ಬಿಎಸ್‌ವೈ ಸಿಲುಕಿಸಲು ಕುತಂತ್ರ : ಅಧಿಕಾರಿಗಳಿಂದ ಮಾಹಿತಿ ಬಹಿರಂಗ

ಬೆಂಗಳೂರು : ಬಿಎಸ್‌ವೈ ವಿರುದ್ಧದ ಡಿನೋಟಿಫೈ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಅಧಿಕಾರಿಯೊಬ್ಬರಿಂದ ಸ್ಫೋಟಕ ಸತ್ಯ ಬಹಿರಂಗಗೊಂಡಿದ್ದು, ಪ್ರಕರಣದಲ್ಲಿ ಬಿಎಸ್‌ವೈರನ್ನ ಸಿಲುಕಿಸಲು ಎಸಿಬಿ ಡಿವೈಎಸ್‌ಪಿಗಳಾದ ಬಾಲರಾಜ್‌, ಜಿ.ಕೆ ಆಂಥೋನಿಯಿಂದ ಒತ್ತಡ ಬರುತ್ತಿರುವುದಾಗಿ ಗಣಿ ಇಲಾಖೆಯ ಉಪಕಾರ್ಯದರ್ಶಿ ಬಸವರಾಜೇಂದ್ರ ಹೇಳಿದ್ದಾರೆ.

ಸರ್ಕಾರದಿಂದ ಎಸಿಬಿ ದುರ್ಬಳಕೆಗೆ ತಂತ್ರ ಹೆಣೆಯಲಾಗಿದ್ದು, ಗಣಿ ಇಲಾಖೆಯ ಉಪಕಾರ್ಯದರ್ಶಿ ಬಸವರಾಜೇಂದ್ರ ಅವರಿಗೆ ಒತ್ತಡ ಬರುತ್ತಿರುವುದಾಗಿ ಆರೋಪಿಸಿದ್ದಾರೆ. ಈ ಕುರಿತು ಬಸವರಾಜೇಂದ್ರ, ಮಾನವ ಹಕ್ಕುಗಳ ಆಯೋಗ, ಡಿಪಿಆರ್ ಕಾರ್ಯದರ್ಶಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಆಗಸ್ಟ್ 6ರಿಂದ 10ರವರೆಗೆ ಬಸವರಾಜೇಂದ್ರಗೆ ಎಸಿಬಿ ಡಿವೈಎಸ್‌ಪಿ ಬಾಲರಾಜ್‌ರಿಂದ ದೂರವಾಣಿ ಕರೆ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಆದೇಶಿಸಲಾಗಿತ್ತು. ಬಾಲರಾಜ್ ಸೂಚನೆಯಂತೆ ವಿಚಾರಣೆಗೆ ಹಾಜರಾಗಿದ್ದ ಬಸವರಾಜೇಂದ್ರರ ಮೇಲೆ ಬಿಎಸ್‌ವೈ ವಿರುದ್ದ ಹೇಳಿಕೆ ನೀಡುವಂತೆ ಒತ್ತಡ ಹೇರಿರುವುದಾಗಿ ಆರೋಪಿಸಿದ್ದಾರೆ.

Comments are closed.