‘ ಯಡಿಯೂರಪ್ಪ ಅವರಿಗಿಂತ ಸಿದ್ದರಾಮಯ್ಯ ಇನ್ನೂ ದೊಡ್ಡ ಢೋಂಗಿ ‘ : ಕುಮಾರಸ್ವಾಮಿ

ಜೆ.ಪಿ.ನಗರದ ತಮ್ಮ ನವೀಕೃತ ನಿವಾಸದಲ್ಲಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸುದ್ದಿಗೋಷ್ಟಿ ನಡೆಸಿದರು.  ‘ ಸಿಎಂ ಸಭೆ ಮೇಲೆ ಸಭೆ ಮಾಡ್ತಿದ್ದಾರೆ. ಸಿದ್ದರಾಮಯ್ಯನವರು ಭಾಷಣ ಮಾಡ್ತಾರೆ. ಯಡಿಯೂರಪ್ಪ ಡೊಂಗಿ ಎಂದು ಹೇಳಿದ್ದನ್ನು ಗಮನಿಸಿದ್ದೇನೆ. ಆದ್ರೆ ಸಿದ್ದರಾಮಯ್ಯನವರು ಇನ್ನೂ ದೊಡ್ಡ ಡೋಂಗಿ. ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದು ಸಿಎಂ ಹೇಳ್ತಿದ್ದಾರೆ. ಆದ್ರೆ ಅದು ಯಾವಾಗ ಬಿಡುಗಡೆ ಮಾಡ್ತೀರಿ. ಹಸಿದ ಹೊಟ್ಟೆಗೆ ಅನ್ನ ಕೊಡ್ತೇವೆ ಅಂತ ಭಾಷಣ ಮಾಡ್ತಾರೆ. ಕೋಲಾರದಲ್ಲಿ ನವಜಾತ ಶಿಶುಗಳು ಸಾಯುತ್ತವೆ. ರಾಯಚೂರಿನಲ್ಲೂ ಇದೆ ಸಮಸ್ಯೆ ಇದೆ. ಹಾಗಾದ್ರೆ ನಿಮ್ಮ ಅನ್ನ ಭಾಗ್ಯ ಯೋಜನೆ ಎಷ್ಟು ಪೌಷ್ಟಿಕತೆ ನೀಡ್ತಿದೆ..? ಎಂದು ಕೇಳಿದರು.

‘ ಸಿಫೋರ್ ಸಂಸ್ಥೆಗೂ ಕಾಂಗ್ರೆಸ್ ಗೂ ಸಂಬಂಧ ಇಲ್ಲ ಅಂತ ಸಿಎಂ ಹೇಳಿದರು. ಆದ್ರೆ ಸಿಫೋರ್ ಮುಖ್ಯಸ್ಥ ಪ್ರೇಂಚಂದ್ ಚಂದ್ ಪಲೇಟಿ ಸರಕಾರ ರಚಿಸಿದ ವಿಷನ್ ಗ್ರೂಪ್ ಸದಸ್ಯರಾಗಿದ್ದಾರೆ. ಹಾಗಂತ ಫೇಸ್ ಬುಕ್ ನಲ್ಲಿ ಖುದ್ದು ಪ್ರೇಂಚಂದ್ ಪೋಸ್ಟ್ ಮಾಡಿದ್ದಾರೆ. ಪ್ರೇಂಚಂದ್ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಜೊತೆ ಫೊಟೋ ತೆಗೆದುಕೊಂಡಿದ್ದಾರೆ. ಇದೇ ಪ್ರೇಂಚಂದ್ ಸಿಎಂ, ಡಿಕೆಶಿ ಜೊತೆ ಊಟ ಮಾಡ್ತಿರುವ ಫೊಟೋವನ್ನು ಸಹಾ ಪೋಸ್ಟ್ ಮಾಡಿದ್ದಾರೆ. ಇಷ್ಟೆಲ್ಲ ಇದ್ದಮೇಲೆ ಸಿಫೋರ್ ಕಾಂಗ್ರೆಸ್ ಗೆ 132 ಅಲ್ಲ 225 ಸ್ಥಾನಗಳನ್ನೂ ಕೊಟ್ಬಿಡ್ತಾರೆ ‘ ಎಂದರು. ಇದೇವೇಳೆ ಪ್ರೇಂಚಂದ್ ಮತ್ತು ಕಾಂಗ್ರೆಸ್ ಸಂಬಂಧದ ಬಗ್ಗೆ ಭಾವಚಿತ್ರಗಳನ್ನು ಎಚ್ಡಿಕೆ ಬಿಡುಗಡೆ ಮಾಡಿದರು.

