ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಡೆಸುತ್ತಿಲ್ಲ, ರಾಜ್ಯ ಬಿಜೆಪಿ ನಾಯಕರಿಗೆ ಷಾ ತರಾಟೆ ..

ವಿಧಾನಸಭೆ ಚುನಾವಣೆಗೆ ಸಮರೋಪಾದಿ ಸಿದ್ಧತೆಗೆ ಅಮಿತ್ ಷಾ ಸೂಚನೆ  ನೀಡಿದ್ದಾರೆ.  ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಗಟ್ಟಿತನ ಪ್ರದರ್ಶಿಸದಿರುವುದಕ್ಕೆ  ಬೇಸರ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಷಾ ರಾಜ್ಯ ಬಿಜೆಪಿ ನಾಯಕರಿಗೆ  ಸ್ಪಷ್ಟ ಸೂಚನೆ  ನೀಡಿದ್ದಾರೆ.  ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಸೂಕ್ತ ಹೋರಾಟ ನಡೆಸದಿದ್ದಕ್ಕೆ   ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಷಾ ತೀವ್ರವಾಗಿ  ತರಾಟೆ  ತೆಗೆದುಕಪಂಡದ್ದಾರೆ.  ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ನಿರ್ಮಿಸಿಕೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಅಧ್ಯಕ್ಷ ಸಾಂಕೇತಿಕ ಪ್ರತಿಭಟನೆ ಬಿಟ್ಟು ಸಮಗ್ರ ಪ್ರತಿಭಟನೆ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಸುಮಾರು ಒಂದೂವರೆ ಗಂಟೆ ಕಾಲ ನಡೆದ ಕೋರ್ ಕಮಿಟಿ ಸಭೆಯಲ್ಲಿ  ರಾಜ್ಯ ಬಿಜೆಪಿ ನಾಯಕರಿಗೆ ಷಾ ವುಣಾವಣೆಯ ರಣತಂತ್ರವನ್ನು ಹೇಳಿಕೊಟ್ಟಿದ್ದಾರೆ.

ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಬಗ್ಗೆ ಜನಜಾಗೃತಿ ಮೂಡಿಸಿ,  ಸರ್ಕಾರದ ಪ್ರತೀ ವೈಫಲ್ಯದ ವಿರುದ್ಧ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸವದು ಅತ್ಯಗತ್ಯ, ಎಂದು  ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಷಾ ಖಡಕ್ ಸೂಚನೆ ಕೊಟ್ಟಿದ್ದಾರೆ.  ಕಾಂಗ್ರೆಸ್ ನ ಯಾವುದೇ ನಾಯಕರ ವಿರುದ್ಧ ಮೃದು ಧೋರಣೆ ಸಹಿಸುವ ಪ್ರಶ್ನೆ ಇಲ್ಲ.

ಕೆಲವೊಂದು ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಪರ ಜನತೆ ಒಲವು ಇರಬಹುದು, ಆದರೆ  ಬಿಜೆಪಿ ಪರ ಜನಾಭಿಪ್ರಾಯ ಮೂಡಿಸಲು ಶ್ರಮಿಸು ಬೇಕು, ಜೊತೆಗೆ ಕೇಂದ್ರದ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವಂತೆಯೂ ಸಲಹೆ ಕೊಟ್ಟಿದ್ದಾರೆ.   ನಿರಂತರ ಜನಸಂಪರ್ಕ ಸಾಧಿಸಿ  ಚುನಾವಣೆ ಮುಗಿಯುವವರೆಗೂ ವಿರಮಿಸದಂತೆ ಬಿಜೆಪಿ ನಾಯಕರಿಗೆ ಸಲಹೆ ಹೈಕಮಾಂಡದಿಂದ ಬಂದಿದೆ.  ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಸ್ತ್ರಗಳಿಗೆ ಪ್ರತಿಅಸ್ತ್ರ ಬಳಸಲು ಸೂಚಿಸಿರುಬ ಷಾ   ಇತ್ತೀಚೆಗೆ ಡಿಕೆಶಿ ವಿರುದ್ಧ ನಡೆಸಿದ್ದ ಬಿಜೆಪಿ ಪ್ರತಿಭಟನೆ ಷಾ ಅವರಿಗೆ ತೃಪ್ತಿ ತಂದಿಲ್ಲ.   ಜನರಿಗೆ ವಿಚಾರದ ಬಗ್ಗೆ ಅರಿವು ಮೂಡಿಸುವ ಖಡಕ್ ಪ್ರತಿಭಟನೆ ಬೇಕೆಂದ ಷಾ – ಕಾಂಗ್ರೆಸ್ ಭ್ರಷ್ಟಾಚಾರದ ಪಟ್ಟಿ ಮಾಡಿ ಪ್ರತಿಭಟನೆ ನಡೆಸಬೇಕು.

ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಪಕ್ಷ ಸಂಘಟನೆಗೆ ಮಾಡಿ,  ರಾಜ್ಯದಲ್ಲಿ ಬಿಜೆಪಿ ಪರ ಜನಾಭಿಪ್ರಾಯಕ್ಕಾಗಿ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ   ನಡೆಸಲು  ಅಮಿತ್ ಷಾ ನಿರ್ದೇಶನ ನೀಡಿದ್ದಾರೆ.  ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಯಶಸ್ವಿ ಯಾತ್ರೆ ಕೈಗೊಂಡು, ಆ ಮೂಲಕ ಕಾಂಗ್ರೆಸ್ ವೈಫಲ್ಯಗಳನ್ನು ಜನರಿಗೆ ತಿಳಿಸುವುಬೇಕು.

ಭಿನ್ನಾಭಿಪ್ರಾಯ ಬದಿಗೊತ್ತಿ ಏಕತೆಯಿಂದ ಮುನ್ನಡೆಸಲು ಸೂಚಿಸಿದ ಅಮಿತ್ ಷಾ ರಾಜ್ಯ ಬಿಜೆಪಿ ನಾಯಕರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.  – ಸುಮಾರು ಒಂದೂವರೆ ಗಂಟೆ ಕಾಲ ನಡೆದ ಕೋರ್ ಕಮಿಟಿ ಸಭೆ – ಹೊಸ ಚುನಾವಣಾ ಉಸ್ತುವಾರಿಗಳಾದ ಪ್ರಕಾಶ್ ಜಾವ್ಡೇಕರ್ ಹಾಗೂ ಪಿಯೂಶ್ ಗೋಯಲ್   ಉಪಸ್ಥಿತಿರಿದ್ದ ಸಭೆಯಲ್ಲಿ

Comments are closed.

Social Media Auto Publish Powered By : XYZScripts.com