KPL : ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ಗೆ 6 ವಿಕೆಟ್ ಗೆಲುವು

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಪಿಎಲ್ 6 ನೇ ಆವೃತ್ತಿ ಮೊದಲ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್, ಬೆಳಗಾವಿ ಪ್ಯಾಂಥರ್ಸ್ ವಿರುದ್ಧ 6 ವಿಕೆಟ್ ಜಯಗಳಿಸಿದೆ. ಟಾಸ್ ಗೆದ್ದ ಟೈಗರ್ಸ್ ಫೀಲ್ಡಿಂಗ್ ಆರಿಸಿಕೊಂಡಿತು. ನಿಗದಿತ 20 ಓವರುಗಳಲ್ಲಿ ಬೆಳಗಾವಿ 8 ವಿಕೆಟ್ ಕಳೆದುಕೊಂಡು 127 ರನ್ ಮೊತ್ತ ಕಲೆಹಾಕಿತು. ಪ್ಯಾಂಥರ್ಸ್ ಪರವಾಗಿ ಸುನಿಲ್ ಕುಮಾರ್ ಜೈನ್ 39 ರನ್ ಗಳಿಸಿದರು. ಗುರಿಯನ್ನು ಬೆನ್ನತ್ತಿದ ಹುಬ್ಬಳ್ಳಿ 17.5 ಓವರುಗಳಲ್ಲಿ 4 ವಿಕೆಟ್ ಗೆ 128 ರನ್ ಗಳಿಸಿ ಗೆಲುವು ಸಾಧಿಸಿತು. ಹುಬ್ಬಳ್ಳಿ ಪರವಾಗಿ 60 ರನ್ ಗಳಿಸಿದ ಕೆ ವಿ ಸಿದ್ಧಾರ್ಥ್ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.

Comments are closed.

Social Media Auto Publish Powered By : XYZScripts.com