ಕಾಂಗ್ರೆಸ್‌ನವರಿಗೆ ಖಂಡಿತ ಉಳಿಗಾಲವಿಲ್ಲ : ಸದಾನಂದ ಗೌಡ

ಬೆಂಗಳೂರು : ಬಿಎಸ್ ಯಡಿಯೂರಪ್ಪ ಅವರ ವಿರುದ್ಧದ ಶಿವರಾಮ ಕಾರಂತ ಬಡಾವಣೆಯ ಡಿನೋಟಿಫಿಕೇಷನ್ ವಿಚಾರ ಸಂಬಂಧ ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆ ನೀಡಿದ್ದಾರೆ. ಇಷ್ಟು ದಿನ ಕುಂಭಕರ್ಣ ನಿದ್ದೆಯಲ್ಲಿ ಇದ್ದರು. ಈಗ ಹಳೆ ಪ್ರಕರಣಕ್ಕೆ ಜೀವಕೊಟ್ಟಿದ್ದಾರೆ.

ಶಿವರಾಮ ಕಾರಂತ ಬಡಾವಣೆ ಪ್ರಕರಣ ಮುಗಿದಿದೆ. ಡಿ.ಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ಆದ ಮೇಲೆ ಪ್ರಕರಣಕ್ಕೆ ಜೀವಕೊಟ್ಟಿದ್ದಾರೆ.  ಬಿಎಸ್‌ವೈ ವಿರುದ್ದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಉಳಿಗಾಲವಿಲ್ಲ. ಇದೊಂದು ರಾಜಕೀಯ ಪ್ರೇರಿತ ಪಿತೂರಿ .ರಾಜಕೀಯ ದ್ವೇಷ ಸರಿಯಲ್ಲ ಎಂದಿದ್ದಾರೆ.  ಎಸಿಬಿಯಲ್ಲಿ ಸಿದ್ದರಾಮಯ್ಯ ಅವರ ಮೇಲೆ ಎಷ್ಟು ಕೇಸ್ ಇದೆ, ಎಷ್ಟು ಎಫ್ಐಆರ್ ದಾಖಲು ಮಾಡಲಾಗಿದೆ ಎಂಬುದನ್ನು ಬಹಿರಂಗ ಮಾಡಲಿ ಎಂದಿದ್ದಾರೆ.

 

ಇದೇ ವೇಳೆ ಬೆಂಗಳೂರಿಗೆ ವಿಶೇಷ ಸೌಲಭ್ಯಗಳು ಅಗತ್ಯ ಇದೆ. ನಗರದ ಅಭಿವೃಧಿಗೆ ರಾಜ್ಯ ಹಾಗೂ ಕೇಂದ್ರ ಗಮನ ನೀಡಬೇಕು. ಟ್ರಾಫಿಕ್ ನಿಂದ ನಿಗಧಿತ ಅವಧಿಗೆ ತಲುಪುವುದಕ್ಕೆ ಆಗ್ತಿಲ್ಲ. ಮೆಟ್ರೋ ಕಾಮಗಾರಿಗೆ ಕೇಂದ್ರ ಹಣ ಬಿಡುಗಡೆ ಮಾಡಿದೆ.ಅಭಿವೃದ್ಧಿ ಏಕಮುಖದಿಂದ ಸಾಧ್ಯವಿಲ್ಲ. ರಾಜ್ಯ ಸರ್ಕಾರದ ಸಹಾಯ ಅಗತ್ಯ ಎಂದಿದ್ದಾರೆ.

Comments are closed.