ಚಿರು, ಬಾಲಯ್ಯನ ಸಿನಿಮಾಗಳಿಗೆ ನಯನತಾರ ಆಯ್ಕೆ ಆಗೋಕೆ ಅಸಲಿ ಕಾರಣ ಏನ್ ಗೊತ್ತಾ..?

ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ 151ನೇ ಸಿನಿಮಾ ಮತ್ತು ನಟಸಿಂಹ ಬಾಲಯ್ಯನ 102ನೇ ಚಿತ್ರದಲ್ಲಿ ನಯನತಾರ ನಾಯಕಿಯಾಗಿ ಅಭಿನಯಿಸ್ತಿದ್ದಾಳೆ. ಎರಡೂ ಕೂಡ ಸೌತ್ ಸಿನಿ ಇಂಡಸ್ಟ್ರಿಯ ಬಹುನಿರೀಕ್ಷಿತ  ಚಿತ್ರಗಳೇ. ಅದ್ರಲ್ಲೂ ಚಿರು ನಟನೆಯ  ಸೈರಾ ನರಸಿಂಹ ರೆಡ್ಡಿ ಐತಿಹಾಸಿಕ ಸಿನಿಮಾದಲ್ಲಿ ಅಮಿತಾಬ್, ಸುದೀಪ್, ವಿಜಯ್ ಸೇತುಪತಿ, ಜಗಪತಿ ಬಾಬುರಂತಹ ಘಟಾನುಘಟಿ ಕಲಾವಿದರು ಕಾಣಿಸಿಕೊಳ್ತಿದ್ದಾರೆ. ಈ ಚಿತ್ರದ ನಾಯಕಿ ಪಾತ್ರಕ್ಕೆ ಸಾಕಷ್ಟು ನಟಿಯರ ಹೆಸರು ಕೇಳಿಬಂತಾದ್ರೂ, ಕೊನೆಗೆ ನಯನ್ ಫೈನಲ್ ಆಗಿದ್ದಾಳೆ. ಆಕೆ ಈ ದೊಡ್ಡ ಪ್ರಾಜೆಕ್ಟ್ ಒಪ್ಪಿಕೊಳ್ಳೊಕೆ ಭಾರಿ ಸಂಭಾವನೆ ಡಿಮ್ಯಾಂಡ್ ಮಾಡಿದ್ಲು ಅಂತ ಸುದ್ದಿಯಾಗಿತ್ತು. ಅಷ್ಟಾದ್ರೂ ಯಾಕೆ ಆಕೆಯನ್ನೇ ಆಯ್ಕೆ ಮಾಡಿಕೊಳ್ಳಲಾಯ್ತು, ಆಕೆ ಕೂಡ ಸಂಭಾವನೆಯಲ್ಲಿ ರಾಜಿಯಾಗಿ ಯಾಕೆ ನಟಿಸೋಕೆ ಒಪ್ಪಿದ್ಲು ಅನ್ನೋ ಅನುಮಾನ ಮೂಡೋದು ಸಹಜ. ಅದು ಯಾಕೆ ಅಂತ ಮುಂದೆ ಓದಿ.
ಸೈರಾ ನರಸಿಂಹ ರೆಡ್ಡಿ ಹೇಳಿ ಕೇಳಿ ಐತಿಹಾಸಿಕ ಸಿನಿಮಾ. ಹಾಗಾಗಿ ಇಲ್ಲಿ ನಾಯಕಿ ಪಾತ್ರಕ್ಕೆ ಮತ್ತು ಅಭಿನಯಕ್ಕೆ ಹೆಚ್ಚು ಸ್ಕೋಪ್ ಇರತ್ತೆ. ಇತ್ತೀಚಿನ ದಿನಗಳಲ್ಲಿ ನಟನೆಗೆ ಅವಕಾಶ ಇರೋ ಪಾತ್ರಗಳನ್ನ ನಯನ್ ಹೆಚ್ಚು ಒಪ್ಪಿ ಅಪ್ಪಿಕೊಳ್ತಿದ್ದಾಳೆ. ಇನ್ನೂ ಚಿರು ಕೂಡ ಸೀನಿಯರ್ ಆಕ್ಟರ್. ಅವರ ಪಕ್ಕ ನಯನತಾರರಂತಹ 30 ಪ್ಲಸ್ ನಟಿಯರು ಕಾಣಿಸಿಕೊಂಡ್ರೆ ಜೋಡಿ ಚೆನ್ನಾಗಿರುತ್ತೆ. ಈ ಐತಿಹಾಸಿಕ ಚಿತ್ರದಲ್ಲಿ ಗ್ಲಾಮರ್ಗೆ ಜಾಸ್ತಿ ಸ್ಕೋಪ್ ಇಲ್ಲ. ನಯನತಾರ ಆದ್ರೆ ಈ ಪಾತ್ರಕ್ಕೆ ನ್ಯಾಯ ಒದಗಿಸ್ತಾರೆ ಅಂತ ಚಿತ್ರತಂಡ ಆಕೆಯನ್ನ ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದೆ. ಈಗಾಗಲೇ ಸೀನಿಯರ್ ಸ್ಟಾರ್ಸ್ ಜೊತೆ ಕಾಣಿಸಿಕೊಂಡು ನಯನ್ ಸಕ್ಸಸ್ ಕಂಡಿದ್ದಾಳೆ.
ಸಿಂಹ ಮತ್ತು ಶ್ರೀ ರಾಮರಾಜ್ಯಂ ಚಿತ್ರಗಳಲ್ಲಿ ಬಾಲಕೃಷ್ಣ ಜೊತೆ ನಟಿಸಿ ನಯನತಾರ ಮ್ಯಾಜಿಕ್ ಮಾಡಿದ್ಲು. ಅದೇ ಕಾರಣಕ್ಕೆ ಬಾಲಯ್ಯನ 102ನೇ ಚಿತ್ರಕ್ಕೂ ಈಕೆಯನ್ನ ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ತಮ್ಮ ನೆಚ್ಚಿನ ಸ್ಟಾರ್ಸ್ ಹೊಸ ಹೊಸ ನಟಿಯರ ಜೊತೆ ನಟಿಸ್ಬೇಕು ಅಂತ ಫ್ಯಾನ್ಸ್ ಆಸೆಪಟ್ರೂ, ಅದು ಎಲ್ಲಾ ಚಿತ್ರಗಳಿಗೂ ಸಮಂಜಸ ಅನ್ಸಲ್ಲ. ಇದೇ ಸತ್ಯವನ್ನ  ಫಿಲ್ಮ್ ಮೇಕರ್ಸ್ ಅಷ್ಟೆಅಲ್ಲ ಸ್ವತಃ ಆ ಸ್ಟಾರ್ಸ್ ಕೂಡ ಕಂಡುಕೊಂಡಂತಿದೆ. ಯಾವ್ದು ಏನೇ ಇದ್ರೂ ಫೈನಲಿ ಸಿನಿಮಾ ಅದ್ಭುತವಾಗಿ ಮೂಡಿಬರ್ಬೇಕು ಅನ್ಬೋದು ಎಲ್ಲರ ಲೆಕ್ಕಾಚಾರ. ಅದೇ ಕಾರಣಕ್ಕೆ ಇದೀಗ ಚಿರು ಮತ್ತು ಬಾಲಯ್ಯನ ಜೊತೆ ನಯನ’ತಾರ’ ಮಿಂಚೋಕೆ ರೆಡಿಯಾಗಿದ್ದಾಳೆ.

3 thoughts on “ಚಿರು, ಬಾಲಯ್ಯನ ಸಿನಿಮಾಗಳಿಗೆ ನಯನತಾರ ಆಯ್ಕೆ ಆಗೋಕೆ ಅಸಲಿ ಕಾರಣ ಏನ್ ಗೊತ್ತಾ..?

Comments are closed.