ಬಿಹಾರ ಪ್ರವಾಹಕ್ಕೆ ಹೆಗ್ಗಣಗಳು ಕಾರಣ ಎಂದ ಜಲ ಸಂಪನ್ಮೂಲ ಸಚಿವ ?!

ಪಾಟ್ನಾ : ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, 500 ಮಂದಿ ಸಾವಿಗೀಡಾಗಿರುವ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೆ ಬಿಹಾರದಲ್ಲಿ ಸಂಭವಿಸಿದ ಪ್ರವಾಹಕ್ಕೆ ಹೆಗ್ಗಣಗಳು ಕಾರಣ ಎಂದು ಬಿಹಾರ ಜಲಸಂಪನ್ಮೂಲ ಸಚಿವ ರಾಜೀವ್‌ ರಂಜನ್‌ ಹೇಳಿದ್ದಾರೆ.

ನೀರು ಹರಿದು ಹೋಗದಂತೆ ಜನರು ಮಣ್ಣಿನ ತಡೆಗೋಡೆಯನ್ನು ನಿರ್ಮಿಸಿದ್ದಾರೆ. ಜೊತೆಗೆ ಮನೆಯ ಸುತ್ತ ಮುತ್ತ ಆಹಾರ ಧಾನ್ಯಗಳನ್ನು ಸಂಗ್ರಹಿಸಿಡುತ್ತಾರೆ. ಆಗ ಹೆಗ್ಗಣಗಳು, ಇಲಿಗಳು ಮಣ್ಣಿನ ತಡೆಗೋಡೆಯನ್ನು ಕೊರೆದು ಒಳಗೆ ಬರುತ್ತವೆ. ಇದರಿಂದಾಗಿ ತಡೆಗೋಡೆ ಗಟ್ಟಿತನ ಕಳೆದುಕೊಳ್ಳುತ್ತವೆ. ಪ್ರವಾಹ ಪರಿಸ್ಥಿತಿ ಎದುರಾದಾಗ ಈ ತಡೆಗೋಡೆಗಳು  ಬಿದ್ದುಹೋಗುತ್ತವೆ. ಆದ್ದರಿಂದ ಹೆಚ್ಚಿನ ನೀರು ಹರಿದು ಪ್ರವಾಹ ಉಂಟಾಗುವುದಾಗಿ ಹೇಳಿದ್ದಾರೆ.

ಇಂತಹ ಸಮಸ್ಯೆಗಳನ್ನು ಪರಿಹಾರ ಮಾಡುವ ಸಲುವಾಗಿ ಪ್ರಯತ್ನ ನಡೆಸಿದ್ದೇವೆ. ಹೆಗ್ಗಣಗಳು ಹಾಗೂ ಇಲಿಗಳು ಕೊರೆದಿರುವ ಕಿಂಡಿಗಳನ್ನು ಮುಚ್ಚುವ ಪ್ರಯತ್ನ ನಡೆಸಲಾಗಿದೆ. ಇದರಿಂದ ಅನೇಕ ಪ್ರದೇಶಗಳಿಗೆ ನೀರು ನುಗ್ಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

 

Comments are closed.

Social Media Auto Publish Powered By : XYZScripts.com