ಡೇರಾ ಸಚ್ಚಾ ಸೌಧದ ಉತ್ತರಾಧಿಕಾರಿಯಾಗಿ ಗುರ್ಮಿತ್‌ ಬಾಬಾ ಪುತ್ರ ಜಸ್ಮೀತ್‌ ನೇಮಕ ?

ಚಂಡೀಗಢ : ಗುರ್ಮಿತ್ ರಾಂ ರಹೀಮ್ ಬಾಬಾಗೆ ನ್ಯ್ಯಾಯಾಲಯ 20 ವರ್ಷ ಶಿಕ್ಷೆ ವಿಧಿಸಿದ್ದು, ಗುರ್ಮಿತ್‌ ಪುತ್ರ ಜಸ್ಮೀತ್‌ನನ್ನು ಡೇರಾ ಸಚ್ಚಾ ಸೌದದ ಉತ್ತರಾಧಿಕಾರಿಯನ್ನಾಗಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಗುರುವಾರ ಜಸ್ಮೀತ್‌ ಡೇರಾ ಆಶ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾನೆ.

ಇದಕ್ಕೆ ಗುರ್ಮಿತ್‌ ತಾಯಿ ನಸೀಬ್‌ ಕೌರ್ ಹಾಗೂ ಹೆಂಡತಿ ಹರ್ಜಿತ್‌ ಕೌರ್‌ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ.

ಜಸ್ಮೀತ್‌ನನ್ನು ಡೇರಾ ಉತ್ತರಾಧಿಕಾರಿಯನ್ನಾಗಿ ನೇಮಿಸಿರುವ ವಿಷಯ ಸಂಬಂಧ ನಸೀಬ್‌ ಹಾಗೂ ಹರ್ಜಿತ್‌ ಗುರ್ಮಿತ್ ನನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಕುರಿತು ಡೇರಾ ಮ್ಯಾನೇಜ್‌ ಮೆಂಟ್‌ ಹೇಳಿಕೆ ನೀಡಿದ್ದು, ಎಲ್ಲಾ ವರದಿಯನ್ನು ಅಲ್ಲಗಳೆದಿದೆ. ಜೊತೆಗೆ ವಿಶೇಷ ಸಿಬಿಐ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ರದ್ದು ಮಾಡುವಂತೆ ಕೋರಿ ಹೈಕೋರ್ಟ್‌ ಮೆಟ್ಟಿಲೇರುವುದು ನಮ್ಮ ಮೊದಲ ಗುರಿ ಎನ್ನಲಾಗಿದೆ.

Comments are closed.