ಗಣೇಶ್ ಬಂದ ಕಾಯಿ ಕಡಬು ತಿಂದ, 95 ಟನ್ ಕಸ ಚೆಲ್ಲಿ ಹೋದ ….

ನಗರದಲ್ಲಿ ಗಣೇಶ ಚತುರ್ಥಿ ೩ ನೇ ದಿನವಾದ ಭಾನುವಾರ ೧.೩೫ ಲಕ್ಷ ಗಣೇಶಮೂರ್ತಿ ವಿಸರ್ಜನೆಯಾಗಿದೆ.  ಇದರಲ್ಲಿ  ೨೫೭ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶಮೂರ್ತಿ ವಿಸರ್ಜನೆಯಾಗಿದೆ.   ಪರಿಸರ ಪ್ರೇಮಿ  ಗಣೇಶನನ್ನು ಪುಜಿಸುವಂತೆ ಮನವಿ ಮಾಡದರು ಸಹ ಸಿಲಿಕಾನ್ ಸಿಟಿಯ ನಾಗರಿಕರು  ಪ್ಲಾಸ್ಟರ್ ಆಫ್ ಪ್ಯಾರೀಸ್  ಮೀಲಿನ ಮೋಹವನ್ನು ಕಡಿಮೆ ಮಾಡಿಲ್ಲ. ಅದಕ್ಕಾಗಿ  ಒಂದೇ ದಿನ ೯೫ ಟನ್ ಕಸ ಉತ್ಪತ್ತಿಯಾಗಿದೆ ಎಂದು BBMP ತಿಳಿಸಿದೆ.

ಗಣೇಶ ಹಬ್ಬದಂದು ೨.೦೮ ಲಕ್ಷ ಗಣೇಶಮೂರ್ತಿ ವಿಸರ್ಜನೆಯಾಗಿತ್ತು, ಅಂದು ಸಹ ಇಷ್ಟೆ ಪ್ರಮಾಣದ ಕಸ ಉತ್ಪತ್ತಿಯಾಗಿತ್ತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  ಗಣೇಶಮೂರ್ತಿಗಳ ವಿಸರ್ಜನೆಗೆ ಅಗತ್ಯ ವ್ಯವಸ್ಥೆ ಮಾಡಿದೆ. ರಾತ್ರಿ 10.30ರ ವರೆಗೆ ಗಣೇಶಮೂರ್ತಿಗಳ ವಿಸರ್ಜನೆ ಮಾಡಬಹುದು, ರಾತ್ರಿ 10.30ರ ನಂತರ ಗಣೇಶಮೂರ್ತಿಗಳ ವಿಸರ್ಜನೆ ಮಾಡುವಂತಿಲ್ಲ.

ಬಿಬಿಎಂಪಿ ಮಲ್ಲೇಶ್ವರಂನ ಸ್ಯಾಂಕಿ ಸೇರಿದಂತೆ 36 ಕೆರೆಗಳಲ್ಲಿ ತಾತ್ಕಾಲಿಕ ಪುಷ್ಕರಣಿಗಳನ್ನು ನಿರ್ಮಿಸಿದೆ. BBMP ವತಿಯಿಂದ 227, ಹಾಗು ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ 42 ಸಂಚಾರಿ ಘಟಕಗಳು ಸೇರಿ ಒಟ್ಟು 269 ಸಂಚಾರಿ ಘಟಕಗಳ ವ್ಯವಸ್ಥೆ ಮಾಡಲಾಗಿದೆ.

‘ಗಣೇಶ ಚತುರ್ಥಿ ಸಮಾರಂಭದಲ್ಲಿ ಪ್ಲಾಸ್ಟಿಕ್ ಅಥವ ಪರಿಸರಕ್ಕೆ ಹಾನಿ ಮಾಡುವ ಬ್ಯಾನರ್, ಬಂಟಿಗ್ಸ್ ಬಳಸುವುದನ್ನು ನಿಷೇಧಿಸಲಾಗಿದೆ’ ವಿಸರ್ಜನೆ ವೇಳೆ ಕೆರೆಗಳ ಬಳಿ ಪಟಾಕಿ ಸಿಡಿಸುವುದು, ಧ್ವನಿವರ್ಧಕ ಬಳಸುವುದನ್ನು ನಿಷೇಧಿಸಲಾಗಿದೆ. ಅಗ್ನಿ ಶಾಮಕ ದಳದ ಮತ್ತು ಬಿಬಿಎಂಪಿ ಸಿಬ್ಬಂದಿಗಳು ನೀಡುವ ಸೂಚನೆಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು’ ಗಣೇಶ ವಿಸರ್ಜನೆಗೆ ಗುರುತಿಸಿರುವ ಕೆರೆಗಳು, ಪುಷ್ಕರಣಿ, ಸಂಚಾರಿ ಘಟಕಗಳು ನಿಲ್ಲುವ ಸ್ಥಳಗಳಗಳ ಬಗ್ಗೆ ಮಾಹಿತಿ ಪಡೆಯಲು ಪಾಲಿಕೆಯ ವೆಬ್ ಸೈಟ್‌ ನೋಡಬಹುದಾಗಿದೆ. ಅಗತ್ಯ ಮಾಹಿತಿಗಳು ಬೇಕಾದಲ್ಲಿ 22660000/22221188 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Comments are closed.

Social Media Auto Publish Powered By : XYZScripts.com