ಕಿಚ್ಚ ಸುದೀಪ್‌ ನಟನೆಯ ‘ಪೈಲ್ವಾನ್’ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌

ಬೆಂಗಳೂರು : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರ ಪೈಲ್ವಾನ್‌ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ ಮಾಡಲಾಗಿದೆ. ಸೆಪ್ಟಂಬರ್‌ 2ರಂದು ಸುದೀಪ್‌ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಸಿನಿಮಾದ ಫಸ್ಟ್ ಲುಕ್ ರಿಲೀಸ್‌ ಮಾಡುವುದಾಗಿ ಚಿತ್ರದ ನಿರ್ದೇಶಕ ಕೃಷ್ಣ ಹೇಳಿದ್ದರು. ಅದರಂತೆ ಹುಟ್ಟುಹಬ್ಬಕ್ಕೂ ಮುನ್ನಾ ದಿನವಾದ ಇಂದು ಅಭಿಮಾನಿಗಳಿಗೆ ಪೈಲ್ವಾನನ ದರ್ಶನವಾಗಿದೆ.

ಕುಸ್ತಿ, ಹಾಗೂ ಬಾಕ್ಸಿಂಗ್‌ ಕುರಿತಾದ ಚಿತ್ರ ಇದಾಗಿದ್ದು, ಆರ್‌ಆರ್‌ಆರ್‌ ಮೋಷನ್‌ ಪಿಕ್ಟರ್‌ ಬ್ಯಾನರ್‌ನಡಿ ಈ ಸಿನಿಮಾ ಮೂಡಿ ಬರುತ್ತಿದೆ. ಚಿತ್ರದ ನಿರ್ದೇಶಕರಾಗಿರುವ ಆರ್‌. ಕೃಷ್ಣ ಅವರೆ ಸಿನಿಮಾದ ಚಿತ್ರಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ.

Comments are closed.

Social Media Auto Publish Powered By : XYZScripts.com