ನೀವು ತಾತ್ಕಾಲಿಕ ವಾಗಿ ಖುಷಿ ಪಡಿ. ಇದು ನನಗೆ ಚಾಲೆಂಜ್. ಎರಡು ಪಕ್ಷಗಳು ನಮ್ಮನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಬೇಕ್ ಬೇಕಾದ ಜೆಡಿಎಸ್ ಬಳಿ ಬರುತ್ತಾರೆ. ಈ ಬಾರಿ ಸ್ವತಂತ್ರವಾಗಿ ಪಕ್ಷ ಅಧಿಕಾರಕ್ಕೆ ತರೋದಕ್ಕೆ ಅವಕಾಶವಿದೆ. ನಾವು ೧೧೩ ರೀಚ್ ಮಾಡೋದಕ್ಕೆ ಅವಕಾಶವಿದೆ. ಸಿ ಪೋರ್ ಸಮೀಕ್ಷೆ ಉಲ್ಟಾ ಅಗುತ್ತೆ : ಕಾಂಗ್ರೆಸ್ ಗೆ ೩೦-೪೦ ಸೀಟ್ ಬರುತ್ತೆ. ನಾವು ಬಿಜೆಪಿಗಿಂತ ೧೦ ಸೀಟ್ ಹೆಚ್ಚು ಗೆಲ್ಲುತ್ತೆವೆ. ಸೆಂಟ್ರಲ್ ಇಂಟಲಿಜೆನ್ಸ್ ಪ್ರಕಾರ ನಮ್ಮ ಪಕ್ಷ ಕ್ಕೆ ಹೆಚ್ಚು ಸ್ಥಾನ ಅಂತ ಹೇಳಿದೆ. ರಾಜ್ಯ ಇಂಟೆಲಿಜೆನ್ಸ್ ಹಾಗೆ ಇದೆ. ನಾವು ಈ ಬಾರಿ ಬಹುಮತ ಗಳಿಸುತ್ಥೇವೆ. ಬಿಜೆಪಿ ನಾಯಕರು ನಮ್ಮ ಬಳಿ ಬರುತ್ತಾರೆ, ಕಾಂಗ್ರೆಸ್ ನಾಯಕರು ದೇವೆಗೌಡರ ಬಳಿ ಹೋಗುತ್ತಾರೆ.

ಸಿಫೋರ್ ಸಮೀಕ್ಷೆಯನ್ನು ನಾನು ಚಾಲೆಂಜ್ ಆಗಿ ತಗೋತೇನೆ. ಮುಂದಿನ ಚುನಾವಣೆಗೆ ಜೆಡಿಎಸ್ ಗೆ ಸ್ಪಷ್ಟ ಬಹುಮತ ಸಿಗುತ್ತೆ. ಯಾವ ಪಕ್ಷದ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ನಾನೂ ಒಂದು ಸಮೀಕ್ಷೆ ಮಾಡಿಸಿದ್ದೇನೆ. ಆದರೆ ಕಾಂಗ್ರೆಸ್ ನವರ ಥರ ಪ್ರಚಾರ ಮಾಡಿಕೊಳ್ಳಲ್ಲ. 113 ಸ್ಥಾನಗಳು ಸರಕಾರ ರಚಿಸಲು ಬೇಕು. ಮುಂದಿನ ಚುನಾವಣೆಯಲ್ಲಿ 113 ಮುಟ್ಟುವ ಗುರಿ ನಮ್ಮದು. ಆ ಗುರಿ ಮುಟ್ಟುವ ವಿಶ್ವಾಸ ನಮಗಿದೆ. ಸಿಫೋರ್ ಸಮೀಕ್ಷೆ ಸುಳ್ಳಾಗುತ್ತೆ. ಇದನ್ನು ನಾನು  ಸವಾಲಾಗಿ ತಗೋತೇನೆ ಸಿಫೋರ್ ಸಮೀಕ್ಷೆ ಉಲ್ಟಾ ಪಲ್ಟಾ ಆಗುತ್ತೆ. ಜೆಡಿಎಸ್ ಮುಂದಿನ ಸಲ ಬಿಜೆಪಿಗಿಂತ 10 ರಿಂದ 15 ಸ್ಥಾನಗಳನ್ನು ಹೆಚ್ಚು ತಗೋತೇವೆ ‘ ಎಂದರು.

