ಸನ್ನಿ ಲಿಯೋನ್ ಬಗ್ಗೆ ನಿಮಗೆ ಗೊತ್ತಿರದ ನಗ್ನ ಸತ್ಯಗಳು….

ಮುಂಬೈ : ಸನ್ನಿ ಲಿಯೋನ್‌. ಬಾಲಿವುಡ್ನ ಐಟಂ ಗರ್ಲ್. ಆಕೆಗೆ ತನ್ನ ಹಳೆಯ ಜೀವನದ ಬಗ್ಗೆ ಸ್ವಲ್ಪವೂ ಬೇಜಾರಿಲ್ಲವಂತೆ. ಆಕೆಯನ್ನು ಹೀಯಾಳಿಸಿ, ಅವಮಾನ ಮಾಡಿ, ಆಕೆಯ ಮೇಲೆ ಜನರೆಲ್ಲ ಕೆಸರು ಎರಚಿದರೂ, ಆಕೆ ಏನೇ ಆಗಿದ್ದರೂ, ಏನೇ ಮಾಡಿದ್ದರೂ, ಆಕೆ ತನ್ನ ಜೀವನದ ಮೇಲಿನ ಉತ್ಸಾಹವನ್ನು ಸ್ವಲ್ಪವೂ ಕಳೆದುಕೊಂಡಿಲ್ಲ. ಆಕೆಯನ್ನು ಸಂದರ್ಶನ ಮಾಡಿದಾಗಲೆಲ್ಲ ಆಕೆ ಪ್ರತೀ ಬಾರಿಯೂ ಸಕಾರಾತ್ಮಕವಾಗಿ ಉತ್ತರಿಸುತ್ತಾರೆ. ಅಲ್ಲದೆ ಸಂದರ್ಶಕರು ಕೇಳುವ ಗೊಂದಲಮಯವಾದ, ಕೀಳು ರೀತಿಯ ಪ್ರಶ್ನೆಗಳು ಆಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಲ್ಲದೆ, ಆಕೆ ಮತ್ತೂ ಪ್ರಭಾವಶಾವಿ ವ್ಯಕ್ತಿತ್ವವಿರುವ ಹುಡುಗಿಯಂತೆ ಕಾಣುತ್ತಾಳೆ ಎಂದು ನೇಹಾ ಗುಪ್ತಾ ಹೇಳಿದ್ದಾರೆ.

ನೇಹಾ ಗುಪ್ತಾ ನಡೆಸಿಕೊಡುವ ‘ನೋ ಫಿಲ್ಟರ್ ನೇಹಾ’ ಎಂಬ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್ಳನ್ನು ಸಂದರ್ಶನ ಮಾಡಿದ ಬಳಿಕ, ಸನ್ನಿ ಬಗ್ಗೆ ಇದ್ದ ಪ್ರೀತಿ ಹೆಚ್ಚಾಯಿತಂತೆ.

ಸನ್ನಿ ತನ್ನ ಜೀವನದ ಬಗ್ಗೆ ಇಟ್ಟಿರುವ ಭರವಸೆ, ಆಕೆಯ ನಡವಳಿಕೆ ಇವೆಲ್ಲವೂ ನೇಹಾಳನ್ನು ಮತ್ತಷ್ಟು ಚಕಿತಗೊಳಿಸಿತ್ತು. ಆದ್ದರಿಂದ ನೇಹಾ ತನ್ನ ಟ್ವಿಟರ್ನಲ್ಲಿ ಸನ್ನಿ ಬಗ್ಗೆ ಬರೆದುಕೊಂಡಿದ್ದು, ಜೀವನದ ಬಗ್ಗೆ ನಿಮಗಿರುವ ಅಮಿತೋತ್ಸಾಹ ನಿಜಕ್ಕೂ ಹೆಮ್ಮೆ ಪಡುವಂತದ್ದು, ನಿಮ್ಮ ಕ್ಷಮಾಪಣೆ ಕೇಳದ, ಯಾರಿಗೂ ಬಗ್ಗದ ಆತ್ಮವಿಶ್ವಾಸ ನನಗೆ ಮೆಚ್ಚುಗೆಯಾಯಿತು ಎಂದು ಬರೆದುಕೊಂಡಿದ್ದಾರೆ.

ಆಕೆ ಎಂದೂ ತನ್ನ ಹಳೆಯ ಜೀವನದ ಬಗ್ಗೆ ಪಶ್ಚಾತ್ತಾಪ ಪಡಲೇ ಇಲ್ಲ. ಸಾಕಷ್ಟು ಬಾರಿ ಸಂದರ್ಶಕರು ಆಕೆಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಮಾತನಾಡಿಸಿದರೂ ಆಕೆ ಜಗ್ಗಲಿಲ್ಲ.
ಇದೇ ವಿಷಯವಾಗಿ ದಿಯಾ ಮಿರ್ಜಾ ಸಹ ಸನ್ನಿ ಲಿಯೋನ್ ಳನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ.

 


ಪಾಸಿಟಿವ್ ಸನ್ನಿ, ಸನ್ನಿ ಸಂದರ್ಶಕರ ಎಲ್ಲಾ ಪ್ರಶ್ನೆಗಳನ್ನು ಸಕಾರಾತ್ಮಕವಾಗಿಯೇ ತೆಗೆದುಕೊಂಡು ಉತ್ತರಿಸಿದ್ದು, ಕೊನೆಗೆ ಸಂದರ್ಶಕರ ಬೆವರಿಳಿಸಿ ಬರುತ್ತಾರೆ. ಆಕೆಯ ಕ್ಷಮಾಪಣೆ ಕೇಳದ ನಡವಳಿಕೆಯಿಂದ ಆಕೆ ಮತ್ತಷ್ಟು ಸ್ಮಾರ್ಟ್ ಆಗಿ ಕಾಣುತ್ತಾರೆ ಎಂದಿದ್ದಾರೆ.

ನೇಹಾ ದೂಪಿಯಾ ಸಹ ಸನ್ನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒತ್ತಡವನ್ನು ಹೇಗೆ ಎದುರಿಸಬೇಕು. ಅದನ್ನು ಸಾವಧಾನವಾಗಿ ಪರಿಹರಿಸುವುದು ಹೇಗೆ ಎಂಬುದನ್ನು ಸನ್ನಿಯಿಂದ ಕಲಿಯಬೇಕು ಎಂದಿದ್ದಾರೆ.

ಇತ್ತೀಚೆಗಷ್ಟೇ ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ. ನಿಜಕ್ಕೂ ಆ ಮಗು ಪುಣ್ಯ ಮಾಡಿದೆ. ಇವರಿಬ್ಬರೂ ಆ ಮಗುವಿಗೆ ಉತ್ತಮ ತಂದೆ ತಾಯಿಯಾಗಿರುತ್ತಾರೆ ಎಂದಿದ್ದಾರೆ.

 

Comments are closed.