ರಿಟೈರ್ ಆದ್ಮೇಲೆ ಏನು ಮಾಡಲಿದ್ದಾರೆ ಧೋನಿ..? ಹೀಗಿದೆ MSD ಮುಂದಿನ ಪ್ಲ್ಯಾನ್

ಎಮ್ ಎಸ್ ಧೋನಿ ಕ್ರಿಕೆಟ್ ನಿಂದ ನಿವೃತ್ತಿ ಕೈಗೊಂಡ ನಂತರ ಏನು ಮಾಡಬೇಕೆಂದು ಯೋಜನೆ ಸಿದ್ದಪಡಿಸಿಕೊಂಡಿದ್ದಾರಂತೆ. ಎಸ್, ಯಾವಾಗ ರಿಟೈರ್ ಆಗುತ್ತಾರೋ ಗೊತ್ತಿಲ್ಲ.. ಆದರೆ ರಿಟೈರ್ಮೆಂಟ್ ನಂತರ ಏನು ಮಾಡಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿದೆ. ಮೂಲಗಳ ಪ್ರಕಾರ ಎಮ್ ಎಸ್ ತಮ್ಮ ನಿವೃತ್ತಿಯ ನಂತರ ರಾಂಚಿಯಲ್ಲಿ ಫೈವ್ ಸ್ಟಾರ್ ಹೋಟೆಲ್ ಬಿಸಿನೆಸ್ ಆರಂಭಿಸಲಿದ್ದಾರಂತೆ. ಈಗಾಗಲೇ ಅದಕ್ಕೆ ಪರವಾನಗಿಯನ್ನು ಸಹ ಪಡೆದಿದ್ದಾರಂತೆ ಮಾಹಿ. ಇದಕ್ಕೆ ಸುಮಾರು 300 ಕೋಟಿ ರೂಪಾಯಿ ದುಡ್ಡು ಸುರಿಯಲಿದ್ದು, ಈ ಹೋಟೆಲ್ ನಲ್ಲಿ 500 ಜನ ಉದ್ಯೋಗಿಗಳು ಕೆಲಸ ಮಾಡಲಿದ್ದಾರಂತೆ.

Image result for five star hotel  Image result for five star hotel

ಇದಕ್ಕೂ ಮೊದಲು ಧೋನಿ, ದುಬೈ ಪ್ಯಾಸಿಫಿಕ್ ಸ್ಪೋರ್ಟ್ಟ್ ಅಕಾಡೆಮಿಯಲ್ಲಿ (PSC) ಕ್ರಿಕೆಟ್ ಅಕಾಡೆಮಿಯೊಂದನ್ನು ತೆರೆಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇಂಡಿಯನ್ ಸುಪರ್ ಲೀಗ್ ನ ಚೆನ್ನೈಯನ್ ಎಫ್ ಸಿ, ಹಾಗೂ ಇಂಡಿಯನ್ ಹಾಕಿ ಲೀಗ್ ನಲ್ಲಿ ರಾಂಚಿ ರೇಸ್ ತಂಡದ ಸಹ ಮಾಲೀಕತ್ವವನ್ನು ಧೋನಿ ಹೊಂದಿದ್ದಾರೆ.