FOOTBALL : ರಿಯಲ್ ಮ್ಯಾಡ್ರಿಡ್ ತಂಡಕ್ಕೆ ‘ ಸ್ಪ್ಯಾನಿಷ್ ಸೂಪರ್ ಕಪ್ ‘

ರಿಯಲ್ ಮ್ಯಾಡ್ರಿಡ್ ತಂಡ, ಸ್ಪ್ಯಾನಿಷ್ ಸೂಪರ್ ಕಪ್ ನ ಎರಡನೇ ಪಂದ್ಯದಲ್ಲಿ ಬಾರ್ಸಿಲೋನಾ ವಿರುದ್ಧ 2-0 ರಿಂದ ಜಯಗಳಿಸಿದೆ. 5 ಪಂದ್ಯಗಳ ಅಮಾನತಿಗೆ ಒಳಗಾಗಿರುವ ಪ್ರಮುಖ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅನುಪಸ್ಥಿತಿಯಲ್ಲಿಯೂ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ರೋನಾಲ್ಡೊ ಸ್ಥಾನದಲ್ಲಿ ತಂಡವನ್ನು ಸೇರಿಕೊಂಡಿದ್ದ ಮಾರ್ಕೊ ಅಸೆನ್ಸಿಯೊ ಹಾಗೂ ಕರಿಮ್ ಬೆಂಜೆಮಾ ತಲಾ ಒಂದು ಗೋಲ್ ಬಾರಿಸಿದರು.

Image result for ronaldo ban   Image result for ronaldo ban

ಮೊದಲ ಪಂದ್ಯದಲ್ಲಿಯೂ ರಿಯಲ್ ಮ್ಯಾಡ್ರಿಡ್ 3-1 ರಿಂದ ಜಯಗಳಿಸಿತ್ತು. ಮೊದಲ ಪಂದ್ಯದ ವೇಳೆ ರೆಫರಿಯನ್ನು ತಳ್ಳಿ ರೆಡ್ ಕಾರ್ಡ್ ಪಡೆದು ಹೊರನಡೆದಿದ್ದ ರೊನಾಲ್ಡೋ, ನಂತರ 5 ಪಂದ್ಯಗಳ ನಿಷೇಧಕ್ಕೆ ಒಳಗಾಗಿದ್ದರು. ಫ್ರಾನ್ಸ್ ನ ಮಾಜಿ ಫುಟಬಾಲ್ ಆಟಗಾರ ಜಿನೆಡಿನ್ ಜಿಡಾನ್ ಮ್ಯಾನೇಜರ್ ಹಾಗೂ ಕೋಚ್ ಆದ ಬಳಿಕ, 20 ತಿಂಗಳ ಅವಧಿಯಲ್ಲಿ ರಿಯಲ್ ಮ್ಯಾಡ್ರಿಡ್ 7 ಟ್ರೋಫಿಗಳನ್ನು ಜಯಿಸಿದೆ.

Comments are closed.

Social Media Auto Publish Powered By : XYZScripts.com