ಮುಗುಳು ನಗೆಯೆ ನೀ ಹೇಳು.. ಭಟ್ರು ಆ ಹುಡ್ಗಿ ಬಗ್ಗೆ ಯಾಕ್ ಬರೆದ್ರು…!

ಸರಳವಾದ… ಸರಸವನ್ನ.
ಅಧರ ಬಯಸುತ್ತಿದೆ.
ನಿನ್ನಿಂದಲೇ ರಸಿಕತೆ ಉದಯವಾಗುತ್ತಿದೆ.

ಭಟ್ರು ಬರೆದ್ರೆ ಹಿಂಗೆ ಬರೆಯೋದು. ಭಟ್ಟರು ಅಂದ್ರೆ ಅಡಿಗೆ ಭಟ್ರಲ್ಲ. ಯೋಗರಾಜ್ ಭಟ್ರು. ಸಿನಿಮಾ ಕುಕ್ ಅಂದ್ರೆ ತಪ್ಪಿಲ್ಲ. ಸಾಹಿತ್ಯದ ಮಾಸ್ಟರ್ ಅಂದ್ರೆ ಅತಿಶಯೋಕ್ತಿ ಆಗಲ್ಲ. ಹೊಸ ಪದಗಳ ಮೇಷ್ಟ್ರು ಇವ್ರೇ. ಸಾಲಲ್ಲಿ ಸೈನ್ಸ್ ತರ್ತಾರೆ. ಫೀಲಿಂಗ್ಸ್ ಗೀಚಿಡ್ತಾರೆ. ರಸಗಳನ್ನ ರಸಗವಳದಂತೆ ರಸವತ್ತಾಗಿ ಉಣಬಡಿಸ್ತಾರೆ.

ಭಟ್ರು ಸುಮ್ನೆ ಅಲ್ಲ ಬಿಡಿ. ಹುಚ್ಚನಂತೆ ಮಾತ್ ಆಡ್ತಾರೆ. ಆದರೆ, ಆ ಮಾತ್  ಅರ್ಥ ಮಾಡಿಕೊಂಡ್ರೆ ಮನಸ್ಸಿಗೆ ಜ್ನಾನದ ಶಕ್ತಿ ಸಿಗ್ತದೆ. ಅದೇ ಭಟ್ರು ರಸಿಕತೆಗಿಳಿದ್ರೆ, ಭಟ್ರ ಆ ತುಂಟ ಹೊರಗಿಣಿಕಿ ಬಿಡ್ತಾನೆ.

ಯಾವ್ ಕನಸಲ್ಲೂ ನಾನಂತೂ …
ಯಾವತ್ತು ನೋಡಿಲ್ಲ..
ಯಾರ್ ಮೇಲೆ ಬಟ್ಟೆ ಬರೆ..

ನಾ ಅನಿಸಿದ್ದು ಹೇಳಿರುವೆ
ನನ್ನ ಹುಡ್ಗಿರೇ ಕ್ಷಮಿಸಿ
ನೀವೇಲ್ಲ ಸಿಟ್ಟಾದರೆ

ಯೋಗರಾಜ್ ಭಟ್ರು ತುಂಟತನ ಗಂಡಸರರಿಗೆ ಮಾತ್ರ ಸೀಮಿತ ಅಲ್ಲ ಬಿಡಿ. ಅದು ಯುವತಿಯರಿಗೂ ಅನ್ವಿಯಿಸುತ್ತದೆ. ಅವರಲ್ಲಿರೋ ಆ ತುಂಟಿ ಕೂಡ ಆಗಾಗಾ ಹೊರ ಬೀಳೊದಿದೆ. ಅದರಲ್ಲೂ ಆಕೆ ನೇರವಾಗಿ ಏನೂ ಹೇಳೋದಿಲ್ಲ. ಕೊಂಚ ಮಿಸುದನಿಯಲ್ಲಿಯೇ ಮಾತ್ ಆಡ್ತಾಳೆ.

ತುಂಬಾ ಸನಿಹದಲಿ.. ತುಂಟ ದನಿಯಲ್ಲಿ..
ಹುಸಿಕೋಪವಾ ಕಲಿಸು…ತುಸು ನಾಚಿಕೆ ಬಿಡಿಸು

ನೀನೇ ಹೇಳು..
ಸತಾಯಿಸೋ ಆಸೆಗಳನು
ಹೇಗೆ ಹೇಳಲಿ ನಾ…

ಭಟ್ರ ಹುಡ್ಗಿಯ ಕಥೆ ಇಲ್ಲಿಗೆ ನಿಲ್ಲೋದಿಲ್ಲ ಬಿಡಿ. ಆಕೆ ತನ್ನ ಮನದಿನಿಯನಿಗೆ ಹೇಳ್ತಾ. ಹೇಳ್ತಾ ಹೋಗ್ತಾಳೆ. ಎಲ್ಲವನ್ನೂ ಹೇಳಿದ್ರೂ ಹೇಳದಂತೆ ಹೇಳಿ ಬಿಡ್ತಾಳೆ.

