ಜಮ್ಮು – ಕಾಶ್ಮೀರ : ಪುಲ್ವಾಮಾದಲ್ಲಿ ಉಗ್ರ ದಾಳಿ, ರಕ್ಷಣಾ ಪಡೆಯ 7 ಜನರಿಗೆ ಗಾಯ

ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ದಾಳಿ ನಡೆಸಿದ್ದು, ರಕ್ಷಣಾ ಪಡೆಯ 7 ಜನ ಗಾಯಗೊಂಡಿದ್ದಾರೆ. ಬೆಳಿಗ್ಗೆ 4.30 ರ ಸುಮಾರಿಗೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಸಿಆರ್ ಪಿಎಫ್ ಪಡೆಯ 4 ಯೋಧರು ಹಾಗೂ ಜಮ್ಮು ಕಾಶ್ಮೀರದ 3 ಪೋಲೀಸರಿಗೆ ಗಾಯಗಳಾಗಿವೆ. ರಕ್ಷಣಾ ಪಡೆಗಳು ಪ್ರತಿ ದಾಳಿ ನಡೆಸಿದ್ದು, ಓಡಿಹೋದ ಉಗ್ರರು ಪೋಲೀಸ್ ಲೈನ್ ಬಳಿ ಅಡಗಿರಬಹುದೆಂದು ಶಂಕಿಸಲಾಗಿದೆ. ಇನ್ನೂ ಹೆಚ್ಚಿನ ರಕ್ಷಣಾ ಪಡೆಯ ಯೋಧರು ಸ್ಥಳಕ್ಕೆ ಧಾವಿಸಿದ್ದು ಕಾರ್ಯಾಚರಣೆ ನಡೆಸುತ್ತಿದ್ದು, ಗುಂಡಿನ ಚಕಮಕಿ ನಡೆಯುತ್ತಿದೆ.

Comments are closed.

Social Media Auto Publish Powered By : XYZScripts.com