ಲಕ್ಷ್ಮೀ ಹೆಬ್ಬಾಳ್ಕರ್​ ಜೈ ಮಹಾರಾಷ್ಟ್ರ : ಇಕ್ಕಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ..

ಕನ್ನಡ  ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟಾಳುವಿನಂತೆ ಮಾತನಾಡಿ ಬೀಗುತ್ತಿದ್ದರು. ಆದ್ರೆ ಈಗ ಅವರಿಗೇ ಇಕ್ಕಟ್ಟಿನಲ್ಲಿ ಸಿಗುವಹಾಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್​ ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ. ಅದು ಕೇವಲ ಸಿದ್ದರಾಮಯ್ಯ ಮಾತ್ರವಲ್ಲ ಇಡೀ ಕಾಂಗ್ರೆಸ್​ಗೆ ಇರುಸುಮುರುಸಾಗಿದೆ. ಜೊತೆಗೆ ಪ್ರತಿಪಕ್ಷಗಳು ವಾಗ್ದಾಳಿ  ಆರಂಭಿಸಿವೆ. ಆದರೆ ಇಂಧನ ಸಚಿವ ಡಿ ಕೆ ಶಿವಕುಮಾರ್ ಮಾತ್ರ ಲಕ್ಷ್ಮೀ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಕನ್ನಡ ಪ್ರೀತಿಯನ್ನ ಯಾರೂ ಪ್ರಶ್ನೆ ಮಾಡುವಂತಿಲ್ಲ. ಆದ್ರೆ ಸದಾ ಕನ್ನಡದ ಪರವಾಗಿಯೇ ಮಾತನಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇರುಸುಮುರುಸಾಗುವ ರೀತಿ ಕಾಂಗ್ರೆಸ್​ ಪಕ್ಷದ ಮಹಿಳಾ ಘಟಕದ ಉಪಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿಕೆ ನೀಡಿದ್ದಾರೆ… ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ನಾನೇ ಮೊದಲು ಜೈ ಮಹಾರಾಷ್ಟ್ರ ಎಂದು ಹೇಳ್ತೀನಿ ಅಂದಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಜೊತೆಗೆ ಕಾಂಗ್ರೆಸ್​ ನಾಯಕರಿಗೂ ಇದು ಕಿರಿಕಿರಿ ಉಂಟು ಮಾಡಿದೆ..

ಇತ್ತೀಚೆಗೆ ಕನ್ನಡಕ್ಕೆ ಪ್ರತ್ಯೇಕ ಬಾವುಟದ ಬಗ್ಗೆ ದಾಳ ಉರುಳಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷಗಳನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದರು. ಆದ್ರೆ ಲಕ್ಷ್ಮೀ ಹೆಬ್ಬಾಳ್ಕರ್​ ಮಾಡಿರುವ ಯಡವಟ್ಟು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್​ ಸೇರಿದಂತೆ ಎಲ್ಲ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ರೆ ನಾನೇ ಮೊದಲು ಜೈ ಮಹಾರಾಷ್ಟ್ರ ಹೇಳ್ತೀನಿ ಎಂದಿರುವ ಬಗ್ಗೆ ಬಿಜೆಪಿ ನಾಯಕರು ಕೆಂಡಾ ಮಂಡಲವಾಗಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ಚುನಾವಣೆ ವೇಳೆ ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡ ಪ್ರೀತಿ ತೋರಿಸ್ತಾರೆ. ಧ್ವಜದ ವಿಚಾರದಲ್ಲಿ, ಹಿಂದಿ ಹೇರಿಕೆ ವಿಚಾರದಲ್ಲಿ ಕೇಂದ್ರಕ್ಕೆ ಪತ್ರ ಬರೆದ್ರು. ಆದ್ರೆ ಹೇಬ್ಬಾಳ್ಕರ್​ ಹೇಳಿಕೆ ಬಗ್ಗೆ ನಿಲುವೇನು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು. ಮಹಾರಾಷ್ಟ್ರಿಗರು ಪುಂಡಾಟಿಕೆ ಮಾಡಿದ್ರೆ ಏನು ಕ್ರಮ ಕೈಗೊಳ್ತಾರೋ ಅದೇ ಕ್ರಮ ಕೈಗೊಳ್ಳಬೇಕು. ಕನ್ನಡದ ನೆಲದಲ್ಲಿ ನಿಂತು ಕನ್ನಡಿಗರಿಗೆ ಅವಮಾನವಾಗುವ ರೀತಿ ಹೇಳಿಕೆ ನೀಡಿದ್ರೆ ಸಹಿಸೊಲ್ಲ. ಈ ಹೇಳಿಕೆಯಿಂದ ಕಾಂಗ್ರೆಸ್​ ಗೋಸುಂಬೆತನ ಬಹಿರಂಗವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳದೆ ಹೋದ್ರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ರು.

