ಲೀಕಾಯ್ತು ಬಿಗ್ ಬಾಸ್ ಮುಂದಿನ ಸೀಸನ್ ಕಂಟೆಸ್ಟೆಂಟ್ಸ್ ಲಿಸ್ಟ್: ಈ ಬಾರಿ ದೊಡ್ಮನೆ ಸೇರೋದು ಯಾರು..?

ಭಾರತೀಯ ಕಿರುತೆರೆ ರಿಯಾಲಿಟಿ ಶೋಗಳ ದೊಡ್ಡಣ್ಣ ಅಂದ್ರೆ ಅದು ಬಿಗ್ ಬಾಸ್. ವರ್ಷದಿಂದ ವರ್ಷಕ್ಕೆ ವೀಕ್ಷಕರ ಸಂಖ್ಯೆಯನ್ನ ಹೆಚ್ಚಿಸಿಕೊಂಡು ಸಕ್ಸಸ್ ಕಾಣ್ತಾ ಮುನ್ನುಗ್ಗುತ್ತಿರೋ ಶೋ ಇದು. ಹಿಂದಿ ನಂತ್ರ ಕನ್ನಡ, ತಮಿಳು, ತೆಲುಗಿನಲ್ಲಿ ಶುರುವಾಗಿರೋ ಈ ಕಾರ್ಯಕ್ರಮ ಸೂಪರ್ ಸಕ್ಸಸ್ ಕಾಣ್ತಿದೆ. ಸ್ಪರ್ಧಿಗಳಿಗೆ ಮಾತ್ರವಲ್ಲದೇ, ವೀಕ್ಷಕರಿಗೂ ಶಾಕ್ ಕೊಡ್ತಾ ಸಾಗೋ ಈ ಕಾರ್ಯಕ್ರಮದ ಹಿಂದಿ ಸರಣಿಯ 11 ಆವೃತ್ತಿ ಅಕ್ಟೋಬರ್ನಲ್ಲಿ ಶುರುವಾಗಲಿದೆ.

 

 

ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಈ ಬಾರಿಯೂ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಳ್ತಿದ್ದು, ಸೆಲೆಬ್ರೆಟಿಗಳ ಜೊತೆ ಸಾಮಾನ್ಯ ಜನರು ಸ್ಪರ್ಧಿಗಳಾಗಿ ಕಾಣಿಸಿಕೊಳ್ತಿದ್ದಾರೆ. ಸದ್ಯ ಹಿಂದಿ ಬಿಗ್ ಬಾಸ್ ಸೀಸನ್ 11ರ ಕಂಟೆಸ್ಟೆಂಟ್ಸ್ ಲಿಸ್ಟ್ ಲೀಕಾಗಿರೋ ಸುದ್ದಿ ಹೊರಬಿದ್ದಿದೆ. ಈ ಬಗ್ಗೆ ಮುಂದೆ ಓದಿ.

ಅಕ್ಟೋಬರ್ ನಲ್ಲಿ ಶುರುವಾಗಲಿರೋ ಬಿಗ್ ಬಾಸ್ ಸೀಸನ್ 11ರಲ್ಲಿ ಭಾಗವಹಿಸೋಕೆ ಈಗಾಗಲೇ ಕೆಲವರನ್ನ ಸಂಪರ್ಕಿಸಲಾಗಿದೆಯಂತೆ. ಕೆಲವರು ಇದನ್ನ ಒಪ್ಪಿಕೊಂಡ್ರೆ, ಮತ್ತೆ ಕೆಲವರು ಮೌನಕ್ಕೆ ಶರಣಾಗಿದ್ದಾರೆ. ಸಾಮಾನ್ಯವಾಗಿ ಬಿಗ್ ಬಾಸ್ ಶೋನಲ್ಲಿ ಯಾರೆಲ್ಲಾ ಸ್ಪರ್ಧಿಸ್ತಾರೆ ಅನ್ನೋದನ್ನ ಕೊನೆ ಕ್ಷಣದವರೆಗೂ ಗೌಪ್ಯವಾಗಿ ಇಡಲಾಗುತ್ತೆ. ಆದ್ರೆ ಒಂದೂವರೆ ತಿಂಗಳ ಮೊದ್ಲೇ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಹೊರಬಿದ್ದು ಅಚ್ಚರಿ ತಂದಿದೆ.

ಮೂಲಗಳ ಪ್ರಕಾರ ಈ ಬಾರಿ  ಹನಿಸಿಂಗ್, ಇಂಟರ್ನೆಟ್ ಸೆನ್ಸೇಷನ್ ಡಿಂಚಕ್ ಪೂಜಾ, ನಿತಿ ಟೈಲರ್, ರಾಹುಲ್ ರಾಜ್ ಸಿಂಗ್, ನವ್ ಪ್ರೀತ್ ಬಂಗಾ, ಡೆವಿಲಿನಾ ಭಟ್ಟಾಚಾರ್ಜಿ, ಅಚಿಂತ್ ಕೌರ್, ವಿಕ್ರಾಂತ್ ಸಿಂಗ್ ರಜಪೂತ್, ನಿಯಾ ಶರ್ಮಾ ಸೇರಿ ಮತ್ತಷ್ಟು ಹೆಸರುಗಳು ಕೇಳಿಬಂದಿದೆ. ಕೊನೆ ಗಳಿಗೆಯಲ್ಲಿ ಕೆಲ ಬದಲಾವಣೆಗಳಾದ್ರೂ ಅಚ್ಚರಿಪಡ್ಬೇಕಾಗಿಲ್ಲ.

One thought on “ಲೀಕಾಯ್ತು ಬಿಗ್ ಬಾಸ್ ಮುಂದಿನ ಸೀಸನ್ ಕಂಟೆಸ್ಟೆಂಟ್ಸ್ ಲಿಸ್ಟ್: ಈ ಬಾರಿ ದೊಡ್ಮನೆ ಸೇರೋದು ಯಾರು..?

  • October 24, 2017 at 11:34 AM
    Permalink

    Someone necessarily assist to make severely articles I might state. This is the very first time I frequented your web page and so far? I amazed with the research you made to create this particular put up extraordinary. Excellent process!

Comments are closed.

Social Media Auto Publish Powered By : XYZScripts.com