‘ ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಪ್ರಮುಖ ಬೆಳವಣಿಗೆಗಳಾಗ್ತಿವೆ. ಎಲ್ಲ ಬೆಳವಣಿಗೆಗಳನ್ನೂ ನಾನು ಗಮನಿಸುತ್ತಿದ್ದೇನೆ. ಅಮಿತ್ ಷಾ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಅಮಿತ್ ಷಾ ಬಂದಾಗ ನಾನು ತುಂಬ ನಿರೀಕ್ಷೆ ಇಟ್ಕೊಂಡಿದ್ದೆ. ಆದರೆ ಅಮಿತ್ ಷಾ ಬಿಜೆಪಿ ನಾಯಕರ ಜೊತೆ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಲೇ ಇಲ್ಲ. ಕಾಂಗ್ರೆಸ್ ಸೋಲಿಸಿ ಬಿಜೆಪಿ ಅಧಿಕಾರಕ್ಕೆ ತರಲು ರಾಜ್ಯಕ್ಕೆ ಅಮಿತ್ ಷಾ ಬಂದಿದ್ದರು. ಬರಗಾಲ, ರೈತರ ಸಮಸ್ಯೆಗಳು, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಅಮಿತ್ ಷಾ ಮಾತಾಡಲಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರೋದೇ ಅಮಿತ್ ಷಾ ಗುರಿಯಾಗಿದೆ. ರಾಜ್ಯದ ಜನ, ಸಮಸ್ಯೆಗಳ ಬಗ್ಗೆ ಅಮಿತ್ ಷಾ ಗೆ ಕಾಳಜಿ ಇಲ್ಲ ‘ ಎಂದರು.

‘ ಅನಂತ್ ಕುಮಾರ್ ಒಬ್ಬ ಹಿರಿಯ ಜವಾಬ್ದಾರಿಯುತ ಕೇಂದ್ರ ಮಂತ್ರಿ. ಅನಂತ್ ಕುಮಾರ್ ಸೇರಿ ಹಲವು ಬಿಜೆಪಿ ನಾಯಕರು ಡಿಕೆಶಿ ರಾಜೀನಾಮೆಗೆ ಆಗ್ರಹಿಸಿದರು. ಐಟಿ ದಾಳಿ ವೇಳೆ ಆದಾಯ ಮೀರಿ ಆಸ್ತಿ ಸಿಕ್ಕಿದ್ದರೆ, ಒಡವೆ, ಹಣ, ದಾಖಲೆ ಸಿಕ್ಕಿದ್ದರೆ ರಾಜೀನಾಮೆ ಕೇಳಬಹುದಿತ್ತು. ಆದರೆ ಐಟಿ ದಾಳಿಯಲ್ಲಿ ಅಂಥದ್ದೇನೂ ಸಿಕ್ಕಿಲ್ಲ. ಆದರೂ ಬಿಜೆಪಿಯವರು ಡಿಕೆಶಿ ರಾಜೀನಾಮೆ ಕೇಳಿ ಬಾಲಿಶತನ ತೋರಿದರು. ಬಿಜೆಪಿಯವರ ರಾಜೀನಾಮೆ ಒತ್ತಾಯ ಒಪ್ಪುವಂಥದಲ್ಲ ‘

4 thoughts on “‘ ಯಡಿಯೂರಪ್ಪ ಅವರಿಗಿಂತ ಸಿದ್ದರಾಮಯ್ಯ ಇನ್ನೂ ದೊಡ್ಡ ಢೋಂಗಿ ‘ : ಕುಮಾರಸ್ವಾಮಿ

 • October 20, 2017 at 11:26 PM
  Permalink

  Cialis Interazioni Farmaci Cephalexin Reactions viagra Perret Acquistare Levitra Generico

 • October 24, 2017 at 3:10 PM
  Permalink

  I precisely had to appreciate you yet again. I am not sure the things that I would have made to happen in the absence of these pointers shared by you regarding that area of interest. It became an absolute daunting case for me, but being able to see the very expert technique you processed the issue took me to weep with delight. Now i’m happy for the assistance and even hope that you recognize what a powerful job that you are carrying out teaching other individuals thru your web blog. I know that you have never got to know all of us.

 • October 24, 2017 at 3:55 PM
  Permalink

  Yet another thing I would like to talk about is that in lieu of trying to match all your online degree lessons on days of the week that you conclude work (as most people are fatigued when they return), try to arrange most of your sessions on the week-ends and only 1 or 2 courses for weekdays, even if it means taking some time away from your end of the week. This pays off because on the weekends, you will be a lot more rested plus concentrated with school work. Thanks for the different guidelines I have acquired from your website.

Comments are closed.