ಜಕ್ಕೂರಿನಲ್ಲಿ ನಾಳೆ ಮೋಡ ಬಿತ್ತನೆ ಕಾರ್ಯಕ್ರಮಕ್ಕೆ ಸಿಗಲಿದೆ ಚಾಲನೆ

ಮೋಡಬಿತ್ತನೆ ಕಾರ್ಯಕ್ರಮ ನಾಳೆ ದಿನಾಂಕ 21.08.2017 ರಂದು ಬೆಂಗಳೂರಿನ ಜಕ್ಕೂರು ವಿಮಾನ ನೆಲೆಯಿಂದ ವಿದ್ಯುಕ್ತವಾಗಿ ಮಧ್ಯಾಹ್ನ 2:00 ಗಂಟೆಗೆ ಉದ್ಘಾಟನೆಯಾಗಲಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಸನ್ಮಾನ್ಯ ಶ್ರೀ ಎಚ್.ಕೆ. ಪಾಟೀಲ ಅವರು ಮೋಡಬಿತ್ತನೆ ಉದ್ಘಾಟಿಸುವರು.

ಕೃಷಿ ಸಚಿವ ಸನ್ಮಾನ್ಯ ಶ್ರೀ ಕೃಷ್ಣ ಭೈರೇಗೌಡರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಸನ್ಮಾನ್ಯ ಶ್ರೀ ಎಂ.ಆರ್. ಸೀತಾರಾಂ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ತ.ಮ. ವಿಜಯಭಾಸ್ಕರ್ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀ ಮಹೇಶ್ವರ್ ರಾವ್ ಹಾಗೂ ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀ ರಾಕೇಶ್ ಸಿಂಗ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎನ್. ನಾಗಾಂಬಿಕಾದೇವಿ ಇವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

 

ಕರ್ನಾಟಕ ಆಯವ್ಯಯ ಭಾಷಣದಲ್ಲಿ 2017-18ನೇ ಸಾಲಿಗೆ ಸನ್ಮಾನ್ಯ ಮುಖ್ಯ ಮಂತ್ರಿಗಳು ರಾಜ್ಯದಲ್ಲಿ ಸತತವಾಗಿ 3 ವರ್ಷಗಳಿಂದ ಎದುರುಸುತ್ತಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಕಾರ್ಯಕ್ರಮವನ್ನು ಅನುಷ್ಟಾನಕ್ಕೆ ತರಲು ತೀರ್ಮಾನಿಸಲಾಗಿದೆ. ಮೋಡ ಬಿತ್ತನೆ ಕಾರ್ಯಕ್ರಮವು ಈ ಹಿಂದೆ 2003ರಲ್ಲಿ ಜಲಸಂಪನ್ಮೂಲ ಇಲಾಖೆಯಿಂದ ನಿರ್ವಹಿಸಲಾಗಿದ್ದು, ಪ್ರಸ್ತುತ ವರ್ಷದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸಿಗಿತ್ತು.

ರಾಜ್ಯದಲ್ಲಿ ಆವರಿಸಿರುವ ಬರದ ಛಾಯೆಯಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಲಭ್ಯತೆ ಕಡಿಮೆಯಾಗಿದೆ ಮತ್ತು ವ್ಯವಸಾಯ ಚಟುವಟಿಕೆಗಳಿಗೂ ತೊಂದರೆಯಾಗಿರುವುದು ತಿಳಿದ ವಿಷಯವಾಗಿದೆ. ಈ ಮೇಲಿನ ಅಂಶಗಳನ್ನು ಆಧಾರಿಸಿ ತುರ್ತಾಗಿ ಮೋಡ ಬಿತ್ತನೆ ಕಾರ್ಯಕ್ರಮದ ಪ್ರಕ್ರಿಯೆ ಪ್ರಾರಂಭ ಮಾಡಬೇಕಾಗಿರುವ ಪ್ರಯುಕ್ತ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಳಿಸಿ ಸಚಿವ ಸಂಪುಟದ ಅನುಮತಿ ಪಡೆಯಲಾಗಿರುತ್ತದೆ.

ಮೋಡಬಿತ್ತನೆಗಾಗಿ ಯಾದಗಿರಿ ಜಿಲ್ಲೆ ಸುರಪೂರ, ಗದಗ ಹಾಗೂ ಬೆಂಗಳೂರಿನಲ್ಲಿ 3-ರೆಡಾರ್ಗಳನ್ನು ಸ್ಥಾಪಿಸಲಾಗುತ್ತಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಮತ್ತು ಬೆಂಗಳೂರು ಎಚ್.ಎ.ಎಲ್ ವಿಮಾನ ನಿಲ್ದಾಣ ಬಳಸಿಕೊಂಡು 2-ವಿಶೇಷ ವಿಮಾನಗಳಿಂದ ಮೋಡ ಬಿತ್ತನೆ ಕಾರ್ಯಚರಣೆ ಕೈಗೊಳ್ಳಲಾಗುತ್ತದೆ. ಮೋಡ ಬಿತ್ತನೆ ಕಾರ್ಯಕ್ರಮವನ್ನು ಮೆ|| ಹೊಯ್ಸಳ ಪ್ರಾಜೆಕ್ಟ್ (ಪ್ರೈ.) ಲಿಮಿಟೆಡ್ ಇವರಿಗೆ ಟೆಂಡರ್ ಮುಖಾಂತರ ವಹಿಸಲಾಗಿದೆ.

