ಲಾಡ್ಜ್ ನಲ್ಲಿ ಬಿಟ್ಟು ಬಂದ ಸೋಪ್… ನೀವು ತಿಳಿಯಲೇಬೇಕಾದ ಸತ್ಯ !

ಸಾಮಾನ್ಯವಾಗಿ ನಾವು ಬೇರೆ ಯಾವುದಾದರೂ ಊರಿಗೆ ಹೋದಾಗ ಅಥವಾ ಪ್ರವಾಸಕ್ಕೆ ಹೋದಾಗ ಹೋಟೆಲ್ ಅಥವಾ ಲಾಡ್ಜ್ಗಳಲ್ಲಿ ರೂಮ್ ಮಾಡಿ ಉಳಿದುಕೊಳ್ಳುತ್ತೇವೆ ಅಲ್ವಾ..? ಆಗ ಸೋಪು ಸೇರಿದಂತೆ ಒಂದಷ್ಟು ಅಲಂಕಾರಿಕ ವಸ್ತುಗಳನ್ನ ಖರೀದಿಸಿ ಅರ್ಧ ಬಳಸಿ, ಉಳಿದಿದ್ದನ್ನ ಅಲ್ಲೇ ಬಿಟ್ಟು ಬರ್ತೇವೆ. ಕೆಲವರು ಉಳಿದದ್ದನ್ನ ಮನೆಗೆ ತಗೊಂಡು ಬರೋದು ಉಂಟು. ಒಂದು ವೇಳೆ ಅರ್ಧ ಬಳಸಿದ ವಸ್ತುಗಳನ್ನ ಹಾಗೆ ಅಲ್ಲೆ ಬಿಟ್ಟು ಬಂದ್ರೆ ಅದನ್ನ ಏನು ಮಾಡ್ತಾರೆ ಅಂತ ಆಲೋಚಿಸಿದ್ದೀರಾ..? ಹೀಗೆ ಹೋಟೆಲ್ ಕೋಣೆಯಲ್ಲಿ ನೀವು ಬಳಸಿ ಬಿಟ್ಟು ಬಂದ ವಸ್ತುಗಳನ್ನ ಏನ್ ಮಾಡ್ತಾರೆ ಅಂತ ಗೊತ್ತಾದ್ರೆ ಅಚ್ಚರಿಪಡ್ತೀರಾ.

ಹೀಗೆ ಅರ್ಧ ಬಳಸಿ ಬಿಟ್ಟು ಬಂದ ವಸ್ತುಗಳನ್ನ ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು ಅನ್ನೋದನ್ನ ಅಮೇರಿಕಾದ ಮಂದಿ ಕಂಡುಕೊಂಡಿದ್ದಾರೆ. ಇಂಥಹದ್ದೊಂದು ಉತ್ತಮ ಕೆಲಸ ವಿಶ್ವದೆಲ್ಲೆಡೆ ಆಗಲಿ ಅಂತ ಕೇಳಿಕೊಳ್ಳೊಣ. ಕೇವಲ ಅಮೇರಿಕಾದಲ್ಲೇ ಅಂದಾಜು 4.6 ಮಿಲಿಯನ್ ಹೋಟೆಲ್ ಕೋಣೆಗಳಿವೆಯಂತೆ. ಅಲ್ಲಿಗೆ ಹೋಗುವವರು ಖಚಿತವಾಗಿ ಅಲ್ಲಿ ಖರೀದಿಸೋ ಸೋಪು, ಶಾಂಪೂ, ಕಂಡೀಷನರ್ ಹೀಗೆ ಯಾವುದನ್ನೂ ಪೂರ್ತಿಯಾಗಿ ಬಳಸದೇ ಬಿಟ್ಟು ಬರ್ತಾರೆ. ಪರಿಶುಭ್ರವಾಗಿ ಇರೋದಕ್ಕೆ ಬಳಸುವ ಈ ವಸ್ತುಗಳೆಲ್ಲಾ ಕಸದ ಬುಟ್ಟಿ ಸೇರಬಾರದು ಅಂತ ‘ಕ್ಲೀನ್ ದಿ ವರ್ಲ್ಡ್’ ಮತ್ತು ‘ ಗ್ಲೋಬಲ್ ಸೋಪ್ ಪ್ರಾಜೆಕ್ಟ್’ ಅನ್ನೋ ಸಂಸ್ಥೆಗಳು ಟೊಂಕ ಕಟ್ಟಿ ನಿಂತಿದ್ದು, ಹೀಗೆ ಅರ್ಧ ಬಳಸಿದ ವಸ್ತುಗಳನ್ನ ಮರುಬಳಕೆ ಮಾಡೋಕೆ ನೆರವಾಗ್ತಿವೆ. ಅರ್ಧಂಬರ್ಧ ಬಳಸಿ ಬಿಸಾಡುವ ಅಲ್ಲಿನ ವಸ್ತುಗಳನ್ನ ರೀಸೈಕ್ಲಿಂಗ್ ಪದ್ಧತಿಯಲ್ಲಿ ಮರುಬಳಕೆ ಮಾಡುವಂತೆ ಹೊಸ ವಸ್ತುಗಳಾಗಿ ಅಭಿವೃದ್ಧಿಪಡಿಸಿ ಬಡ ದೇಶಗಳ ಜನರ ಬಳಕೆಗೆ ತಲುಪಿಸಲಾಗ್ತಿದೆ.

