ಕುರುಕ್ಷೇತ್ರದಲ್ಲಿ ‘ಉತ್ತರೆ’ಯಾಗಿ ನಿಖಿಲ್‌ ಜೊತೆ ಕಾಣಿಸಿಕೊಳ್ಳಲಿದ್ದಾರೆ ಅದಿತಿ ಆರ್ಯ

ಸ್ಯಾಂಡಲ್‌ ವುಡ್‌ನ ಬಹು ನಿರೀಕ್ಷಿತ ಚಿತ್ರ ಕುರುಕ್ಷೇತ್ರಕ್ಕೆ ಕಲಾವಿದರ ಆಯ್ಕೆ ಮುಂದುವರಿದಿದ್ದು, ಈ ಚಿತ್ರತಂಡಕ್ಕೆ ಮತ್ತೊಬ್ಬ ನಟಿ ಎಂಟ್ರಿ ಕೊಟ್ಟಿದ್ದಾರೆ. ಮಹಾಭಾರತದ ಉತ್ತರೆ ಪಾತ್ರಕ್ಕೆ 2015ರ ಮಿಸ್‌ ಇಂಡಿಯಾ ವಿಜೇತೆ ಅದಿತಿ ಆರ್ಯ ಆಯ್ಕೆಯಾಗಿದ್ದಾರೆ. ಅಭಿಮನ್ಯು ಪಾತ್ರಧಾರಿ ನಿಖಿಲ್‌ ಕುಮಾರ್ಗೆ ಅದಿತಿ ಆರ್ಯ ನಾಯಕಿಯಾಗಲಿದ್ದಾರೆ.

ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರೋ ದರ್ಶನ್‌ 50ನೇ ಚಿತ್ರ ಕುರುಕ್ಷೇತ್ರಕ್ಕೆ ಈಗಾಗಲೆ ಅಂಬರೀಶ್‌, ರವಿಚಂದ್ರನ್‌, ಹರಿಪ್ರಿಯಾ, ಶಶಿ ಕುಮಾರ್, ಸಾಯಿ ಕುಮಾರ್‌, ಲಕ್ಷ್ಮಿ ಸೇರಿದಂತೆ ಹಲವು ಪ್ರಮುಖ ಕಲಾವಿದರು ನಟಿಸುತ್ತಿದ್ದು, ನಿರ್ದೇಶಕ ನಾಗಣ್ಣ ಈ ಚಿತ್ರವನ್ನು ತ್ರಿಡಿ ಎಫೆಕ್ಟ್‌ನಲ್ಲಿ ತೆರೆಗೆ ತರುತ್ತಿದ್ದಾರೆ.

ಸದ್ಯ ಹೈದರಾಬಾದ್‌ನಲ್ಲಿ ಶೂಟಿಂಗ್‌ ನಡೆಯುತ್ತಿದ್ದು, ಮುನಿರತ್ನ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ.

4 thoughts on “ಕುರುಕ್ಷೇತ್ರದಲ್ಲಿ ‘ಉತ್ತರೆ’ಯಾಗಿ ನಿಖಿಲ್‌ ಜೊತೆ ಕಾಣಿಸಿಕೊಳ್ಳಲಿದ್ದಾರೆ ಅದಿತಿ ಆರ್ಯ

Comments are closed.