ರಾಜ್ಯದಲ್ಲಿ ಪ್ರಸ್ತುತ ಮೋಡ ಬಿತ್ತನೆ ಕಾರ್ಯಚರಣೆಗೆ ಕೈಗೊಳ್ಳುವ ಪೂರ್ವದಲ್ಲಿ ಕರ್ನಾಟಕ ಸರ್ಕಾರ, ರಾಜ್ಯ ಮಟ್ಟದಲ್ಲಿ 2-ಉನ್ನತ ಸಮಿತಿಗಳನ್ನು ರಚಿಸಿದ್ದು ಅಭಿವೃದ್ಧಿ ಆಯುಕ್ತರು ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣ ಸಮಿತಿ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದ ವಿಜ್ಞಾನಿ ಪ್ರೋ: ಜಿ.ಎಸ್ ಭಟ್ IISಅ ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ತಾಂತ್ರಿಕ ತಜ್ಞರ ಸಮಿತಿಯನ್ನು ರಚಿಸಿ, ಈ ತಜ್ಞರ ಸಲಹೆ ಮೇರೆಗೆ ಯೋಜನೆ ಸಿದ್ದಪಡಿಸಲಾಗಿದೆ.

ತಾಂತ್ರಿಕ ತಜ್ಞರ ಸಮಿತಿಯ ಅಭಿಪ್ರಾಯದಂತೆ ಮೋಡ, ಬಿತ್ತನೆ ಕಾರ್ಯಚರಣೆಯಲ್ಲಿ “ಮಳೆ ಬರಿಸುವ ಮೋಡಗಳನ್ನು ಬರಪೀಡಿತ ಪ್ರದೇಶಗಳಲ್ಲಿ ತರಲು ಆಗುವುದಿಲ್ಲ. ಆದರೆ ದೇಶ ವಿದೇಶಗಳಲ್ಲಿ ಈಗಾಗಲೇ ಕೈಗೊಂಡಿರುವ ವರದಿಯ ಫಲಿತಾಂಶಗಳಿಂದ ಕಂಡು ಬಂದಿರುವಂತೆ, ಮಳೆ ಬರಿಸಬಹುದಾದಂತಹ ಸಾಮಥ್ರ್ಯವುಳ್ಳ ಮೋಡಗಳನ್ನು ಗುರುತಿಸಿ ಶೇ.10 ರಿಂದ 15ರವರೆಗೆ ಮಳೆ ಪ್ರಮಾಣ ವೃದ್ಧಿಸಲು ಸಾಧ್ಯವೆಂದು ಅಭಿಪ್ರಾಯಪಡಲಾಗಿದೆ.

 

ರಾಜ್ಯದಲ್ಲಿ ಮಳೆ ಪ್ರಮಾಣವನ್ನು ಅಳೆಯುವ ಮಾಪನಗಳನ್ನು ಕರ್ನಾಟಕ ರಾಜ್ಯದ ನೈಸರ್ಗಿಕ ವಿಕೋಪ ಮೇಲ್ವಿಚಾರಣ ಕೇಂದ್ರವು ಸ್ಥಾಪಿಸಿರುತ್ತದೆ ಮತ್ತು ಮಳೆ ಮಾಪನಗಳನ್ನು ಆಧುನಿಕ ತಂತ್ರಜ್ಞಾನ ಆಧರಿಸಿ ಮಳೆ ಪ್ರಮಾಣ ಅಳೆಯುವ ಜವಾಬ್ದಾರಿಯನ್ನು ನಿರ್ವಹಿಸುತ್ತಿರುತ್ತದೆ. ಈ ಕಾರ್ಯಾಚರಣೆಗೆ ಇದನ್ನು ಬಳಸುವ ಮೂಲಕ ಪ್ರಸುತ್ತ, ಮೋಡಬಿತ್ತನೆ ಕಾರ್ಯಚರಣೆಯ ಮೌಲ್ಯ ಮಾಪನ ವರದಿಯನ್ನು ನಿರ್ವಹಿಸುವಲ್ಲಿ ಉಪಯೋಗಿಸಿಕೊಳ್ಳಲಾಗುತ್ತದೆ.

