ಗೌಡರನ್ನು ಸಿಎಂ ಆಗಲು ಬಿಡಲ್ಲ : ಡಿಕೆಶಿಗೆ ದೊಡ್ಡಗೌಡರ ಎಚ್ಚರಿಕೆ

ಬೆಂಗಳೂರು : ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಇಂಧನ ಸಚಿವ ಡಿ.ಕೆ ಶಿವಕುಮಾರ್‌ ಅವರನ್ನು ಹೊಗಳಿದ್ದಾರೆ. ಬೆಂಗಳೂರಿನ ವಿವಿ ಪುರಂನ ಕುವೆಂಪು ಕಲಾಕ್ಷೇತ್ರ ಸಭಾಂಗಣದಲ್ಲಿ ಕೃಷಿಕ್‌ ಸರ್ವೋದಯ ಫೌಂಡೇಶನ್‌  ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ದೇವೇಗೌಡರು, ಒಕ್ಕಲಿಗರನ್ನು ಅಷ್ಟು ಸುಲಭವಾಗಿ ಮುಖ್ಯಮಂತ್ರಿಯಾಗಲು ಬಿಡುತ್ತಾರೆ ಎಂದು ತಿಳಿದುಕೊಳ್ಳಬೇಡಿ.

ಅದು ಸುಲಭದ ಮಾತಲ್ಲ. ನಾನು ಅನುಭವಿಸಿದ್ದನ್ನು ಹೇಳುತ್ತಿದ್ದೇನೆ. ನಾವು ಎರಡನೇ ದರ್ಜೆಯಲ್ಲಿದ್ದೇವೆ. ನಮ್ಮನ್ನು ಮೊದಲ ದರ್ಜೆಗೆ ಹೋಗಲು ಬಿಡುವುದಿಲ್ಲ ಎಂದು ಹೇಳುವ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಡಿ.ಕೆ ಶಿವಕುಮಾರ್, ಆರ್‌ ಅಶೋಕ್‌, ಕುಮಾರಸ್ವಾಮಿ ಯಾರಾದರೂ ಸಿಎಂ ಆಗಲಿ. ಅವರವರ ಹಣೆ ಬರಹ ಹೇಗಿರುತ್ತದೋ ಅದೇ ರೀತಿ ಆಗಲಿ ಎಂದಿದ್ದಾರೆ. ನಾನೂ ಕೆಲ ಯೋಜನೆಗಳನ್ನು ಜಾರಿಗೆ ತಂದಿದ್ದೆ. ನಾನು ಒಕ್ಕಲಿಗರ ಪರವಾಗಿದ್ದೇನೆ. ಉಳಿದ ಸಮುದಾಯಗಳು ನನ್ನನ್ನು ವಿರೋಧಿ ಎಂದವು. ರಾಜಕೀಯದಲ್ಲಿ ಮೊದಲಿನಿಂದಲೂ ಈ ಶಿಕ್ಷೆ ಅನುಭವಿಸುತ್ತಲೇ ಬಂದಿದ್ದೇನೆ ಎಂದರು.

ಜೀವನದ ಕೊನೆ ದಿನಗಳಲ್ಲಿ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ಯೋಚನೆ ಮಾಡುತ್ತಿರುತ್ತೇನೆ. ಕಾವೇರಿ ನೀರಿಗಾಗಿ ರೈತರ ಹೋರಾಟದ ಬಗ್ಗೆ ಯೋಚಿಸುತ್ತೇನೆ. ಈ ಸಮಸ್ಯೆ ಬಗೆಹರಿಸಲು ನಮ್ಮಿಂದ ಆಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಎಲ್ಲರೂ ಒಟ್ಟಾಗಿ ಶ್ರಮಿಸುವಂತೆ ಕರೆ ನೀಡಿದ್ದಾರೆ.

 

Comments are closed.

Social Media Auto Publish Powered By : XYZScripts.com