ಮಾರುಕಟ್ಟೆಗೆ ಲಗ್ಗೆಯಿಡಲು ಸಿದ್ದವಾಗಿದೆ ಪತಂಜಲಿಯ ‘ದಿವ್ಯ ಜಲ’

ದೆಹಲಿ : ಪತಂಜಲಿ ಉತ್ಪನ್ನಗಳ ಮೂಲಕ ದೇಶದ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಠಿ ಮಾಡಿರುವ ಬಾಬಾ ರಾಂ ದೇವ್ ಈಗ ಪತಂಜಲಿಯ ದಿವ್ಯ ಜಲವನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಪತಂಜಲಿ ಬಾಟಲ್ ನೀರನ್ನು ಈ ಬಾರಿಯ ದೀಪಾವಳಿ ವೇಳೆ ಗ್ರಾಹಕರಿಗೆ ಪರಿಚಯಿಸುತ್ತಿದ್ದು, ಇದಕ್ಕೆ ದಿವ್ಯ ಜಲ ಎಂದು ಹೆಸರಿಡಲಾಗಿದೆ.

ಇನ್ನು ಮೂರು ತಿಂಗಳ ಒಳಗೆ ರಾಷ್ಟ್ರವ್ಯಾಪಿ ದಿವ್ಯ ಜಲ ಗ್ರಾಹಕರಿಗೆ ಲಭ್ಯವಾಗಲಿದ್ದು, 2018-19ರ ವೇಳೆಗೆ 1000ಕೋಟಿ ವ್ಯವಹಾರ ನಡೆಸುವ ಗುರಿ ಹೊಂದಿರುವುದಾಗಿ ರಾಂದೇವ್‌ ಪರ ವಕ್ತಾರ ಎಸ್‌.ಕೆ ತಿಜರವಾಲಾ ಹೇಳಿದ್ದಾರೆ.

ಹರಿದ್ವಾರ ಹಾಗೂ ಲಖನೌದಲ್ಲಿ ಕುಡಿಯುವ ನೀರಿನ ಬಾಟಲ್‌ ಪ್ಯಾಕ್‌ ಮಾಡಲಾಗುತ್ತದೆ. ಬಾಟಲ್‌ ತಯಾರಿಕೆಗೆ ಬೇರೆ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳುವ ಯೊಚನೆ ಇರುವುದಾಗಿ ಹೇಳಿದ್ದಾರೆ.

ಲಖನೌದಲ್ಲಿ ಪ್ರತಿನಿತ್ಯ 1ಲಕ್ಷ ನೀರನ್ನು ಬಾಟಲ್‌ನಲ್ಲಿ ಪ್ಯಾಕ್‌ ಮಾಡುವ ಸಾಮರ್ಥ್ಯ ಹೊಂದಿದ್ದು, ಇದಕ್ಕಾಗಿ 7,040 ಕೋಟಿ ಹೂಡಿಕೆ ಮಾಡಬೇಕಾಗುತ್ತದೆ. 2021ರ ಒಳಗೆ 15,080 ಕೋಟಿ ವಹಿವಾಟು ನಡೆಸುವ ಗುರಿ ಹೊಂದಿರುವುದಾಗಿ ಹೇಳಲಾಗಿದೆ. ಸದ್ಯ ಬಾಟಲ್‌ ನೀರಿನ ಉದ್ಯಮದಲ್ಲಿ ಮುಂಬೈನ ಬಿಸ್ಲೆರಿ ಕಂಪನಿ ಅಗ್ರ ಸ್ಥಾನದಲ್ಲಿದ್ದು, ಅದನ್ನು ಬದಿಗಟ್ಟಿ ತನ್ನ ಪಾರುಪತ್ಯ ಮೆರೆಯಲು ಬಾಬಾ ರಾಂದೇವ್‌ ಮುಂದಾಗಿದ್ದಾರೆ.

ಈಗಾಗಲೆ ಪತಂಜಲಿ ಉತ್ಪನ್ನ, ಹೋಟೆಲ್ , ಪತಂಜನಿ ಜೀನ್ಸ್ ಮುಂತಾದವುಗಲ ಮೂಲಕ ಜನರಿಗೆ ಚಿರಪರಿಚಿತರಾಗಿರುವ ಯೋಗಗುರು ಬಾಬಾ ರಾಂದೇವ್‌ ಈಗ ದಿವ್ಯ ಜಲವನ್ನು ಮಾರುಕಟ್ಟೆಗೆ ತರುವ ಸಿದ್ದತೆ ನಡೆಸಿದ್ದಾರೆ.

 

One thought on “ಮಾರುಕಟ್ಟೆಗೆ ಲಗ್ಗೆಯಿಡಲು ಸಿದ್ದವಾಗಿದೆ ಪತಂಜಲಿಯ ‘ದಿವ್ಯ ಜಲ’

  • October 21, 2017 at 12:59 AM
    Permalink

    Priligy Tratamiento Sirve Comprar Propecia En cialis Presentazione Levitra Kamagra Vente Libre

Comments are closed.

Social Media Auto Publish Powered By : XYZScripts.com