ಮೆಗಾ ಸ್ಟಾರ್ ಚಿರಂಜೀವಿ ಬರ್ತ್ ಡೇಗೆ ಪುತ್ರ ರಾಮ್ ಚರಣ್ ಭರ್ಜರಿ ಗಿಫ್ಟ್..!!

ಚಿತ್ರರಸಿಕರಿಗೆ ಮೆಗಾಸ್ಟಾರ್ ಚಿರಂಜೀವಿ ಸಿನಿಮಾಗಳ ಬಗ್ಗೆ ಇದ್ದ ಕ್ರೇಜ್ ಇನ್ನೂ​ ಕಮ್ಮಿಯಾಗಿಲ್ಲ. ಹತ್ತು ವರ್ಷ ಸಿನಿಮಾದಿಂದ ಬ್ರೇಕ್ ತಗೊಂಡು ರಾಜಕೀಯದ ಕಡೆ ಮುಖ ಮಾಡಿದ್ರೂ, ಮತ್ತೆ 150ನೇ ಚಿತ್ರದಲ್ಲಿ ನಟಿಸೋ ಮುಖ ಚಿತ್ರರಂಗಕ್ಕೆ ವಾಪಾಸ್ ಆಗಿದ್ರು. ಈಗ 151ನೇ ಚಿತ್ರ ಸೆಟ್ಟೇರಿದೆ. ಅದ್ರ ಫಸ್ಟ್ ಲುಕ್ ನೋಡಿದ್ರೆ ಖಂಡಿತಾ ಥ್ರಿಲ್ ಆಗ್ತಾರಾ.
ಇಂದು ಮೆಗಾ ಸ್ಟಾರ್ ಚಿರಂಜೀವಿಯ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. 62ನೇ ವಸಂತಕ್ಕೆ ಕಾಲಿಟ್ಟಿರೋ ಚಿರುಗೆ ಪುತ್ರ ರಾಮ್​ ಚರಣ್​​ ತೇಜಾರಿಂದ ಭರ್ಜರಿ ಗಿಫ್ಟ್​ ಸಿಕ್ಕಿದೆ. ಪ್ರಥಮ ಸ್ವಾತಂತ್ರ ಸಂಗ್ರಾಮಕ್ಕೆ ಕಾರಣರಾದ ಹಾಗೂ ಭಾರತದ ಮೊದಲ ಫ್ರೀಡಂ ಫೈಟರ್ ಆಗಿದ್ದ ಉಯ್ಯಾಲ ವಾಡ ನರಸಿಂಹ ರೆಡ್ಡಿಯ ಬಯೋಪಿಕ್ ಅನ್ನ ತೆರೆಮೇಲೆ ತರುತ್ತಿದ್ದಾರೆ. ಸ್ವತಂತ್ರ ಹೋರಾಟಗಾರನ ಪಾತ್ರದಲ್ಲಿ ಮೆಗಾ ಸ್ಟಾರ್​ ಕಾಣಿಸಿಕೊಳ್ಳಲಿದ್ದಾರೆ.
ಸುರೇಂದ್ರ ರೆಡ್ಡಿ ನಿರ್ದೇಶಿಸ್ತಿರೋ ಸೈ ರಾ ನರಸಿಂಹ ಚಿತ್ರದಲ್ಲಿ ಮೆಗಾಸ್ಟಾರ್ ಜೊತೆಗೆ ಬೇರೆ ಭಾಷೆಯ ಸೂಪರ್​ ಸ್ಟಾರ್​ಗಳೂ ಕೈ ಜೋಡಿಸಿದ್ದಾರೆ. ಬಾಲಿವುಡ್​ ಲೆಜೆಂಡ್ ಅಮಿತಾಬ್​ ಬಚ್ಚನ್ ವಿಶೇಷ ಪಾತ್ರದಲ್ಲಿ ಚಿರು ಜೊತೆ ಬಣ್ಣ ಹಚ್ಚಲಿದ್ದಾರೆ. ಇವ್ರೊಂದಿಗೆ ಸ್ಯಾಂಡಲ್​​ವುಡ್​ನಿಂದ ಕಿಚ್ಚ ಸುದೀಪ್, ಕಾಲಿವುಡ್​ನಿಂದ ವಿಜಯ್ ಸೇತುಪತಿ ಹಾಗು ನಾಯಕಿಯಾಗಿ ನಯನತಾರ ಕಾಣಿಸಿಕೊಳ್ಳಲಿದ್ದಾರೆ.
1800ರ ದಶಕದಲ್ಲಿ ಹುಟ್ಟಿಕೊಳ್ಳೋ ಈ ಕಥೆಗೆ ಆಸ್ಕರ್ ಅವಾರ್ಡ್ ಪ್ರಶಸ್ತಿ ವಿಜೇತ ಎ.ಆರ್ ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ಸೈ ರಾ ನರಸಿಂಹ ರೆಡ್ಡಿ ರಾಮ್​ ಚರಣ್​ ತಂದೆಗಾಗಿ ನಿರ್ಮಿಸ್ತಿರೋ ರೆಡ್ಡಿ ಬಿಗ್ ಬಜೆಟ್ ಸಿನಿಮಾ. ಇದೇ ತಿಂಗಳ ಅಂತ್ಯದಲ್ಲಿ ಸೆಟ್ಟೇರಲಿದ್ದು ಮುಂದಿನ ವರ್ಷ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ.

Comments are closed.