ಬಾರ್ಸಿಲೋನಾ ದಾಳಿ : ಪೋಲೀಸರ ಗುಂಡಿಗೆ ಶಂಕಿತ ಉಗ್ರ ಮೌಸಾ ಬಲಿ

ಬಾರ್ಸಿಲೋನಾ ಭಯೋತ್ಪಾದಕ ದಾಳಿಯ ಪ್ರಮುಖ ಶಂಕಿತ ಎಂದು ಹೇಳಲಾಗುತ್ತಿರುವ 17 ವರ್ಷದ ಮೌಸಾ ಔಕಬೀರ್ ನನ್ನು ಪೋಲೀಸರು ಕ್ಯಾಂಬ್ರಿಲ್ಸ್ ನಗರದಲ್ಲಿ ಹೊಡೆದುರುಳಿಸಿದ್ದಾರೆ.

ಗುರುವಾರ ನಡೆದ ದಾಳಿಯಲ್ಲಿ 14 ಜನ ಮೃತಪಟ್ಟು, 100 ಜನರು ಗಾಯಗೊಂಡಿದ್ದರು. ಅಪರಿಚಿತ ವ್ಯಾನ್ ನ್ನು ಬಳಸಿದ ಉಗ್ರರು ಪಾದಚಾರಿಗಳ ಮೇಲೆ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಹತ್ಯೆಗೈದಿದ್ದರು. ದಾಳಿ ನಡೆದ ಕೆಲ ಗಂಡೆಗಳ ನಂತರ ನಾಲ್ವರು ಶಂಕಿತ ಭಯೋತ್ಪಾದಕರನ್ನು, ಪೋಲೀಸರು ಗುಂಡಿಟ್ಟು ಕೊಂದಿದ್ದರು. ಮೊರಾಕ್ಕೋ ಹಾಗೂ ಮೆಲಿಲಾ ಮೂಲದ ಇಬ್ಬರು ಶಂಕಿತರನ್ನು ಶುಕ್ರವಾರ ಬಂಧಿಸಲಾಗಿತ್ತು.

ಸಿರಿಯಾದಲ್ಲಿ ನಡೆಸಲಾದ ವೈಮಾನಿಕ ದಾಳಿಗೆ ಇದು ಪ್ರತ್ಯುತ್ತರ ಎಂದು ಐಸಿಸ್ ಹೇಳಿ, ಹೊಣೆ ಹೊತ್ತುಕೊಂಡಿತ್ತು.

 

Comments are closed.