ಮೊದಲ ಚಿತ್ರಕ್ಕೆ ಕ್ರೇಜಿ ಪುತ್ರನ ತಯಾರಿ, ಅಪ್ಪನ ಹೆಸರುಳಿಸುವ ಆಸೆ ವಿಕ್ರಮ್ ಗೆ..!!

ಕಲರ್ ಡಾರ್ಕ್ ಇದೆ. ಖದರ್ ಜಬರ್​ ದಸ್ತ.ಹೈಟ್ ಇಲ್ಲ ಅನ್ಕೋಬೇಡಿ. ಒಳ್ಳೆ ಎತ್ತರವೇ ಇರೋದು. ಕ್ರೇಜಿ ಪುತ್ರ ಎಂಬ ಟ್ಯಾಗ್ ಲೈನ್ ಇದೆ. ಮೊದಲ ಚಿತ್ರದಲ್ಲಿಯೇ ಕಿಕ್ ಕೊಡೋ ಕಣ್ಣೋಟ ಇದೆ. ಹುಡುಗಿಯರು ಬೀಳಬೇಕು ಅಷ್ಟೆ.

ಕ್ರೇಜಿ ಅಂದಾಗ ರವಿಚಂದ್ರನ್ ಪುತ್ರನೇ ಅನ್ನೋ ಪ್ರಶ್ನೆ ಹುಟ್ಟುತ್ತದೆ. ನಿಮ್ಮ ಊಹೆ ಸರಿಯಾಗಿಯೇ ಇದೆ. ರವಿಚಂದ್ರನ್ 2ನೇ ಪುತ್ರ ವಿಕ್ರಂ ರವಿಚಂದ್ರನ್ ಕತನೇ ನಾವ್ ಹೇಳ್ತಿರೋದು.ರವಿಚಂದ್ರನ್ ಥರವೇ ಈ ವಿಕ್ರಂ ಇರೋದು. ನೇರ ಮಾತುಗಳೇ. ಆ ಮಾತುಗಳು ಬೇಸ್ ವಾಯ್ಸ್ ನಿಂದ ಬರೋದೇ ಸ್ಪೆಷಲ್.

ಸ್ಪಷ್ಟ ಕನ್ನಡ ಕೂಡ ಗೊತ್ತಿದೆ. ತಮಿಳು ಇನ್​ಪ್ಯೂಲೆನ್ಸ್ ಇಲ್ಲದ ಕನ್ನಡ ಅದು. ಅದರಲ್ಲಿಯೇ ಖಡಕ್ ಆಗಿ ಮಾತ್ ಆಡೋದು ವಿಕ್ರಂ ಗದ್ದು. ಆಟಿಟ್ಯೂಡ್ ಕೂಡ. ಜನ್ಮ ದಿನಕ್ಕೆ ಈ ಹುಡುಗನ ಮೊಟ್ಟ ಮೊದಲ ಟೀಸರ್ ರಿಲೀಸ್ ಆಗಿದೆ. ಇದನ್ನ ನುರಿತ ಟೆಕ್ನಿಷನ್​ ಗಳೇ ಮಾಡಿರೋದು.

ಸಾಹಸ ನಿರ್ದೇಶಕ ರವಿ ವರ್ಮ ಫೈಟ್ಸ್ ಹೇಳಿಕೊಟ್ಟಿದ್ದಾರೆ. ಇಮ್ರಾನ್ ಮಾಸ್ಟರ್ ಬ್ಯೂಟಿಫುಲ್ ಸ್ಟಪ್ಸ್ ಕಲಿಸಿಕೊಟ್ಟಿದ್ದಾರೆ. ಅರುಣ್ ಸಾಗರ್ ಕಲಾ ನಿರ್ದೇಶನದಲ್ಲಿ ವಿಕ್ರಂ ಇನ್ನೂ ಕಲರ್ ಫುಲ್ ಆಗಿಯೇ ಕಂಗೊಳಿಸ್ತಿರೋದು.

ವಿಕ್ರಂ ಅಭಿನಯದ ಕಲಾವಂತಿಕೆ ಮತ್ತು ನೃತ್ಯ ಪ್ರತಿಭೆ ಮೊದಲ ಚಿತ್ರದಲ್ಲಿಯೇ ಕ್ಯಾಪ್ಚರ್ ಆಗುತ್ತಿವೆ. ಅದನ್ನ ಸತ್ಯ ಹೆಗಡೆ ಮಾಡ್ತಿದ್ದಾರೆ. ಸಂಜು ವೆಡ್ಸ್ ಗೀತಾ, ಮೈನಾ ದಂತಹ ಚಿತ್ರ ಕೊಟ್ಟ ನಿರ್ದೇಶಕ ನಾಗಶೇಖರ್ ಗೊತ್ತಲ್ಲ. ಅವರ ಕಲ್ಪನೆಯ ಸತ್ಯ ಘಟನೇಗೆ ಈ ವಿಕ್ರಂ ಈಗ ಹೀರೋ ಆಗಿ ಕಾಲಿಡುತ್ತಿದ್ದಾರೆ. ಮೊದಲ ಚಿತ್ರಕ್ಕೇನೆ ವಿಕ್ರಂ ತಯಾರಿ ಭರ್ಜರಿಯಾಗಿಯೇ ಇದೆ. ತಂದೆ ರವಿಚಂದ್ರನ್ ಬೆಂಬಲ ಈ ಮಗನಿಗೂ ಸಿಕ್ಕಿದೆ. ಅಪ್ಪನ ಹೆಸರುಳಿಸೋಕೆ ಈ ಕ್ರೇಜಿ ಪ್ರಿನ್ಸ್ ಕನಸು ಕಂಡಿದ್ದಾರೆ.

Comments are closed.