ಸಾಹೇಬರಿಗೆ ಸುಂದರ ಸಾನ್ವಿ ಮೇಲೆ ಆಸೆ … ಮನೋರಂಜನ್ ಮನದಾಳದ ಮಾತು..

ಸಾಹೇಬ ಬಂದ ದಾರಿ ಬಿಡಿ. ಹಿಂಗೆ ಹೇಳಿದರೆ ತಪ್ಪ ಆಗೋದಿಲ್ಲ. ರವಿಚಂದ್ರನ್ ಪುತ್ರನ ಖದರ್ ಹಂಗಿದೆ. ಮನೋರಂಜನ್ ಎಲ್ಲರಿಗೂ ಗೊತ್ತಿರೋ ಯುವ ನಟ. ಅದು ಬೆಳ್ಳಿ ತೆರೆ ಮೇಲೆ ಅಲ್ಲವೇ ಅಲ್ಲ ಅನ್ನೋದು ಅಷ್ಟೆ ಸತ್ಯ. ಅದಕ್ಕೆ ಕಾರಣ ಒಂದೇ ಇದೆ. ಅಭಿನಯಿಸಿರೋದು ಎರಡು ಚಿತ್ರಗಳು ಇನ್ನೂ ರಿಲೀಸ್ ಆಗಿಲ್ಲ ಅನ್ನೋದು.ಆದರೆ, ಬೇಡಿಕೆ ಚಿತ್ರದಿಂದ ಚಿತ್ರಕ್ಕೆ ಹೆಚ್ಚುತ್ತಿದೆ.

ಮನೋರಂಜನ್ ಒಳ್ಳೆ ಹುಡ್ಗ. ಸೌಮ್ಯ ಸ್ವಭಾವದ ನಟ. ತಂದೆ ರವಿಚಂದ್ರನ್ ರೂಪ ಯಥಾವತ್ತು ಬಂದಿದೆ. ಇಂಡಸ್ಟ್ರೀ ಮಂದಿನೂ ಹಂಗೇ ಹೇಳೋದು. ಮನೋರಂಜನ್ ಥೇಟ್ ರವಿ ಸರ್ ಥರವೇ ಇರೋದು ಅಂತ. ಅದು ನೋಡುಗರಿಗೂ ಅನಿಸದೇ ಇರದು. ಆನ್ ಕ್ಯಾಮೆರಾನೂ ಸರಿ. ಆಫ್ ಕ್ಯಾಮೆರಾನೂ ಸರಿ.

ಮನೋರಂಜನ್ ಮಾತು ನೇರವಾಗಿಯೇ ಇರುತ್ತವೆ. ಆದರೆ, ಅಲ್ಲಿ ಸಾಫ್ಟ್ ಟಚ್ ಇರೋದೇ ಹೆಚ್ಚು. ಅದು ಮನೋರಂಜನ್ ಮನಸ್ಥಿತಿ. ಮನು, ಮಾತ್ ಕಡಿಮೆ ಆಡೋ ಸಾಹೇಬ. ಸಾಹೇಬ ಯಾಕೆ ಅಂತ ಹೇಳ್ತೀವಿ ಅಂದ್ರೆ,  ಅದಕ್ಕೆ ಕಾರಣ ಬೇರೆ ಏನೋ ಇಲ್ಲ. ಸಾಹೇಬ ಚಿತ್ರದಲ್ಲಿ ಮನು ಅಭಿನಯಿಸಿರೋದು. ಸಾಹೇಬ ಚಿತ್ರವೇ ಮನುಗೆ ಮೊದಲ ಸಿನಿಮಾ. ಇದೇ ಆಗಸ್ಟ್-25 ಕ್ಕೆ ಈ ಚಿತ್ರ ರಿಲೀಸ್ ಆಗುತ್ತಿದೆ.

ಮನುಗೆ ಪ್ರಶ್ನೆ ಕೇಳಿದರೆ ಉದ್ದನೆಯ ಉತ್ತರ ಬರೋದಿಲ್ಲ. ಚುಟುಕಾದ ಒಂದೇ ಮಾತಲ್ಲಿ ಪ್ರಶ್ನೆಗೆ ಉತ್ತರ ಕೊಡ್ತಾರೆ. ಅದು ನೇಚರ್. ಆ ನೇಚರ್ ಗೆ ಕೇಳಿದ ಪ್ರಶ್ನೆ ಸಿಂಪಲ್ ಸಿಂಪಲ್. ಅಪ್ಪನಂತೆ ರೋಮ್ಯಾನ್ಸ್ ಮಾಡೋಕೆ ಇಷ್ಟಾನಾ…? ಇಷ್ಟೇ ಅಂದ್ರೆ ಸಾಕು. ನೋ..ನೋ.ನೋ ರೋಮ್ಯಾನ್ಸ್ ಗೆ ಅಪ್ಪನೇ ಅಲ್ಟಿಮೇಟ್. ನಮಗೆಲ್ಲ ಅದು ಬರೋದಿಲ್ಲ ಅಂದು ಬಿಡ್ತಾರೆ.

