌ ಸಿಂಗ್‌, ಅಲ್ಲಾವುದ್ದೀನ್ ಖಿಲ್ಜಿ ಹಾಗೂ ಶಾಹಿದ್‌ ಕಪೂರ್‌ ರಾವಲ್‌ ರತನ್‌ ಸಿಂಗ್‌ ಪಾತ್ರದಲ್ಲಿ ಮಿಂಚಲಿದ್ದಾರೆ.

 

Comments are closed.

Social Media Auto Publish Powered By : XYZScripts.com