ಅಜ್ಜಿಯ ‘ಕೈ ರುಚಿ’ ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ…

ಕನ್ನಡದ ಮೊಟ್ಟ ಮೊದಲ ಮನರಂಜನಾ ವಾಹಿನಿ ಉದಯ ಟಿವಿಯಲ್ಲಿ ಆಗಸ್ಟ್ 28 ರಿಂದ ಸೋಮವಾರದಿಂದ ಶನಿವಾರದವರೆಗೆ ಮಧ್ಯಾಹ್ನ 12 ಗಂಟೆಗೆ “ಕೈರುಚಿ” ಎಂಬ ಹೊಚ್ಚ ಹೊಸ ಅಡುಗೆ ಕಾರ್ಯಕ್ರಮ ಪ್ರಸಾರವಾಗಲಿದೆ.

ಇದುವರೆಗೂ ಹತ್ತಾರು ಅಡುಗೆ ಕಾರ್ಯಕ್ರಮಗಳು ಬಂದಿದ್ದರೂ ಕೈರುಚಿ ಅವೆಲ್ಲಕ್ಕಿಂತ ವಿಭಿನ್ನ ಮತ್ತು ವಿಶೇಷವಾಗಿದೆ. ಕೈರುಚಿ ಕಾರ್ಯಕ್ರಮದ ಪ್ರತಿಯೊಂದು ಸಂಚಿಕೆಯಲ್ಲೂ ಮೂರು ವಿಭಾಗಗಳಿದ್ದು ಪ್ರತಿಯೊಂದು ವಿಭಾಗವೂ ವೈಶಿಷ್ಟ್ಯ ಪೂರ್ಣವಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಸಾಧಕಿಯರನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗಿದೆ.ಈ ಷೋನಲ್ಲಿ ಆ ಅತಿಥಿಗಳ ಕಿರುಪರಿಚಯ ಮಾಡಿ ಆ ಸಾಧಕಿಯ ಆಯ್ಕೆಯ ವಿಶೇಷ ಖಾದ್ಯವನ್ನು ಸ್ವತ: ಅವರ ಕೈಯಿಂದಲೇ ಮಾಡಿಸಲಾಗುವುದು.
ಕನ್ನಡ ಚಿತ್ರರಂಗದ ಖ್ಯಾತ ನಟ ಶರಣ್ ಹಾಗೂ ಪ್ರತಿಭಾನ್ವಿತ ಕಲಾವಿದೆ ಹೆಂಗಳೆಯರ ಕಣ್ಮಣಿ ಶೃತಿಯವರ ತಾಯಿಯವರಾದ ಶ್ರೀಮತಿ ರುಕ್ಮಿಣಿಯವರು ಹಳ್ಳಿ ಸೊಗಡಿರುವ ಸಾಂಪ್ರದಾಯಿಕ ಶೈಲಿಯಲ್ಲಿ ರುಚಿಕರವಾದ ಅಡುಗೆಯನ್ನು ಮಾಡುತ್ತಾರೆ. ಈ ಅಜ್ಜಿ ಕೈರುಚಿಯನ್ನು ಸವಿಯಲು ಹಿರಿತೆರೆ ಹಾಗೂ ಕಿರುತೆರೆಯ ಖ್ಯಾತ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

 

ಆಯುರ್ವೇದ 2000 ವರ್ಷಗಳಿಗೂ ಹೆಚ್ಚು ಹಳೆಯದಾದ ಔಷಧ ಪದ್ಧತಿ, ವೇದಗಳಲ್ಲಿ ಮೂಡಿಬರುವ ಈ ಪದ್ಧತಿಯಲ್ಲಿ ಸರ್ವರೋಗಗಳಿಗೂ ಔಷಧಗಳಿವೆ. ಹಾಗಾಗಿ ಆಯುರ್ವೇದದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮತ್ತು ಮನೆ ಮದ್ದಿನ ಬಗ್ಗೆ ಉಪಯುಕ್ತವಾದ ಸಲಹೆ ಹಾಗೂ ಮಾಹಿತಿಯನ್ನು ವೀಕ್ಷಕರಿಗೆ ತಿಳಿಸಿಕೊಡುವುದಕ್ಕೆ ಆಯುರ್ವೇದಾಚಾರ್ಯರು ಹಾಗೂ ಬಾರ್ಕೂರು ಮಹಾಸಂಸ್ಥಾನದ ಪೀಠಾಧ್ಯಕ್ಷರೂ ಆದ ಶ್ರೀ ಶ್ರೀ ವಿದ್ಯಾವಾಚಸ್ಪತಿ ಡಾ. ವಿಶ್ವ ಸಂತೋಷ ಭಾರತಿ ಶ್ರೀಪಾದರು (ಡಾ. ಸಂತೋಷ್ ಗುರೂಜಿ) ಇರಲಿದ್ದಾರೆ.
ಅನೇಕ ಧಾರವಾಹಿಗಳಲ್ಲಿ ಅಭಿನಯಿಸುತ್ತಿರುವ ಕಿರುತೆರೆಯ ಖ್ಯಾತ ಕಲಾವಿದೆ ಸ್ವಾತಿ ಅವರು “ಕೈರುಚಿ” ಕಾರ್ಯಕ್ರಮದ ನಿರೂಪಕಿ. ವಿಭಿನ್ನ ವಿಶೇಷ ರೀತಿಯ “ಕೈರುಚಿ” ಇದೇ ಸೋಮವಾರದಿಂದ (28.08.2017) ಮಧ್ಯಾಹ್ನ 12ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Comments are closed.

Social Media Auto Publish Powered By : XYZScripts.com