ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್: 417ಮಿ ಡಾಲರ್ ಪರಿಹಾರ ನೀಡುವಂತೆ ಅಮೇರಿಕಾ ಕೋರ್ಟ್ ತೀರ್ಪು

ಮಕ್ಕಳಿಗೆ ಬಳಸುವ ವಸ್ತುಗಳಲ್ಲಿ ರಾಸಾಯನಿಕಗಳು ಬಹಳ ಕಡಿಮೆ ಇರುತ್ತವೆ. ಹಾಗೆಂದೇ ಹೆಚ್ಚಿನ ಸಲ ದೊಡ್ಡವರು ಕೂಡಾ ಅವುಗಳನ್ನು ಬಳಸುತ್ತಾರೆ. ಆದರೆ ಅನೇಕ ದಶಕಗಳಿಂದ ಪ್ರಸಿದ್ಧವಾಗಿರುವ ಜಾನ್ಸನ್ಸ್ ಬೇಬಿ ಪೌಡರ್ ನ ನಿರಂತರ ಬಳಕೆಯಿಂದಾಗಿ ತಮಗೆ ಅಂಡಾಶಯದ ಕ್ಯಾನ್ಸರ್ ಉಂಟಾಗಿದ್ದಾಗಿ ಈವಾ ಎಚ್ಚವೆರೀಯಾ ಎನ್ನುವ ಮಹಿಳೆ ಅಮೇರಿಕಾದ ಲಾಸ್ ಏಂಜಲಿಸ್ ನ ನ್ಯಾಯಾಲಯದ ಮೆಟ್ಟಿಲೇರಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿದ ಲಾಸ್ ಏಂಜಲಿಸ್ ನ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ತಪ್ಪಿತಸ್ಥವಾಗಿದ್ದು ಸದ್ಯ ಅಂಡಾಶಯದ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಹಿಳೆಗೆ ಬರೋಬ್ಬರಿ 417 ಮಿಲಿಯನ್ ಡಾಲರ್ ಹಣವನ್ನು ಪರಿಹಾರವಾಗಿ ನೀಡಬೇಕೆಂದು ಆಜ್ಞಾಪಿಸಿದೆ.

ಅಷ್ಟಕ್ಕೂ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಗೆ ತಾನು ತಯಾರಿಸುವ ಬೇಬಿ ಪೌಡರ್ ನಲ್ಲಿ ಕ್ಯಾನ್ಸರ್ ಕಾರಕ ವಸ್ತುಗಳಿರುವುದು ತಿಳಿದಿತ್ತು. ಆದರೆ ಈ ಬಗ್ಗೆ ಯಾವುದೇ ಎಚ್ಚರಿಕೆಯ ಪ್ರಕಟಣೆಯನ್ನು ಪೌಡರ್ ಡಬ್ಬದ ಮೇಲಾಗಲೀ ಬೇರೆ ಎಲ್ಲೂ ಹಾಕದೇ ಇರುವುದು ಸಂಸ್ಥೆಯ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಅಲ್ಲದೇ 1950ರಿಂದ 2016ರವರೆಗೂ ತಾನು ನಿರಂತರವಾಗಿ ದೇಹದ ಶುಭ್ರತೆಯನ್ನು ಕಾಯ್ದುಕೊಳ್ಳಲು ಜಾನ್ಸನ್ ಬೇಬಿ ಪೌಡರನ್ನೇ ಬಳಸುತ್ತಿದ್ದೇನೆ. ಇಷ್ಟು ದೀರ್ಘಕಾಲದ ಬಳಕೆಯಿಂದಾಗಿ ತನಗೀಗ ಅಂಡಾಶಯದ ಕ್ಯಾನ್ಸರ್ ಬಂದಿದ್ದು ಇದಕ್ಕೆ ಜಾನ್ಸನ್ ಅಂಡ್ ಜಾನ್ಸನ್ ಕಂಪೆನಿಯೇ ನೇರ ಹೊಣೆ ಎಂದು ಈವಾ ಆರೋಪಿಸಿದ್ದಾರೆ.

ಸದ್ಯ ಕೊನೆಯ ಹಂತದ ಕ್ಯಾನ್ಸರ್ ನಿಂದಾಗಿ ಸಾವು-ಬದುಕಿನ ಹೋರಾಟದಲ್ಲಿರುವ ಈವಾ ತನಗೆ ಈ ಹಣ ಅಥವಾ ಕರುಣೆಯ ಅವಶ್ಯಕತೆಯಿಲ್ಲ. ಈ ಪ್ರಕರಣದಿಂದ ಪಾಠ ಕಲಿತು ಸಂಸ್ಥೆ ಇನ್ನು ಮುಂದಾದರೂ ಎಚ್ಚರಿಕೆಯ ಪ್ರಕಟಣೆಯನ್ನು ಹೊರಡಿಸಲಿ. ಈ ಮೂಲಕ ನನ್ನಂತಹಾ ಅನೇಕ ಮಹಿಳೆಯರ ಜೀವ ಉಳಿಸಲು ನೆರವಾಗಲಿ ಎಂದಿದ್ದಾರೆ.

ಭಾರತದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಜಾನ್ಸನ್ ಬೇಬಿ ಪೌಡರ್ ಬಳಸುತ್ತಾರೆ. ಈ ಪ್ರಕರಣದಿಂದ ಅವರೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಇದರ ಜೊತೆಗೆ ಇಲ್ಲಿಯೂ ಇಂತಹಾ ಅಪಾಯಕಾರಿ ವಸ್ತುಗಳ ಬಳಕೆಯ ಮೇಲೆ ನಿರ್ಬಂಧ ಹೇರುವ ಅವಶ್ಯಕತೆ ಇದೆ.

4 thoughts on “ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್: 417ಮಿ ಡಾಲರ್ ಪರಿಹಾರ ನೀಡುವಂತೆ ಅಮೇರಿಕಾ ಕೋರ್ಟ್ ತೀರ್ಪು

 • October 18, 2017 at 1:50 PM
  Permalink

  Wow that was strange. I just wrote an incredibly long comment but after I clicked submit my comment didn’t appear. Grrrr… well I’m not writing all that over again. Anyway, just wanted to say great blog!

 • October 24, 2017 at 7:20 PM
  Permalink

  This is the appropriate weblog for anybody who needs to seek out out about this topic. You understand so much its virtually exhausting to argue with you (not that I really would need…HaHa). You positively put a brand new spin on a subject thats been written about for years. Nice stuff, simply great!

 • October 24, 2017 at 8:00 PM
  Permalink

  Hi there, You have done a great job. I will definitely digg it and personally suggest to my friends. I am sure they’ll be benefited from this web site.

Comments are closed.

Social Media Auto Publish Powered By : XYZScripts.com