ಭಾರತೀಯ ಯೋಧರ ರಕ್ತ ಹೀರಲು ರಕ್ತ ದಾನ ಶಿಬಿರ ಮಾಡುತ್ತಿದೆ ಚೀನಾ…!

ಬೀಜಿಂಗ್‌ :  ಡೋಕ್ಲಾಂ ವಿಚಾರದಲ್ಲಿ ಬಾರತ -ಚೀನಾ ಮಧ್ಯೆ ಸಾಕಷ್ಟು ಬಿಕ್ಕಟ್ಟು ಇರುವಾಗಲೇ ಚೀನಾ ಡೋಕ್ಲಾಂ ಪ್ರದೇಶದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿದೆ. ಚೀನಾ ಒಡೆತನದ ಗ್ಲೋಬಲ್‌ ಟೈಮ್ಸ್‌ ಪತ್ರಿಕೆ ಈ ಕುರಿತು ಹೇಳಿಕೆ ನೀಡಿದ್ದು, ಹುನಾನ್‌ ಪ್ರಾಂತ್ಯದ ಚಾಂಗ್‌ ಶಾ ಆಸ್ಪತ್ರೆಯ ಬ್ಲಡ್‌ ಬ್ಯಾಂಕನ್ನು ಪೀಪಲ್‌ ಲಿಬರೇಷನ್‌ ಆರ್ಮಿಯ ಆದೇಶದ ಹಿನ್ನೆಲೆಯಲ್ಲಿ ಡೋಕ್ಲಾಂಗೆ ಸ್ಥಳಾಂತರಿಸಿದ್ದಾಗಿ ಹೇಳಿದೆ.

ಚೀನಾದಲ್ಲಿ ಇತ್ತೀಚೆಗಷ್ಟೇ ಭೂಕಂಪ ಸಂಭವಿಸಿದ್ದು, ಇದಕ್ಕೂ ಮುನ್ನ ಅನೇಕ ಆಸ್ಪತ್ರೆಗಳಲ್ಲಿ ಸಂಗ್ರಹವಾದ ರಕ್ತವನ್ನು ಟಿಬೆಟ್‌ಗೆ ಸಾಗಿಸಲಾಗುತ್ತಿದೆ ಎಂದು ಗ್ಲೋಬಲ್‌ ಟೈಮ್ಸ್‌ ಹೇಳಿದೆ. ಚೀನಾ , ಭಾರತವನ್ನು ಶತ್ರು ರಾಷ್ಟ್ರವನ್ನಾಗಿ ಪರಿಗಣಿಸುತ್ತಿದ್ದು, ಭಾರತದ ಮೇಲೆ ವಿಷ ಕಾರುತ್ತಿದೆ. ಇದೇ ವೇಳೆ ವಿವಾದಿತ ಡೋಕ್ಲಾಂನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಮತ್ತೆ ಕಿಡಿ ಹೊತ್ತುವಂತೆ ಮಾಡಿದೆ

 

Comments are closed.

Social Media Auto Publish Powered By : XYZScripts.com