ಫಸ್ಟ್ ಟೈಮ್ ಬಹುಭಾಷೆಯಲ್ಲಿ ಮಿಂಚಲಿದ್ದಾರೆ ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು: ರಾಕಿಂಗ್ ಸ್ಟಾರ್ ಸಿನಿಮಾ ಬಂದು ಬಹಳ ದಿನಗಳಾಯ್ತು ಅಂತ ಅನಿಸುತ್ತಿರಬೇಕಲ್ವಾ..? ಅವ್ರ ಅಭಿಮಾನಿಗಳನ್ನ ಕೇಳಿದ್ರೆ ಹೌದು ಅನ್ನದೇ ಇರೋದಿಲ್ಲ. ಯಾಕಂದ್ರೆ ಸಂತು ಸ್ಟ್ರೈಟ್ ಫಾರ್ವರ್ಡ್ ಬಳಿಕ ಮತ್ತೆ ಯಶ್ ಸಿನಿಮಾ ಯಾವುದೂ ರಿಲೀಸ್ ಆಗಿಲ್ಲ. ಆದ್ರೂ ಈ ಬಾರೀ ದೊಡ್ಡ ಸುದ್ದಿಯನ್ನೇ ಹೊತ್ತು ಬಂದಿದ್ದಾರೆ. ಅದೇನು ಅಂತ ನೀವೇ ನೋಡಿ.

 

 

ಹೌದು.. ಇದು ಕೆ ಜಿ ಎಫ್ ಚಿತ್ರದ ಸೆಕೆಂಡ್ ಪೋಸ್ಟರ್. ಇಲ್ಲಿವರೆಗೂ ಕೇವಲ ಕನ್ನಡದಲ್ಲೇ ಈ ಸಿನಿಮಾ ಬರುತ್ತೆ ಅಂದ್ಕೊಂಡವ್ರಿಗೆ ಚಿತ್ರತಂಡ ಸಪ್ರೈಸ್ ಮಾಡಿದೆ. ಇದೇ ಕಾರಣಕ್ಕೆ ಅವ್ರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಯಶ್ ಇದೇ ಮೊದಲ ಬಾರಿಗೆ ನಾಲ್ಕು ಭಾಷೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ಪ್ರಮುಖ ಭಾಷೆಯಾಗಿದ್ರೆ, ಹಿಂದಿ ಸೇರಿದಂತೆ ತಮಿಳು, ತೆಲುಗಿನಲ್ಲಿ ಈ ಕೆ ಜಿ ಎಫ್ ಸಿನಿಮಾ ರಿಲೀಸ್ ಆಗಲಿದೆ.

ಅಂದ್ಹಾಗೆ ಇಲ್ಲಿ ರಾಕಿಂಗ್ ಎಂಬತ್ತರ ದಶಕದ ಆಸು-ಪಾಸಿನಲ್ಲಿ ಹುಟ್ಟಿಕೊಳ್ಳೊ ಕತೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೋಸ್ಟರ್ ನೋಡಿದ್ರೆನೇ ಯಶ್ ರದ್ದು ರಗಡ್ ಲುಕ್ ಅಂತ ಹೇಳಿ ಬಿಡಬಹುದು.

ಹೊಂಬಾಳೆ ಫಿಲಂಸ್ ಅಡಿಯಲ್ಲಿ ನಿರ್ಮಾಣಗೊಳ್ತಿರೋ ಕೆಜಿಎಫ್ ಅನ್ನ ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. ಏನೇ ಇದ್ರೂ ಸದ್ಯಕ್ಕೆ ಪೋಸ್ಟರ್ ನೋಡಿ ಎಂಜಾಯ್ ಮಾಡಿ. ಸದ್ಯದಲ್ಲೇ ಸಿನಿಮಾ ನೋಡೋ ಛಾನ್ಸ್ ಕೂಡ ಸಿಗುತ್ತೆ.

2 thoughts on “ಫಸ್ಟ್ ಟೈಮ್ ಬಹುಭಾಷೆಯಲ್ಲಿ ಮಿಂಚಲಿದ್ದಾರೆ ರಾಕಿಂಗ್ ಸ್ಟಾರ್ ಯಶ್

  • October 18, 2017 at 2:12 PM
    Permalink

    I have learned some significant things through your blog post. One other thing I would like to convey is that there are several games available on the market designed particularly for preschool age youngsters. They involve pattern acknowledgement, colors, creatures, and styles. These typically focus on familiarization in lieu of memorization. This makes little kids engaged without feeling like they are studying. Thanks

  • October 20, 2017 at 9:52 PM
    Permalink

    Needless expenses, own life is always filled with arguing love.

Comments are closed.

Social Media Auto Publish Powered By : XYZScripts.com