ಹೌದು ಅಮೇರಿಕಾದ ಯಾವುದೇ ಹೋಟೆಲ್ನಲ್ಲಿ ಒಬ್ಬರು ಹೀಗೆ ಬಿಟ್ಟು ಬಂದ ವಸ್ತುಗಳನ್ನ ಕೆಲವೇ ದಿನಗಳಲ್ಲಿ ಹೊಸ ರೂಪದಲ್ಲಿ ಇನ್ನೊಂದು ದೇಶದಲ್ಲಿ ಮತ್ತಾರೋ ಬಳಸುತ್ತಿರುತ್ತಾರೆ. ಆ ಮೂಲಕ ಅವು ನಿರುಪಯುಕ್ತವಾಗಿ, ವ್ಯರ್ಥವಾಗದಂತೆ ನೋಡಿಕೊಳ್ಳಲಾಗ್ತಿದೆ.

ಎಲ್ಲೆಲ್ಲಿ ಶುದ್ಧ ನೀರು, ಪರಿಶುದ್ಧತೆ ಕಡಿಮೆ ಇದ್ಯೋ ಅಲ್ಲಿ ಇಂತಹ ಕಾರ್ಯಕ್ರಮವನ್ನ ಪ್ರಾರಂಭಿಸಲಾಗಿದೆ. ಶುದ್ಧತೆ ಇಲ್ಲದ ಪ್ರದೇಶಗಳಲ್ಲಿ ನ್ಯುಮೋನಿಯಾ, ಡಯೆರಿಯಾ ರೀತಿಯ ಕಾಯಿಲೆಗಳು ವ್ಯಾಪಿಸ್ತಿದೆ. ಅಲ್ಲಿ ಇಂತಹ ವಸ್ತುಗಳನ್ನ ಬಳಸಲಾಗ್ತಿದೆ. ಕಡಿಮೆ ಖರ್ಚಿನಲ್ಲೇ ಇದನ್ನೆಲ್ಲಾ ಮಾಡಲಾಗ್ತಿದೆ. ಬಿಟ್ಟು ಬಂದ ಸಾಬೂನು, ಬಾಡಿ ವಾಶ್, ಕಂಡೀಷನರ್ಗಳನ್ನ ಸ್ವಚ್ಛಗೊಳಿಸಿ, ಕೀಟಾನುರಹಿತವಾಗಿ ಬದಲಿಸಿ, ಅದ್ರ ಸ್ವಚ್ಛತೆಯನ್ನ ಪರಿಶೀಲಿಸಿದ ನಂತ್ರವೇ ಅವಶ್ಯಕತೆ ಇರೋ ಜಾಗಗಳಿಗೆ ಕಳಿಸಿಕೊಡಲಾಗ್ತಿದೆ.

Comments are closed.

Social Media Auto Publish Powered By : XYZScripts.com