ಗಣೇಶನ ಹಬ್ಬಕ್ಕೆ ಗ್ರಾಹಕರ ಕೈ ಸೇರಲಿದೆ 200ರ ಹೊಸ ನೋಟು

ದೆಹಲಿ : ಭಾರತೀಯ ರಿಸರ್ವ್‌ ಬ್ಯಾಂಕ್ 200ರ ಮುಖಬೆಲೆಯ ನೋಟುಗಳನ್ನು ಆಗಸ್ಟ್‌ 25ರಂದು ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದ್ದು, ನಾಳೆಯಿಂದಲೇ 200ರ ನೋಟು ಜನರ ಕೈ ಸೇರಲಿದೆ.

ಕಳೆದ ತಿಂಗಳು 200 ಮುಖಬೆಲೆಯ ನೋಟುಗಳ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಈಗ ಆರ್‌ಬಿಐ ಹೊಸ ನೋಟಿನ ಚಿತ್ರವನ್ನು ಬಿಡುಗಡೆ ಮಾಡಿದ್ದು, ನೋಟು ಕಂದು ಬಣ್ಣದಲ್ಲಿದೆ. ಈ ನೋಟುಗಳು ಮುಂದುವರಿದ ಭದ್ರತಾ ತಂತ್ರಜ್ಞಾನವನ್ನು ಹೊಂದಿರುವುದಾಗಿ ಹೇಳಲಾಗಿದೆ.

ಕಳೆದ ನವೆಂಬರ್‌ನಲ್ಲಿ 500 ಹಾಗೂ 1000ರೂ ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಿ 2000 ಹಾಗೂ 500ರ ಹೊಸ ನೋಟುಗಳನ್ನು ಚಲಾವಣೆಗೆ ತರಲಾಗಿತ್ತು. ಆಗ 2000ದ ನೋಟಿಗೆ ಚಿಲ್ಲರೆ ಸಮಸ್ಯೆ ಉಂಟಾದ ಪರಿಣಾಮ 200 ನೋಟನ್ನು ಜಾರಿಗೆ ತರಲಾಗಿದೆ.

Comments are closed.

Social Media Auto Publish Powered By : XYZScripts.com