‘ಹಿಂಸಾಚಾರ ಮಾಡುವವರು ಯಾರೇ ಆಗಿದ್ದರೂ ಸುಮ್ಮನೆ ಬಿಡುವುದಿಲ್ಲ’ : ಮೋದಿ ಮನ್ ಕೀ ಬಾತ್

ಹರಿಯಾಣದಲ್ಲಿ ಡೇರಾ ಸಚ್ಚಾ ಸೌದಾದ ಸ್ವಯಂಘೋಷಿತ ದೇವಮಾನವ ರಾಮ್ ರಹೀಂ ಬೆಂಬಲಿಗರ ಹಿಂಸಾಚಾರ ಬಗ್ಗೆ ಪ್ರಧಾನಿ ಪ್ರತಿಕ್ರಿಯೆ ನೀಡಿದ್ದಾರೆ.

ಮನ್ ಕೀ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ, ‘ ಕಾನೂನನ್ನು ಕೈಗೆ ತೆಗೆದುಕೊಂಡು, ಹಿಂಸಾಚಾರಕ್ಕಿಳಿಯುವವರು ಯಾರೇ ಆಗಿದ್ದರೂ, ಅವರನ್ನು ಸುಮ್ಮನೆ ಬಿಡುವುದಿಲ್ಲ, ಒಂದು ಕಡೆ ನಾವು ಹಬ್ಬಗಳಿಗಾಗಿ ಕಾಯುತ್ತಿರುತ್ತೇವೆ. ಆದರೆ ಇಂತಹ ಹಿಂಸಾಚಾರದ ಘಟನೆಗಳು ನಡೆಯುತ್ತಿರುವುದು ಚಿಂತೆಗೀಡು ಮಾಡುತ್ತದೆ, ಭಾರತ ಬುದ್ಧ ಮತ್ತು ಗಾಂಧಿಯ ನಾಡು, ಇಲ್ಲಿ ಯಾವುದೇ ರೀತಿಯ ಹಿಂಸೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ ‘ ಎಂದು ಹೇಳಿದ್ದಾರೆ.

ಬಾಬಾ ರಾಮ್ ರಹೀಂ ಅನುಯಾಯಿಗಳ ಹಿಂಸಾಚಾರದಲ್ಲಿ 31 ಜನ ಮೃತಪಟ್ಟು, ನೂರಾರು ಜನ ಗಾಯಗೊಂಡಿದ್ದರು.

 

Comments are closed.

Social Media Auto Publish Powered By : XYZScripts.com