ಬೆಂಗಳೂರು ಗಣೇಶೋತ್ಸವ : ಕುಮಾರ್ ಸಾನು 90s ಮೆಲೊಡಿಯಲ್ಲಿ ತೇಲಾಡಿದ ಪ್ರೇಕ್ಷಕರು

ಬಸವನಗುಡಿಯ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ 55 ನೇ ಗಣೇಶ ಉತ್ಸವಕ್ಕೆ ಆಗಮಿಸಿದ್ದ ಬಾಲಿವುಡ್ ಸಿಂಗರ್ ಕುಮಾರ್ ಸಾನು, ಬೆಂಗಳೂರಿನ ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡರು. ಕುಮಾರ್ ಸಾನು ತಮ್ಮ 90 ರ ದಶಕದ ಸುಪರ್ ಹಿಟ್ ಹಾಡುಗಳ ಮೂಲಕ ಜನರನ್ನು ರಂಜಿಸಿದರು. ನಿರೂಪಕಿ ಶೃದ್ಧಾ ಅವರು ಹೇಳಿಕೊಟ್ಟಂತೆ ಕನ್ನಡದಲ್ಲಿ ಮಾತನಾಡಿದ ಸಾನು ‘ನಮಸ್ಕಾರ, ಹೇಗಿದ್ದೀರಾ, ನಾನ್ ಚೆನಾಗಿದೀನಿ, ಊಟ ಆಯ್ತಾ, ದೋಸೆ ತಿಂದೆ ‘ ಎಂದು ಹೇಳಿ ಸಭಿಕರ ಚಪ್ಪಾಳೆ ಗಿಟ್ಟಿಸಿದರು.

ತಮ್ಮ ಬಾಲಿವುಡ್ ಎಂಟ್ರಿ ಹೇಗಾಯ್ತು..?, ಕುಮಾರ್ ಸಾನು ಎಂಬ ಹೆಸರು ಕೊಟ್ಟಿದ್ದು ಯಾರು..? ಸಿಂಗರ್ ಆಗಿ ಬೆಳೆದದ್ದು ಹೇಗೆ..? ಹೀಗೆ ಅನೇಕ ವಿಷಯಗಳನ್ನು ಸಾನು ದಾ ಹಂಚಿಕೊಂಡರು.

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಜಿ ಪರಮೇಶ್ವರ್ ಸನ್ಮಾನಿಸಿ ‘ ವಿ ಆರ್ ಪ್ರೌಡ್ ಟು ಹ್ಯಾವ್ ಯು ಹಿಯರ್ ‘ ಎಂದರು.

‘ತುಝೆ ದೇಖಾ ತೊ ಯೆ ಜಾನಾ ಸನಮ್’, ‘ಚುರಾಕೆ ದಿಲ್ ಮೇರಾ ಗೋರಿಯಾ ಚಲಿ’, ‘ನಜರ್ ಕೆ ಸಾಮನೆ’, ‘ಧೀರೆ ಧೀರೆ ಸೆ ಮೇರಿ ಜಿಂದಗೀ ಮೆ ಆನಾ’, ‘ತೇರಿ ಚುನರಿಯಾ’ ಹೀಗೆ 90 ರ ದಶಕದ ಹಲವಾರು ಸೂಪರ್ ಹಿಟ್ ರೊಮ್ಯಾಂಟಿಕ್ ಬಾಲಿವುಡ್ ಹಾಡುಗಳನ್ನು ಹಾಡಿ, ಕೇಳುಗರ ಶಿಳ್ಳೆ ಹೊಡೆದು ಕುಣಿಯುವಂತೆ ಮಾಡಿದರು. ಅನುರಾಧಾ ಘೋಷ್ ಡುಯೆಟ್ ನಲ್ಲಿ ಸಾಥ್ ನೀಡಿದರು.

‘ ಸತ್ಯ ಇಸ್ ಇನ್ ಲವ್’ ಹಾಗೂ ‘ ‘ನೀ ಚಂದಾನೇ, ನಿನ್ನಾಸೆ ಚಂದಾನೆ ‘ ಕನ್ನಡದ ಹಾಡುಗಳನ್ನೂ ಹಾಡಿದರು. ‘ಇಷ್ಟು ಪ್ರೀತಿಯಿಂದ ಕೇಳುವ ಆಡಿಯನ್ಸ್ ಇದ್ದರೆ ಹಾಡಲು ಮತ್ತಷ್ಟು ಖುಷಿಯೆನಿಸುತ್ತದೆ ‘ ಎಂದು ಸಾನು ಪ್ರೇಕ್ಷಕರಿಗೆ ಧನ್ಯವಾದ ಹೇಳಿದರು.

7 thoughts on “ಬೆಂಗಳೂರು ಗಣೇಶೋತ್ಸವ : ಕುಮಾರ್ ಸಾನು 90s ಮೆಲೊಡಿಯಲ್ಲಿ ತೇಲಾಡಿದ ಪ್ರೇಕ್ಷಕರು

 • October 20, 2017 at 6:33 PM
  Permalink

  Thanks designed for sharing such a fastidious thinking, piece of writing is nice, thats why i have read it completely|

 • October 20, 2017 at 7:15 PM
  Permalink

  Thanks for ones marvelous posting! I seriously enjoyed reading it, you are a great author.
  I will be sure to bookmark your blog and may come back sometime soon. I
  want to encourage you to continue your great job, have a
  nice evening!

 • October 24, 2017 at 1:06 PM
  Permalink

  I blog frequently and I really appreciate your information.
  Your article has truly peaked my interest.
  I will book mark your website and keep checking for new information about once per week.
  I subscribed to your RSS feed too.

 • October 24, 2017 at 4:01 PM
  Permalink

  Hello friends, its fantastic paragraph on the topic of tutoringand fully defined, keep it up all the time.

Comments are closed.

Social Media Auto Publish Powered By : XYZScripts.com