ಪ್ರಸ್ತುತ ಮೋಡ ಬಿತ್ತನೆ ಕಾರ್ಯಾಚರಣೆಯನ್ನು ಅನುಷ್ಟಾನಗೊಳಿಸಲು ರಾಜ್ಯ ಮಟ್ಟದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ವಿಷಯ ತಜ್ಞರು ಮತ್ತು ಪರಿಣಿತ ವಿಜ್ಞಾನಿಗಳನ್ನು ಒಳಗೊಂಡ ವಿವಿಧ ತಂಡಗಳಾದ Field Observation Team, Radar Calibration Team, Monitoring & Advisory Team and Evaluation Teamಗಳನ್ನು ರಚಿಸುವ ಮೂಲಕ ವೈಜ್ಞಾನಿಕವಾಗಿ ನಿರ್ವಹಿಸಲಾಗುತ್ತಿದೆ.

“ಒಂದರಿಂದ ಹತ್ತು ಮೈಕ್ರಾನ್ ಗಾತ್ರದ ಮಳೆಹನಿಗಳನ್ನು ಕನಿಷ್ಠ 50 ಮೈಕ್ರಾನ್ ಗಾತ್ರಕ್ಕೆ ಹೆಚ್ಚಿಸುವ ಮೂಲಕ ಸಣ್ಣ-ಪುಟ್ಟ ಹನಿಗಳು ಗಾಳಿಯಿಂದ ಚಲಿಸಿ ಹೋಗದಂತೆ ತಡೆದು ಮಳೆಯ ಪ್ರಮಾಣವನ್ನು ಹೆಚ್ಚಿಸುವ ಮತ್ತು ಮೋಡಗಳಲ್ಲಿ ತೇವಾಂಶವಿದ್ದಾಗಲೂ ಮಳೆ ಬಾರದ ಸ್ಥಿತಿ ಉಂಟಾದಾಗ ತೇವಾಂಶವನ್ನು ಹನಿಯಾಗಿ ಪರಿವರ್ತನೆಗೊಳಿಸುವ ವೈಜ್ಞಾನಿಕವಾಗಿ ಪ್ರೇರೇಪಿಸುವ ತಂತ್ರಜ್ಞಾನವೇ ಮೋಡಬಿತ್ತನೆ. ಮೋಡಬಿತ್ತನೆ ಮಳೆಯ ಪ್ರಮಾಣವನ್ನು ಹೆಚ್ಚಿಸುವ ಒಂದು ವಿಧಾನ. ಮೋಡಗಳಲ್ಲಿ ತೇವಾಂಶವಿದ್ದಾಗಲೂ ಅತಿ ಸೂಕ್ಷ್ಮ ಕಣಗಳ ಅಭಾವವೇ ಮಳೆ ಇಳೆಗೆ ಇಳಿಯದಂತೆ ಮಾಡುವುದು ಕಾರಣವೆಂದು ಮೋಡ ಭೌತಶಾಸ್ತ್ರ (Cloud Physics) ವ್ಯಾಖ್ಯಾನಿಸುತ್ತದೆ. ಕರ್ನಾಟಕದ ಬರ ಪೀಡಿತ ಪ್ರದೇಶಗಳನ್ನು ಸಂಪೂರ್ಣವಾಗಿ ಮೋಡಬಿತ್ತನೆ ವ್ಯಾಪ್ತಿಗೆ ತರಲಾಗುವುದು. ಬರಪರಿಹಾರ ಉಸ್ತುವಾರಿ ಕೋಶದವರು ನಿರ್ಧರಿಸಿರುವಂತೆ ಆಧ್ಯತೆ ಮತ್ತು ಮುನ್ಸೂಚನೆ ಆಧರಿಸಿ ಸಂಭಾವಿತ ಮಳೆ ಸಂಭವಿಸುವ ಸಾಮಥ್ರ್ಯವಿರುವ ಮೋಡಗಳು ಲಭ್ಯವಿರುವ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಮೋಡಬಿತ್ತನೆ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ.

4 thoughts on “ಜಕ್ಕೂರಿನಲ್ಲಿ ನಾಳೆ ಮೋಡ ಬಿತ್ತನೆ ಕಾರ್ಯಕ್ರಮಕ್ಕೆ ಸಿಗಲಿದೆ ಚಾಲನೆ

 • October 20, 2017 at 9:22 PM
  Permalink

  Do you have a spam issue on this blog; I also am a blogger, and I was wondering your situation; we have developed some nice procedures and we are looking to exchange techniques with other folks, be sure to shoot me an e-mail if interested.|

 • October 21, 2017 at 3:16 AM
  Permalink

  Est Priligy Generique Safe Cialis 100 Mg Flagyl By Mail viagra Cialis Funciona Con Alcohol

 • October 21, 2017 at 4:31 AM
  Permalink

  This design is wicked! You most certainly know how
  to keep a reader amused. Between your wit and
  your videos, I was almost moved to start my own blog (well, almost…HaHa!) Wonderful
  job. I really enjoyed what you had to say, and more than that, how you
  presented it. Too cool!

Comments are closed.

Social Media Auto Publish Powered By : XYZScripts.com