ಮತ್ತೊಂದು ಪ್ರಶ್ನೆ ತೂರಿ ಬಿಟ್ಟರೂ ಅಷ್ಟೆ. ಅದನ್ನ ಅಷ್ಟೇ ಬ್ರೀಲಿಯಂಟ್ ಆಗಿ ಕ್ಯಾಚ್ ಮಾಡೋ ಮಿಸ್ಟರ್ ಮನು, ಅಪ್ಪನ ಹಾಡಿಗೆ ಕುಣಿದಿದ್ದು ನೆನಪಿಸಿಕೊಳ್ತಾರೆ. ‘ಯಾರೇ ನೀನು ರೋಜಾ ಹೂವೇ’ ಹಾಡದು. ಅದನ್ನ ಸಾಹೇಬ ಚಿತ್ರದಲ್ಲಿ ಡೈರೆಕ್ಟರ್ ಭರತ್ ಬಳಸಿಕೊಂಡಿದ್ದಾರೆ. ಅದರ ಬಗ್ಗೆ ಕೇಳಿದರೆ ಉತ್ತರ ಅಲ್ಲೂ ಚುಟುಕು. ಅಪ್ಪನ ಹಾಡು ಬಳಸಿಕೊಳ್ಳಲು ಹೆಚ್ಚು ಯೋಚಿಸಿದ್ದೇವೆ.ಕೊನೆಗೆ ಅದು ಫೈನಲ್ ಆಗಿದೆ. ಅದರಲ್ಲಿ ಮಾತ್ರ ಒಂಚೂರು ರೋಮ್ಯಾನ್ಸ್ ನಿಮ್ಗೆ ಕಾಣಿಸಿದರೂ ಕಾಣಿಸಬಹುದು.

ಮನುಗೆ ಒಬ್ಬ ನಟಿ ತುಂಬಾ ಇಷ್ಟ. ಮೊದಲ ಚಿತ್ರದಲ್ಲಿಯೇ ಆಕೆ ಬಗ್ಗೆ ಏನೋ ಒಂದ ಥರ ಅಳುಕಿತ್ತು. ಹಲವು ಪ್ರಶ್ನೆಗಳೂ ಇದ್ದವು. ಹೋಗ್ತಾ ಹೋಗ್ತಾ ಅದು ಕಡಿಮೆ ಆಗಿದೆ. ಆ ಚೆಲುವೇನೆ ಈ ಹೀರೋಗೆ ಕನ್ನಡದಲ್ಲಿ ಮಾತ್ ಆಡೋ ಅನ್ನೋ ಮಟ್ಟಿಗೆ ಸಲಿಗೆ ಬೆಳೆದಿದೆ. ಆಕೆ ಜೊತೆಗೆ ಮತ್ತೆ ಅಭಿನಯಿಸೋಕೆ ಮನು ಆಸೆ ಪಟ್ಟಿದ್ದಾರೆ. ಅದು ಯಾರು ಅಂತ ನಾವ್ ಹೇಳೋದಿಲ್ಲ. ಸ್ವತ: ಮನು ಹೇಳಿದ್ದು ಇದು. ಆಕೆನೇ ಸಾನ್ವಿ ಶ್ರೀವಾತ್ಸವ್.

ಮನುಗೆ ಡ್ಯಾನ್ಸರ್ ಗಳಲ್ಲಿ ಪವರ್ ಪುನೀತ್ ಇಷ್ಟ. ಡೈರೆಕ್ಟರ್ ಗಳಲ್ಲಿ ಅಪ್ಪನೇ ಎಲ್ಲ. ಅಪ್ಪನೇ ಸೂಪರ್ ಡೈರೆಕ್ಟರ್. ಬೇರೆ ಯಾರೂ ಇಷ್ಟ ಆಗೋದೇ ಇಲ್ಲ. ತಿಂಡಿಗಳಲ್ಲಿ ವೆಚ್ ನಾನ್​ ವೆಜ್ ಎರಡೂ ಬೇಕು.ಎರಡನೇ ಸಿನಿಮಾ ವಿಐಪಿ.ಡೈರೆಕ್ಟರ್ ನಂದ್ ಕೀಶೋರ್ ಮುಗಿಸಿಕೊಟ್ಟಿದ್ದಾರೆ. ಮೂರನೇದ್ದು ರಾಕ್ ಸ್ಟಾರ್ ಅಂತಾರೆ. ಇನ್ನೂ ಏನೂ ಫೈನಲ್ ಆಗಿಲ್ಲ.ಮನು ಕಥೆ ಕೇಳ್ತಿದ್ದಾರೆ.  ಸೋದರ ವಿಕ್ರಂ ಜತೆಗೆ ಚರ್ಚೆ ನಡೆಯುತ್ತಿದೆ. ಇಬ್ಬರೂ ಅದನ್ನ ಫೈನಲ್ ಮಾಡಿದ ಮೇಲೆ ಅಪ್ಪನ ಮುಂದೆ ಕಥೆ ಹೋಗುತ್ತದೆ. ಅಲ್ಲಿವರೆಗೂ ವೇಟ್ ಮಾಡಿ.

 

One thought on “ಸಾಹೇಬರಿಗೆ ಸುಂದರ ಸಾನ್ವಿ ಮೇಲೆ ಆಸೆ … ಮನೋರಂಜನ್ ಮನದಾಳದ ಮಾತು..

Comments are closed.

Social Media Auto Publish Powered By : XYZScripts.com