ನಿನ್ನ ಪ್ರೀತಿಯ ಶೀತವೂ ಪ್ರಾಣ ಉಳಿಸುತ್ತಿದೆ..
ಮನದಲೊಂದು ಮಧುರ ಮೈತ್ರಿ ಜೀವ ಪಡೆಯುತ್ತಿದೆ…
ಪ್ರತಿ ಬಿಂಬವೂ ಪ್ರೇಮದಾ ಹೂ ಮೂಡಿಯುತ್ತಿದೆ..
ನಮ್ ಭಟ್ರು ನಮ್ಗೆ ಅದ್ಕೆ ಇಷ್ಟ ಆಗೋದು. ಅತ್ಯಂತ ಟಿಫಿಕಲ್ ಫೀಲಿಂಗ್ಸು ಇವರಿಗೇನೇ ಮೂಡೋದು. ಅದು ಸಾಲುಗಳಾಗಿ, ಹಾಡಾಗೋದು. ಭಟ್ಟರ ಹಾಡನ್ನ ವಿ.ಹರಿಕೃಷ್ಣರೇ ಹಾಡೋದು.ಜನ ಮೆಚ್ಚೋದು. ಕೆಟ್ಟದಾಗಿದೆ ಅಂತ ಬೈಹೋದು ಉಂಟು. ಆದರೆ, ಭಟ್ಟರ ಹಾಡುಗಳಲ್ಲಿ ಇನ್ನೂ ಒಂದು ವಿಶೇಷ ಇದೆ. ಅದೂ ಕೂಡ ಮುಗುಳು ನಗೆ ಚಿತ್ರದ ಹಾಡುಲ್ಲಿಯೇ ಇದೆ.ಹೇಳಲ್ಲ. ನೀವೇ ಓದಿಕೊಳ್ಳಿ.

ಮುಗುಳು ನಗೆ ನೀ ಹೇಳು….
ತುಸು ಬಿಡಿಸಿ ಹೇಳು ನನಗೆ
ನನ ತುಟಿಯೇ ಬೇಕೆ ನಿನಗೆ

ನನ್ನೆಲ್ಲ ನೋವಿಗು ನಗುವೇ

ನೀ ಏಕೆ ಹೀಗೆ…

ಕಣ್ಣಾಲಿಯಾ ಜಲಪಾತವಾ…

ಬಂಧಿಸಲು ನೀ ಯಾರು….
ನೀ ಮಾಡುವಾ ನಗೆಪಾಟಲು
ಖಂಡಿಸಲು ನಾ ಯಾರೂ…
ಹಿಂಗೆ ಭಟ್ಟರು ಸೀರಿಯೆಸ್ ಆಗಿ ನಗುವಿನ ಹಾಡು ಬರೆದು ಹಾಕ್ತಾರೆ. ಭಟ್ಟರ ಮನಸು ಅರ್ಥ ಮಾಡಿಕೊಳ್ಳೋದು ಕಷ್ಟ. ಆದರೆ, ಹಾಡು ಬದುಕಿನ ಪಾಠ ಕಲಿಸುತ್ತವೆ. ಒಲವಿನ ಒರತೆಗಳಿಗೆ ಮತ್ತೆ ಜೀವ ಕೊಡುತ್ತವೆ.ಅದಕ್ಕೆ ಅಲ್ಲವೇ ಭಟ್ರು ವಿಭಿನ್ನ ಹಾಡಿಗೆ ಫೇಮಸ್. ಆದರೆ, ಅವರ ಕಥೆ ಬಗ್ಗೆ ನಾನೇನೂ ಹೇಳೋದಿಲ್ಲ. ಅದನ್ನ ನೀವೇ ಯೋಚಿಸಿ..

One thought on “ಮುಗುಳು ನಗೆಯೆ ನೀ ಹೇಳು.. ಭಟ್ರು ಆ ಹುಡ್ಗಿ ಬಗ್ಗೆ ಯಾಕ್ ಬರೆದ್ರು…!

Comments are closed.