ಹೆಬ್ಬಾಳ್ಕರ್ ಅವರನ್ನು ಖಂಡಿಸದೆ ಕಾಂಗ್ರೆಸಿಗರು ನಾಡಿಗೆ ದ್ರೋಹ ಬಗೆಯುತ್ತಿದ್ದಾರೆ : ಈಶ್ವರಪ್ಪ

ಬಳ್ಳಾರಿ: ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಬಾಗಲಕೋಟೆ ವಿಳಾಸ ನೀಡಿ ಟಿಎಡಿಎ ಪಡೆಯುತ್ತಿರುವ ಆರ್.ಬಿ.ತಿಮ್ಮಾಪುರ ಅವರು ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಲ್ಲಿನ ವಿಳಾಸ ನೀಡಿ ಮತ ನೀಡಿ‌ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ. ಅಂತಹವರಿಗೆ ಸಚಿವ ಸಂಪುಟಕ್ಕೆ ಬಂಢತನದಿಂದ ಸೇರಿಸಿಕೊಂಡರೆ ನ್ಯಾಯಾಲಯದ ಮೂಲಕ ಹೋರಾಟ ನಡೆಸಿ ಜೈಲಿಗೆ ಕಳಿಸಲಿದೆಂದರು.

ಇದೇ ರೀತಿ ಕಾಂಗ್ರೆಸ್ ನ ಇನ್ನಿತರ 8 ಜನರು ಸಹ ಇದೇ ರೀತಿ ಅಪಚಾರ ಮಾಡಿದ್ದಾರೆ ಅವರ ವಿರುದ್ದವೂ ಕ್ರಮ ಜರುಗಬೇಕೆದೆಂದರು. ರಾಜ್ಯಪಾಲರಿಗೂ ಅವರನ್ನು ಸಚಿವರನ್ನಾಗಿ ಮಾಡುವ ಪಟ್ಟಿಗೆ ಅನುಮೋದನೆ ಮಾಡಬಾರದೆಂದು ಮನವಿ‌ಮಾಡುವೆ ಎಂದರು. ಸೆ.4 ರಂದು ಬೆಂಗಳೂರಿನಲ್ಲಿ ಪಕ್ಷದ  ಚಿಂತನಾ ಸಭೆ ನಡೆಸಿ ಇದು ಕುರಿತಂತೆ ಪಕ್ಷವನ್ನು ಬರುವ ಚುನಾವಣೆಯಲ್ಲಿ ಗೆಲುವಿನ ತಂತ್ರಗಳ ಬಗ್ಗೆ ಚರ್ಚಿಸಲಿವೆ ಎಂದರು.

ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಹಾರಾಷ್ಟ್ರಕ್ಕೆ ಕನ್ನಡದ ಬೆಳಗಾವಿ ಸೇರಿಸುವ ಬಗೆಗಿನ ಹೇಳಿಕೆಯನ್ನು ಖಂಡಿಸುತ್ತೇನೆ. ಇಂತಹ ಹೇಳಿಕೆಯನ್ನು ಮುಖ್ಯಮಂತ್ರಿ ಆದಿಯಾಗಿ ಕಾಂಗ್ರೆಸ್ ನಾಯಕರು, ಸಚಿವರು ಹೆಬ್ಬಾಳ್ಕರ್ ಹೇಳಿಕೆಯನ್ನು ಖಂಡಿಸದೆ ಕನ್ನಡ ನಾಡಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಛೇಡಿಸಿದರು.

Comments are closed.