ಬಾರ್ಸಿಲೋನಾ : ಉಗ್ರ ದಾಳಿಯಲ್ಲಿ 13 ಜನ ಸಾವು, 100 ಕ್ಕೂ ಹೆಚ್ಚು ಜನರಿಗೆ ಗಾಯ

ಬಾರ್ಸಿಲೋನಾ : ಸ್ಪೇನ್ ನ ಬಾರ್ಸಿಲೋನಾ ನಗರದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 13 ಜನ ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಬಾರ್ಸಿಲೋನಾ ನಗರದ ಸುಪ್ರಸಿದ್ಧ ಲಾಸ್ ರಾಂಬ್ಲಾಸ್ ಪ್ರವಾಸಿ ತಾಣದಲ್ಲಿ ಈ ದಾಳಿ ನಡೆದಿದ್ದು, ಉಗ್ರರು ವ್ಯಾನ್ ನ್ನು ಪಾದಚಾರಿಗಳ ಮೇಲೆ ಯದ್ವಾತದ್ವಾ ಹರಿಸಿ ಹತ್ಯೆಗೈದಿದ್ದಾರೆ. ಸ್ಪೇನ್ ದೇಶಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ದಾಳಿ ಮಾಡಿದವರ ಪೈಕಿ ಇಬ್ಬರನ್ನು ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಗ್ರರು ಮೊರಾಕ್ಕೋ ಮೂಲದವರು ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ಎರಡನೇ ದಾಳಿ ನಡೆಸಲು ಯತ್ನಿಸಿದ 5 ಜನ ಶಂಕಿತರನ್ನು ಪೋಲೀಸರು ಹೊಡೆದುರುಳಿಸಿದ್ದಾರೆ.

ದಾಳಿಯ ಹೊಣೆಯನ್ನು ಭಯೋತ್ಪಾದಕ ಸಂಘಟನೆ ಐಸಿಸ್ ಹೊತ್ತುಕೊಂಡಿದೆ.

Comments are closed.

Social Media Auto Publish Powered By : XYZScripts.com