ಹರಿಯಾಣ : ರಾಮ್ ರಹೀಮ್ ಬೆಂಬಲಿಗರ ಹಿಂಚಾಚಾರ, 13 ಜನರ ಸಾವು, 150 ಜನರಿಗೆ ಗಾಯ

ಹರಿಯಾಣ : ಡೇರಾ ಸಚ್ಚಾ ಸೌದಾ ದ, ಸ್ವಯಂ ಘೋಷಿತ ದೇವಮಾನವ ಗುರಮೀತ್ ರಾಮ್ ರಹೀಮ್, ಅತ್ಚಾರ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಕೋರ್ಟ್ ತೀರ್ಪು ನೀಡಿದೆ. ಇದರಿಂದ ರೊಚ್ಚಿಗೆದ್ದರುವ ಆತನ ಬೆಂಬಲಿಗರು ಹರಿಯಾಣದ ಪಂಚ್ ಕುಲಾದಲ್ಲಿ ಹಿಂಸಾಚಾರಕ್ಕಿಳಿದಿದ್ದಾರೆ. ಒಂದು ಬಸ್ ಹಾಗೂ ಎರಡು ರೈಲು ಬೋಗಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಘಟನೆಯಲ್ಲಿ 13 ಜನ ಮೃತಪಟ್ಟಿದ್ದು, 150 ಜನ ಗಾಯಗೊಂಡಿದ್ಧಾರೆ. ಪಂಜಾಬ್, ಹರಿಯಾಣ ಹಾಗೂ ದೆಹಲಿಯಿಂದ ಲಕ್ಷಾಂತರ ಬೆಂಬಲಿಗರು ತೀರ್ಪಿಗಾಗಿ ಪಂಚಕುಲಾದಲ್ಲಿ ಸೇರಿದ್ದರು.

Image result for ram rahim violence

ಗುರಮೀತ್ ಅನುಯಾಯಿಗಳ ಹಿಂಸಾಚಾರ ಈಗ ದೇಶದ ರಾಜಧಾನಿ ದೆಹಲಿಗೂ ಹಬ್ಬಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶಾಂತಿ ಕಾಪಾಡುವಂತೆ ಕರೆ ನೀಡಿದ್ದು, ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಪಂಜಾಬ್ ಹಾಗೂ ಹರಿಯಾಣದ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದಾರೆ.

Comments are closed.

Social Media Auto Publish Powered By : XYZScripts.com