ಕೊಪ್ಪಳ : ಬಾವಿಗೆ ಬಿದ್ದ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲ, ಗ್ರಾಮಸ್ಥರಲ್ಲಿ ಭಯ

ಕೊಪ್ಪಳ : ನೀರು ಅರಸಿ ಪಾಳುಬಾವಿಗೆ ಬಿದ್ದಿದ್ದ ಆರು ವರ್ಷದ ಗಂಡು ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ಗಂಗಾವತಿ ತಾಲೂಕಿನ ಕರೆಕಲ್ಲಪ್ಪ ಕ್ಯಾಂಪ್ ನಲ್ಲಿ ಘಟನೆ ನಡೆದಿತ್ತು. ಅರಣ್ಯ ಇಲಾಖೆ ಅಧಿಕಾರಿಗಳ ಬೋನು ಹಾಕಿ ಚಿರತೆ  ಹಿಡಿಯುವ ಪ್ರಯತ್ನ ವಿಫಲವಾಗಿದೆ. ಬೋನಿಗೆ ಬೀಳದೆ ಚಿರತೆ ರಾತ್ರಿ ತಪ್ಪಿಸಿಕೊಂಡು ಹೋಗಿದೆ. ಶಿವಮೊಗ್ಗ ದಿಂದ ಚಿರತೆ ಹಿಡಿಯಲು ತಜ್ಞರು ಬರುವಷ್ಟರಲ್ಲಿ ಚಿರತೆ ತಪ್ಪಿಸಿಕೊಂಡು ತಪ್ಪಿಸಿಕೊಂಡು ಹೋಗಿದ್ದು, ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದೆ. ಗ್ರಾಮದಲ್ಲಿ ಅಲ್ಲಲ್ಲಿ ಬೋನು  ಅಳವಡಿಸಿ ಚಿರತೆ ಸೆರೆಹಿಡಿಯಲಾಗುವದು ಎಂದು ಕೊಪ್ಪಳ ಸ‌ಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಹೇಳಿಕೆ‌‌ ನೀಡಿದ್ದಾರೆ.

Comments are closed.

Social Media Auto Publish Powered By : XYZScripts.com