ಬ್ಲೂ ವೇಲ್ ಚಾಲೆಂಜ್ : ‘ ಒಮ್ಮೆ ಒಳಹೋದರೆ ಹೊರಬರಲು ಸಾಧ್ಯವೇ ಇಲ್ಲ ‘ : ಡೆತ್ ನೋಟ್ ಬರೆದು ಯುವಕ ಆತ್ಮಹತ್ಯೆ

ಮುಂಬೈ, ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶದ ನಂತರ ಬ್ಲೂ ವೇಲ್ ಗೇಮ್ ಗೆ ಮದುರೈನಲ್ಲಿ ಮತ್ತೊಬ್ಬ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 19 ವರ್ಷದ ವಿಘ್ನೇಶ್ ತನ್ನ ಮನೆಯಲ್ಲಿ ನೇಣು ಹಾಕಿಕೊಂಡಿದ್ದು ಆತನ ಎಡಗೈ ಮೇಲೆ ತಿಮಿಂಗಿಲದ ಚಿತ್ರ ಬರೆದುಕೊಂಡು, ಕೆಳಗೆ ಬ್ಲೂ ವೇಲ್ ಎಂದು ಬರೆದಿದ್ದು, ತಿಳಿದುಬಂದಿದೆ. ಡೆತ್ ನೋಟ್ ಕೂಡ ದೊರೆತಿದ್ದು ಅದರಲ್ಲಿ ಆತ ‘ಇದು ಒಂದು ಆಟವಲ್ಲ, ಡೇಂಜರ್.. ಒಂದು ಸಲ ಹೋದ್ರೆ ಹೊರಬರಲು ಸಾಧ್ಯವೇ ಇಲ್ಲ ‘ ಎಂದು ಹೇಳಿದ್ದಾನೆ.

Madurai: Blue Whale challenge kills college student; suicide note says, 'once you enter, you can never exit'

ವಿಘ್ನೇಶ್ ಎರಡನೇ ವರ್ಷದ ಬಿ.ಕಾಮ್ ವಿದ್ಯಾರ್ಥಿಯಾಗಿದ್ದ. ತಮಿಳನಾಡಿನಲ್ಲಿ ಈ ಆಟಕ್ಕೆ ಬಲಿಯಾದ ಮೊದಲ ಪ್ರಕರಣ ಇದಾಗಿದೆ.

ಎಲ್ಲೋ ಕುಳಿತು ನಿಯಂತ್ರಿಸುತ್ತಿರುವ ಒಬ್ಬ ನಿರಂತರವಾಗಿ ನಿಮ್ಮನ್ನು ನೀವೇ ಹಿಂಸೆ ಮಾಡಿಕೊಳ್ಳುವಂತಹ ಅಪಾಯಕಾರಿ ಸೂಚನೆಗಳನ್ನು ಕೊಡುತ್ತಾ ಹೋಗುತ್ತಾನೆ. ಸುಮಾರು 50 ದಿನಗಳವರೆಗೆ ನಡೆಯುವ ಈ ಚಾಲೆಂಜ್ ಕೊನೆಯ ದಿನ ಬಿಲ್ಡಿಂಗ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವಂತೆ ಸೂಚನೆ ನೀಡುತ್ತದೆ.

Comments are closed.

Social Media Auto Publish Powered By : XYZScripts.com