ನಟ ದರ್ಶನ್ ಕಾಂಗ್ರೆಸ್ ಸೇರ್ಪಡೆ ವಿಚಾರ : ಮುಳುಗುತ್ತಿರೋ ಕಾಂಗ್ರೆಸ್‌ನ ದೋಣಿ ಏರಬೇಡಿ : ಸಿ.ಟಿ ರವಿ

ಬಾಗಲಕೋಟೆ : ನಟ ದಶ೯ನ ಕಾಂಗ್ರೆಸ್ ಸೇರುವ ವಿಚಾರ ಕುರಿತಂತೆ ಬಿಜೆಪಿ ಮುಖಂಡ ಸಿ.ಟಿ ರವಿ ಹೇಳಿಕೆ ನೀಡಿದ್ದಾರೆ. ನಮ್ಮ ಕಾರ್ಯಕರ್ತರೇ ನಮಗೆ ರಿಯಲ್ ಸ್ಟಾರ್‌ಗಳು. ಎಂತಹ ಸ್ಟಾರ್ ಗಳನ್ನಾದ್ರೂ ಎದುರಿಸೋ ಶಕ್ತಿ ನಮ್ಮ ಕಾಯ೯ಕತ೯ರಿಗಿದೆ.

ದಶ೯ನ್ ಕಾಂಗ್ರೆಸ್ ಸೇರುವ ಮೂಖ೯ತನ ಮಾಡಲು ಹೋಗೋದಿಲ್ಲ ಅನ್ನೋ ನಂಬಿಕೆ ನನಗಿದೆ. ಮುಳುಗುತ್ತಿರುವ ಕಾಂಗ್ರೆಸ್ ಎಂಬ ಹಡಗನ್ನ ಏರುವಂತಹ ಕೆಲಸವನ್ನ ಯಾವ ಬುದ್ದಿವಂತರೂ ಮಾಡೋದಿಲ್ಲ. ದಶ೯ನ್ ಬುದ್ದಿವಂತರೂ ಅನ್ನೋ ನಂಬಿಕೆ ನನಗಿದೆ. ಹೀಗಾಗಿ ಅವರು ಕಾಂಗ್ರೆಸ್ ಸೇರೋದಿಲ್ಲ ಎಂಬ ಅಭಿಪ್ರಾಯ ನನಗಿದೆ ಎಂದಿದ್ದಾರೆ.

ಇನ್ನು ರಮಾನಾಥ ರೈ ಗೆ ಗೃಹ ಖಾತೆ ನೀಡುವ ವಿಚಾರ ಕುರಿತಂತೆ ಹೇಳಿಕೆ ನೀಡಿರುವ ರವಿ, ರಮಾನಾಥ ರೈಗೆ ಗೃಹಖಾತೆ ಕೊಟ್ಟರೆ ಈ ರಾಜ್ಯದ ಗ್ರಹಚಾರ. ಗ್ರಹಚಾರ ಕೆಟ್ಟಿದ್ದರೆ ಅವರಿಗೆ ಗೃಹಖಾತೆ ಕೊಡಲಿ.ನಾಲಗೆ ಮತ್ತು ತಲೆಯ ಮೇಲೆ ಹಿಡಿತ ಇಲ್ಲದವರಿಗೆ ಈ ಖಾತೆ ನೀಡೋದು ಸರಿಯಲ್ಲ. ನಮಗೇನು ಭಯವಿಲ್ಲ ಆದ್ರೆ ರಾಜ್ಯದ ಜನರ ಪರಿಸ್ಥಿತಿ ಏನಾಗಬೇಡ. ರಾಜ್ಯ ಹಾಳಾಗಿ ಹೋಗುತ್ತದೆ ಎಂದಿದ್ದಾರೆ.

Comments are closed.

Social Media Auto Publish Powered By : XYZScripts.com