ಅಮ್ಮನ ಸಿನಿಮಾದಲ್ಲಿ ತೈಮೂರ್ ಕೆಮಿಯೊ… ಛೋಟಾ ಪಡೌಡಿ ಹವಾ ಹೇಗಿದೆ ನೋಡಿ!

ತೈಮೂರ್ ಅಲಿ ಖಾನ್ ಪಟೌಡಿ. ಈ ಪೋರನ ಬಗ್ಗೆ ಹೆಚ್ಚು ಪರಿಚಯ ಬೇಕಿಲ್ಲ ಅನ್ಸತ್ತೆ. ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಮುದ್ದಿನ ಮಗ ತೈಮೂರ್, ಮೋಸ್ಟ್ ಪಾಪ್ಯುಲರ್ ಸ್ಟಾರ್ ಕಿಡ್. ಈತನ ಒಂದೊಂದು ಫೋಟೊ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು.

ಈತನ ಕ್ಯೂಟ್ನೆಸ್ ಎಂಥವರನ್ನ ಮರಳು ಮಾಡುತ್ತೆ. ಅದೇ ಕಾರಣಕ್ಕೆ ತಂದೆ, ತಾಯಿಯ ಹೆಸರಿನ ಹಂಗಿಲ್ಲದೆ ತೈಮೂರ್ ಫೇಮಸ್ ಆಗ್ಬಿಟ್ಟಿದ್ದಾನೆ. ಇದನ್ನೆ ಬಂಡವಾಳ ಮಾಡ್ಕೊಂಡು ಕರೀನಾ ನಟನೆಯ ಮುಂದಿನ ಚಿತ್ರದಲ್ಲಿ ಈ ಪೋರನನ್ನ ತೆರೆಮೇಲೆ ತೋರಿಸೋ ತಯಾರಿ ನಡೆದಿದೆ.

ಮದುವೆ ಮಗು ಅಂತ ಕೆಲ ದಿನಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಕರೀನಾ ಕಪೂರ್, ವೀರೆ ದೆ ವೆಡ್ಡಿಂಗ್ ಚಿತ್ರದಲ್ಲಿ ನಟಿಸ್ತಿದ್ದಾಳೆ. ಈ ಚಿತ್ರದಲ್ಲಿ ತೈಮೂರ್ ‘ಕೆಮಿಯೋ’ ಪಾತ್ರ ಮಾಡ್ತಾನೆ ಅನ್ನಲಾಗ್ತಿದೆ. ಕೆಲ ದಿನಗಳ ಹಿಂದೆ ಶಾರೂಖ್ ಪುತ್ರ ಅಬ್ರಹಾಂ, ಹ್ಯಾಪಿ ನ್ಯೂ ಇಯರ್ ಚಿತ್ರದ ದೃಶ್ಯವೊಂದರಲ್ಲಿ ಮಿಂಚಿದ್ದ. ಅದೇ ರೀತಿ ಛೋಟಾ ಪಟೌಡಿನ ವೀರೆ ದೆ ವೆಡ್ಡಿಂಗ್ ಚಿತ್ರದಲ್ಲಿ ತೋರಿಸೋ ಪ್ಲಾನ್ ನಡೀತಿದೆ. ಒಂದು ವೇಳ ಹಾಗೇನಾದ್ರೂ ಆದ್ರೆ ಚಿತ್ರದ ಬಗ್ಗೆ ಇನ್ಬಷ್ಟು ಕುತೂಹಲ ಮೂಡೋದು ಗ್ಯಾರೆಂಟಿ.

7 ತಿಂಗಳ ಪುಟ್ಟ ಪೋರ ತೈಮೂರ್ ಅಲಿ ಖಾನ್ ಪಟೌಡಿ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಕಿಡ್ ಅನ್ನಿಸಿಕೊಂಡಿದ್ದಾನೆ. ಈತನ ಸೊಗಸಿಗೆ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಈ ವಯಸ್ಸಿಗೆ ಈ ಪಾಟಿ ಸೌಂಡ್ ಮಾಡ್ತಿರೋ ಛೋಟಾ ಪಟೌಡಿ ಈಗ ಸಿನಿಮಾದಲ್ಲಿ ಕಾಣಿಸಿಕೊಂಡು ಹೇಗೆ ಕಮಾಲ್ ಮಾಡ್ತಾನೋ ನೋಡ್ಬೇಕು. ಆದ್ರೆ ವೀರೆ ದಿ ವೆಡ್ಡಿಂಗ್ ಚಿತ್ರದಲ್ಲಿ ತೈಮೂರ್ ಕಾಣಿಸಿಕೊಳ್ಳೊದ್ರ ಬಗ್ಗೆ ಕರೀನಾ, ಸೈಫ್ ಮಾತ್ರ ಈವರೆಗೆ ಏನನ್ನೂ ಹೇಳಿಲ್ಲ.

4 thoughts on “ಅಮ್ಮನ ಸಿನಿಮಾದಲ್ಲಿ ತೈಮೂರ್ ಕೆಮಿಯೊ… ಛೋಟಾ ಪಡೌಡಿ ಹವಾ ಹೇಗಿದೆ ನೋಡಿ!

 • October 18, 2017 at 4:15 PM
  Permalink

  Gгeetings! Very useful advice in thiѕ pаrticular post!
  Іt iѕ the ⅼittle cһanges thɑt poduce the greatest cһanges.
  Ⅿany thanks foг sharing!

 • October 24, 2017 at 1:02 PM
  Permalink

  These days of austerity as well as relative anxiety about having debt, lots of people balk against the idea of utilizing a credit card in order to make purchase of merchandise and also pay for a trip, preferring, instead just to rely on this tried in addition to trusted method of making repayment – hard cash. However, if you have the cash there to make the purchase fully, then, paradoxically, that is the best time for you to use the credit cards for several good reasons.

 • October 24, 2017 at 1:55 PM
  Permalink

  I have been browsing on-line greater than three hours as of late, but I never discovered any interesting article like yours. It¡¦s lovely value enough for me. In my view, if all website owners and bloggers made excellent content material as you did, the internet will likely be much more useful than ever before.

Comments are closed.

Social Media Auto Publish Powered By : XYZScripts.com