ಉತ್ತರ ಪ್ರದೇಶ, ಬಿಹಾರದಲ್ಲಿ ಭಾರೀ ಪ್ರವಾಹ : 170 ಮಂದಿ ಬಲಿ

ದೆಹಲಿ : ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಇದುವರೆಗೂ ಪ್ರವಾಹಕ್ಕೆ ಸಿಕ್ಕಿ ಸಾವಿಗೀಡಾದವರ ಸಂಖ್ಯೆ 170ಕ್ಕೆ ಏರಿಕೆಯಾಗಿದೆ. ಈ ಎರಡೂ ರಾಜ್ಯಗಳ 15 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಬಿಗಡಾಯಿಸಿದ್ದು, ಲಕ್ಷಾಂತರ ಮಂದಿ ದಿಕ್ಕೆಟ್ಟಿದ್ದಾರೆ. ಬಿಹಾರ್ ರಾಜ್ಯವೊಂದರಲ್ಲೇ 24 ಗಂಟೆಯಲ್ಲಿ 34 ಮಂದಿ ಮೃತಪಟ್ಟಿರುವುದಾಗಿ ಮೂಲಗಳು ವರದಿ ಮಾಡಿವೆ.

ಎನ್‌ಡಿಆರ್‌ಎಫ್‌ ತಂಡ ಬಿಹಾರದಲ್ಲೇ ಬೀಡು ಬಿಟ್ಟಿದ್ದು, ಇದುವರೆಗೂ 108 ಲಕ್ಷ ಜನರನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.  ಬಿಹಾರದ ಅರಾರಿಯಾ ಜಿಲ್ಲೆ ಹೆಚ್ಚಿನ ಹಾನಿಗೊಳಗಾಗಿದ್ದು, 30 ಮಂದಿ ಮೃತಪಟ್ಟಿದ್ದಾರೆ. ಚಾಂಪರನ್‌ ಜಿಲ್ಲೆಯಲ್ಲಿ 23 ಮಂದಿ, ಸೀತಾಮರ್ಹಿಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ.

ಮೂಲಗಳ ಪ್ರಕಾರ ಕಳೆದ ಐದು ದಿನದಲ್ಲಿ 4,64,610 ಮಂದಿಯನ್ನು ಯೋಧರು ಹಾಗೂ ವಿಪತ್ತು ನಿಗ್ರಹ ದಳದ ಸಿಬ್ಬಂದಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. 1,289 ನಿರಾಶ್ರಿತ ಶಿಬಿರವನ್ನು ಸ್ಥಾಪಿಸಲಾಗಿದೆ.

 

2 thoughts on “ಉತ್ತರ ಪ್ರದೇಶ, ಬಿಹಾರದಲ್ಲಿ ಭಾರೀ ಪ್ರವಾಹ : 170 ಮಂದಿ ಬಲಿ

Comments are closed.

Social Media Auto Publish Powered By : XYZScripts.com