ಇನ್ನು ಲಕ್ಷ್ಮೀ ಹೆಬ್ಬಾಳ್ಕರ್​  ಮಾತನಾಡಿ, ನಾನು ಕನ್ನಡ ವಿರೋಧಿಯಾದ ಹೇಳಿಕೆ ನೀಡಿಲ್ಲ. ನನ್ನ ವಿರುದ್ಧ ನಮ್ಮ ಜಿಲ್ಲೆಯ ಕೆಲವು ನಾಯಕರೇ ಈ ರೀತಿ ಮಾಡಿಸಿದ್ದಾರೆ. ನಾನು ಮಾಡಿದ ಭಾಷಣದ ಪೂರ್ಣ ವಿವರ ಬಹಿರಂಗಪಡಿಸದೆ ಕೇವಲ ಕೆಲವು ತುಣುಕು ಬಿಟ್ಟು ವಿವಾದ ಸೃಷ್ಟಿಸಿ, ನನಗೆ ನಮ್ಮ ಪಕ್ಷಕ್ಕೆ ಕೆಟ್ಟ ಹೆಸರು ತರುವ ಯತ್ನ ನಡೆಸಿದ್ದಾರೆಂದು ಹೇಳಿದ್ದು, ನನ್ನ ಹೇಳಿಕೆಯಿಂದ ಯಾರಿಗಾದ್ರೂ ನೋವಾದ್ರೆ ಕ್ಷಮೆ ಇರಲಿ ಎಂದಿದ್ದಾರೆ.

ಆದ್ರೆ ಹೆಬ್ಬಾಳ್ಕರ್​ ಹೇಳಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾದ್ಯಮಗಳ ಜೊತೆಗೆ ಮಾತನಾಡಿ, ಹೆಬ್ಬಾಳ್ಕರ್​ ಹಾಗೆ ಹೇಳಿರಲಿಕ್ಕಿಲ್ಲ. ಅವ್ರ ವಿರುದ್ಧ ಪಿತೂರಿ ನಡೆದಿರಬಹುದು. ಬಿಜೆಪಿ ಹಾಗೂ ಎಂ.ಇ.ಎಸ್​. ಸೇರಿ ಪಿತೂರಿ ನಡೆಸಿರಬಹುದು ಎಂದು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಸಚಿವ ಡಿ.ಕೆ.ಶಿವಕುಮಾರ್​ ಕೂಡ ಲಕ್ಷ್ಮೀ ಹೆಬ್ಬಾಳ್ಕರ್​ ಅವರನ್ನು ಸಮರ್ಥಿಸಿಕೊಂಡಿದ್ದು ಹೆಬ್ಬಾಳ್ಕರ್​ ತಪ್ಪು ಮಾಡಿಲ್ಲ. ಅವರನ್ನ ತೇಜೋವಧೆ ಮಾಡಲು ಯತ್ನ ನಡೆದಿದೆ. ಅವರು ಮಾತನಾಡಿದ ಫುಲ್​ ವಿಡಿಯೋ ಪ್ರಸಾರ ಮಾಡಿ, ನಾನು ಇಡೀ ಭಾಷಣದ ವಿಡಿಯೋ ತರಿಸಿ ನೋಡಿದ್ದೇನೆ. ಯುವಕರಿಗೆ ಬುದ್ದಿ ಹೇಳುವ ಕೆಲಸ ಮಾಡಿದ್ದಾರೆ ಎಂದ್ರು. ಹೆಬ್ಬಾಳ್ಕರ್​ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್​ ಗುಂಡೂರಾವ್​ ಸಹ  ಶಿವಕುಮಾರ್​ ದಾಟಿಯಲ್ಲಿ ಮಾತನಾಡಿದ್ದಾರೆ. 

ಕೇವಲ ಮಾದ್ಯಮಗಳ ಮುಂದಲ್ಲದೆ ಕೆಪಿಸಿಸಿ ಸಭೆಯಲ್ಲೂ ಹೆಬ್ಬಾಳ್ಕರ್​ ವಿಚಾರ ತೀವ್ರ ಚರ್ಚೆಗೆ ಈಡಾಗಿದೆ. ರಾಜ್ಯ ಉಸ್ತುವಾರಿ ವೇಣುಗೋಪಾಲ್, ಸಭೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ಆದ್ರೆ ಈ ವೇಳೆ ಸಚಿವ ಡಿ.ಕೆ.ಶಿವಕುಮಾರ್​ ಕೆಲವರು ತೇಜೋವಧೆಗಾಗಿ ಈ ರೀತಿ ತಂತ್ರ ಮಾಡಿದ್ದಾರೆ. ನಾನು ಭಾಷಣ ಪೂರ್ತಿ ತರಿಸಿ ನೋಡಿದ್ದೇನೆಂದು ಸಮರ್ಥಿಸಿಕೊಂಡಿದ್ದಾರೆ. ಪಕ್ಷದೊಳಗೆ ಹೆಬ್ಬಾಳ್ಕರ್​ ರನ್ನು ಕೆಲವು ನಾಯಕರು ಸಮರ್ಥನೆ ಮಾಡಿಕೊಂಡರೂ ಕೂಡ ಹೊರಗಡೆ ರಾಜಕೀಯ ವಲಯದಲ್ಲಿ ಕಾಂಗ್ರೆಸ್​ ಹಾಗೂ ಹೆಬ್ಬಾಳ್ಕರ್ ವಿರುದ್ಧ ವ್ಯಾಪಕ ಟೀಕೆಗೆ ವ್ಯಕ್ತವಾಗಿದೆ. 

One thought on “ಲಕ್ಷ್ಮೀ ಹೆಬ್ಬಾಳ್ಕರ್​ ಜೈ ಮಹಾರಾಷ್ಟ್ರ : ಇಕ್ಕಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ..

  • October 21, 2017 at 2:10 AM
    Permalink

    Propecia 0 5 Viagra Et Dapoxetine viagra Viagra 100mg Filmtabletten Beipackzettel Erfahrungen Cialis Ohne Rezept

Comments are closed.

Social Media Auto Publish Powered By : XYZScripts.com