ನಾಡಿನೆಲ್ಲೆಡೆ ಬಕ್ರೀದ್‌ ಸಂಭ್ರಮ : ಈದ್ಗಾ ಮೈದಾನದಲ್ಲಿ ಮುಸ್ಲೀಮರ ಸಾಮೂಹಿಕ ಪ್ರಾರ್ಥನೆ

ಬೆಂಗಳೂರು : ಇಂದು ನಾಡಿನೆಲ್ಲೆಡೆ ಮುಸ್ಲಿಂ ಬಾಂಧವರು ಬಕ್ರೀದ್‌ ಹಬ್ಬವನ್ನು ಆಚರಿಸುತ್ತಿದ್ದು, ಬೆಂಗಳೂರಿನಲ್ಲಿ ಬಕ್ರೀದ್‌ ಹಬ್ಬದ ಸಡಗರ ಮನೆ ಮಾಡಿದೆ. ಬೆಂಗಳೂರಿನ ನಂದಿದುರ್ಗ ರಸ್ತೆ ಬಳಿ ಇರುವ ಮಸೀದಿಯಲ್ಲಿ ಮುಸ್ಲೀಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.

ಮುಂಜಾನೆಯಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಬ್ಬದ ಆಚರಣೆಗೆ ಕೊಂಚ ಅಡ್ಡಿ  ಉಂಟಾಗಿದೆ.

 

ಚಾಮರಾಜಪೇಟೆಯ ಈದ್ಗಾ ಮೈದಾನದಲಲ್ಲೂ ಮುಸ್ಲೀಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದು, ಸಮಾರಂಭದಲ್ಲಿ ಶಾಸಕ ಜಮೀರ್‌ ಅಹಮದ್‌, ವಿಧಾನ ಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌ ಭಾಗಿಯಾಗಿದ್ದಾರೆ. ಮಳೆಯ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಾರ್ಥನೆಗೆ ಗೈರಾಗಿದ್ದಾರೆ.

One thought on “ನಾಡಿನೆಲ್ಲೆಡೆ ಬಕ್ರೀದ್‌ ಸಂಭ್ರಮ : ಈದ್ಗಾ ಮೈದಾನದಲ್ಲಿ ಮುಸ್ಲೀಮರ ಸಾಮೂಹಿಕ ಪ್ರಾರ್ಥನೆ

Comments are closed.