ಕಲರ್ಸ್ ಕನ್ನಡದಲ್ಲಿ ಬ್ಲಾಕ್‍ ಬಸ್ಟರ್‍ ಮೂವೀ ‘ಕಿರಿಕ್ ಪಾರ್ಟಿ’ ಡಬಲ್ ಧಮಾಕಾ !

ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಯಶಸ್ಸನ್ನು ಗಳಿಸಿದ ಕಾಲೇಜು ಹುಡುಗರ ಸ್ಟೋರಿ “ಕಿರಿಕ್ ಪಾರ್ಟಿ” ಕಿರುತೆರೆಯಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ಶನಿವಾರ ಪ್ರಸಾರವಾಗುತ್ತಿದ್ದು, ಭಾನುವಾರ ಮರುಪ್ರಸಾರವಾಗಲಿದೆ.

 

200 ದಿನಗಳನ್ನೂ ದಾಟಿ ಯಶಸ್ವಿ ಪ್ರದರ್ಶನಗೊಳ್ಳುತ್ತಿರುವ ಚಲನಚಿತ್ರವನ್ನ ಪ್ರಪ್ರಥಮ ಬಾರಿಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ  ಹೊಸ ಇತಿಹಾಸ ಸೃಷ್ಟಿಸಿದ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ.

ಈ ಬ್ಲಾಕ್ ಬಸ್ಟರ್ ಮೂವೀ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಗಸ್ಟ್ 19ರ ಶನಿವಾರ ರಾತ್ರಿ 8ಗಂಟೆಗೆ ಮತ್ತು ಅಗಸ್ಟ್ 20ರ ಭಾನುವಾರ ಸಂಜೆ 4 ಗಂಟೆಗೆ ಪ್ರಸಾರವಾಗಲಿದೆ. ಹಬ್ಬಗಳ ಸಂಭ್ರಮ ಸಡಗರದಲ್ಲಿರುವ ವೀಕ್ಷಕರಿಗೆಲ್ಲ ವರ್ಷದ ಅತ್ಯಂತ ಯಶಸ್ವಿ ಚಿತ್ರ “ಕಿರಿಕ್ ಪಾರ್ಟಿ”ಯನ್ನು ಕಲರ್ಸ್ ಕನ್ನಡ ಉಣಬಡಿಸುತ್ತಿದೆ.

Comments are closed.

Social Media Auto Publish Powered By : XYZScripts.com