ಸೈಲೆಂಟಾಗಿ ಶುರುವಾಯ್ತು ಚಿರಂಜೀವಿ-ಸುದೀಪ್ ಸಿನಿಮಾ..ಶೀಘ್ರದಲ್ಲೇ ಫಸ್ಟ್ ಲುಕ್ ರಿಲೀಸ್!..

ಖೈದಿ ನಂಬರ್ 150 ನಂತ್ರ ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸ್ತಿರೋ ಸಿನಿಮಾ ಉಯ್ಯಾಲವಾಡ ನರಸಿಂಹ ರೆಡ್ಡಿ. 1857ರ ಭಾರತ ಸ್ವಾತಂತ್ರ ಸಂಗ್ರಾಮಕ್ಕೂ ಮುನ್ನ ಬ್ರಿಟಿಷರ ವಿರುದ್ಧ ತಿರುಗಿಬಿದ್ದ ಸ್ವತಂತ್ರ ಹೋರಾಟಗಾರ ಈ ಉಯ್ಯಾಲವಾಡ ನರಸಿಂಹ ರೆಡ್ಡಿ. ಈ ವೀರನ ಜೀವನ ಚರಿತ್ರೆ ಆಧರಿಸಿ ಬರ್ತಿರೋ ಸಿನಿಮಾದಲ್ಲಿ ಅಭಿನಯಿಸೋಕೆ ಚಿರಂಜೀವಿ ಸಿದ್ಧತೆ ನಡೆಸಿದ್ದಾರೆ. ಕೊಣಿಡೆಲಾ ಪ್ರೋಡಕ್ಷನ್ ಸಂಸ್ಥೆಯ ಕಛೇರಿಯಲ್ಲಿ ಸಿಂಪಲ್ಲಾಗಿ ಚಿತ್ರದ ಮಹೂರ್ತ ನೆರವೇರಿಸಿರೋ ಚಿತ್ರತಂಡ ಆಗಸ್ಟ್ 22ರಂದು ಚಿರು ಹುಟ್ಟುಹಬ್ಬದ ಸಂಭ್ರಮದಲ್ಲಿ ಉಯ್ಯಾಲವಾಡ ನರಸಿಂಹ ರೆಡ್ಡಿ ಫಸ್ಟ್ ಲುಕ್ ಬಿಡುಗಡೆ ಮಾಡೋಕೆ ಪ್ಲಾನ್ ಮಾಡಿದೆ. ವಿಶೇಷ ಅಂದ್ರೆ ಈ ಐತಿಹಾಸಿಕ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಪಾಳೇಗಾರನಾಗಿ ಬಣ್ಣ ಹಚ್ಚಲಿದ್ದಾರೆ.

ಉಯ್ಯಾಲವಾಡ ನರಸಿಂಹ ರೆಡ್ಡಿ ಪಾತ್ರಕ್ಕಾಗಿ ಚಿರು ಕತ್ತಿವರಸೆ, ಕುದುರೆ ಸವಾರಿಯಂತಹ ಕಲೆಗಳನ್ನ ಕರಗತ ಮಾಡಿಕೊಳ್ತಿದ್ದಾರೆ. ಪೆರುಚೂರಿ ಬ್ರದರ್ಸ್ ಉಯ್ಯಾಲವಾಡ ನರಸಿಂಹ ರೆಡ್ಡಿಯ ಕಥೆಯನ್ನ ಸಿನಿಮಾ ರೂಪಕ್ಕೆ ಇಳಿಸಿದ್ದು, ಸುರೇಂದರ್ ರೆಡ್ಡಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬದಂದೇ ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ನೆರವೇರಿಸೋಕೆ ಪ್ಲಾನ್ ಮಾಡಿಕೊಂಡಿತ್ತು ಚಿತ್ರತಂಡ. ಆದ್ರೆ ಒಳ್ಳೆ ಮುಹೂರ್ತ ಸಿಗಲಿಲ್ಲ ಅಂತ ಇಂದು ಮಧ್ಯಾಹ್ನ ಸಿಂಪಲ್ಲಾಗಿ ಪೂಜೆ ಮಾಡಿ ಚಿತ್ರವನ್ನ ಪ್ರಾರಂಭಿಸಲಾಗಿದೆ.

ಭಾರಿ ತಾರಾಗಣದ ಈ ಐತಿಹಾಸಿಕ ಚಿತ್ರಕ್ಕೆ ನಾಯಕಿ ಯಾರು ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ಐಶ್ವರ್ಯ ರೈ, ನಯನತಾರ, ಅನುಷ್ಕಾ ಶೆಟ್ಟಿ ಹೆಸರು ಕೇಳಿಬಂತಾದ್ರೂ, ಯಾರು ಫೈನಲ್ ಆಗಿಲ್ಲ. ಇದೀಗ ಕೇಳಿ ಬರ್ತಿರೋ ಸುದ್ದಿ ಪ್ರಕಾರ ನಯನತಾಡಿ, ಚಿರುಗೆ ಜೋಡಿಯಾಗ್ತಾರೆ ಅನ್ನಲಾಗ್ತಿದೆ. ಇನ್ನೂ ಉಯ್ಯಾಲವಾಡ ನರಸಿಂಹ ರೆಡ್ಡಿ ಚಿತ್ರದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಸಹ ನಟಿಸೋ ಸಾಧ್ಯತೆಯಿದೆ. ಈ ಹಿಂದೆ ಚಿತ್ರದ ಮುಖ್ಯ ಪಾತ್ರವೊಂದಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಹೆಸ್ರು ಕೇಳಿಬಂದಿತ್ತು. ಉಪ್ಪಿ ರಿಜೆಕ್ಟ್ ಮಾಡಿದ್ರಿಂದ ಆ ಪಾತ್ರ ಸುದೀಪ್ ಪಾಲಾಗಿದೆ ಅಂತ ಇತ್ತೀಚೆಗೆ ಸುದ್ದಿಯಾಗಿತ್ತು.

Comments are closed.

Social Media Auto Publish Powered By : XYZScripts.com