ಫುಟ್ಬಾಲ್ : ಕ್ರಿಸ್ಟಿಯಾನೋ ರೊನಾಲ್ಡೋ ಗೆ UEFA ವರ್ಷದ ಆಟಗಾರ ಪ್ರಶಸ್ತಿ

ವಿಶ್ವದ ಖ್ಯಾತ ಫುಟ್ಬಾಲ್ ಆಟಗಾರ ಪೋರ್ಚುಗಲ್ ನ ಕ್ರಿಸ್ಟಿಯಾನೋ ರೊನಾಲ್ಡೋ 2016-17 ಸಾಲಿನ ವರ್ಷದ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರಿಯಲ್ ಮ್ಯಾಡ್ರಿಡ್ ತಂಡದ ಸ್ಟಾರ್ ಆಟಗಾರ ರೊನಾಲ್ಡೋ, ಈ ಪ್ರಶಸ್ತಿಯನ್ನು ಮೂರನೇ ಬಾರಿಗೆ ತಮ್ಮದಾಗಿಸಿಕೊಂಡಿದ್ಧಾರೆ.

‘ ಈ ಟ್ರೋಫಿ ನನಗೆ ಇನ್ನಷ್ಟು ಚೆನ್ನಾಗಿ ಆಡಲು ಪ್ರೇರಣೆ ನೀಡಲಿದೆ. ರಿಯಲ್ ಮ್ಯಾಡ್ರಿಡ್ ತಂಡದಲ್ಲಿರುವದು ನನ್ನ ಅದೃಷ್ಟ ಹಾಗೂ ತುಂಬ ಸಂತಸದ ಸಂಗತಿ ‘ ಎಂದಿದ್ದಾರೆ.

‘ ನನ್ನ ಸಹಆಟಗಾರರು, ಕೋಚ್ ಹಾಗು ಸಿಬ್ಬಂದಿಯವರಿಗೆ ಈ ಟ್ರೋಫಿ ಗೆಲ್ಲಲು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಪರಿವಾರ, ಅಭಿಮಾನಿಗಳಿಗೆ ಇದನ್ನು ಅರ್ಪಿಸಲು ಬಯಸುತ್ತೇನೆ ‘ ಎಂದು ಹೇಳಿದ್ಧಾರೆ.

 

Comments are closed.

Social Media Auto Publish Powered By : XYZScripts.com