ಬೆಂಗಳೂರಿಗೆ ಸಿದ್ದರಾಮಯ್ಯನವರ ಕೊಡುಗೆಯೇನು..? – ಕುಮಾರಸ್ವಾಮಿ

ಸಿಎಂ ಸಿದ್ದರಾಮಯ್ಯ ಬೆಂಗಳೂರು ನಗರ ಪ್ರದಕ್ಷಿಣೆ  ಕುರಿತು ಮಾತನಾಡಿದ ಕುಮಾರಸ್ವಾಮಿ,

‘ ಸಿದ್ದರಾಮಯ್ಯ ಬೆಂಗಳೂರಿಗೆ ನೀಡಿದ ಕೊಡುಗೆ ಏನು?  ಸಿದ್ದರಾಮಯ್ಯ ಕೊಡುಗೆ ಜಾಹೀರಾತಿಗೆ ಸೀಮಿತವಾಗಿದೆ. ಕೆರೆಗಳ ವಿಚಾರವಾಗಿ ಕಳೆದ ಮೂರು ವರ್ಷಗಳಿಂದ ನಾನು ಧ್ವನಿ ಎತ್ತಿದ್ದೇನೆ. ಕೆರೆಗಳನ್ನು ರಾಜಕಾಲುವೆಯನ್ನು ನುಂಗಿ ಹಾಕಲಾಗಿದೆ. ನಾನು ಸಿಎಂ ಆಗಿದ್ದಾಗ ಬೆಂಗಳೂರಿಗರಿಗೆ ಮಳೆಯಿಂದ ಹಾನಿಯಾಗದಂತೆ ಕ್ರಮ ಕೈಗೊಂಡಿದ್ದೆ.

ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಗೆ ಜೆಡಿಎಸ್ ಅನಿವಾರ್ಯವಾಗಿದೆ. ಭವಿಷ್ಯದಲ್ಲಿ ಜೆಡಿಎಸ್ ನೆರವಿನಿಂದ ಅಧಿಕಾರಕ್ಕೆ ಬರಬಹುದೆಂದು ಎರಡೂ ರಾಷ್ಟ್ರೀಯ ಪಕ್ಷಗಳು ಭಾವಿಸಿವೆ. ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದ ಈಗ ಉಂಟಾಗಿರುವ ಸ್ಥಿತಿಗೆ ಈ ಮೊದಲು ಅಧಿಕಾರ ನಡೆಸಿದ ಸರ್ಕಾರಗಳು ಕಾರಣವಾಗಿವೆ ಎಂದು ಬೆಂಗಳೂರು ಮೇಯರ್ ಪದ್ಮಾವತಿ ಮಾಡಿರುವ ಆರೋಪಗಳಿಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಹಾಗಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದರೂ ಈ ಬಗ್ಗೆ ಇವರ ಸರ್ಕಾರ ಏನು ಮಾಡುತ್ತಿತ್ತು? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಜನತೆ ಮೊದಲು ಕಾಂಗ್ರೆಸ್, ಬಿಜೆಪಿ ಗೆ ಮತ ನೀಡುವುದನ್ನು ನಿಲ್ಲಿಸಬೇಕು. 20 ತಿಂಗಳು ಉತ್ತಮ ಆಡಳಿತ ನೀಡಿರುವ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಗೆ ಮತ್ತೊಮ್ಮೆ ಅವಕಾಶ ನೀಡಬೇಕು. ಆಗ ಮಾತ್ರ ಬೆಂಗಳೂರಿನ ಜನತೆಯ ಸಮಸ್ಯೆಗಳನ್ನು ಹೋಗಲಾಡಿಸಲು ಸಾಧ್ಯ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಭಗವಂತ ನಿಮಗೆ ಬೇಕಾದಷ್ಟು ಕೊಟ್ಟಿದ್ದಾನೆ. ಸರ್ಕಾರದ ಹೆಸರಿನಲ್ಲಿ ದುಡ್ಡು ಹೊಡೆಯೋದನ್ನ ನಿಲ್ಲಿಸಿ. ಸಚಿವ ಕೆ.ಜೆ.ಜಾರ್ಜ್ ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. ಭಗವಂತ ನಿಮಗೆ ಬೇಕಾದಷ್ಟು ಕೊಟ್ಟಿದ್ದಾನೆ. ಐದು ತಲೆಮಾರು ಕೂತು ತಿಂದರೂ ಮುಗಿಯದಷ್ಟು ಇದೆ. ಆದರೂ ನಿಮ್ಮ ಧನದಾಹ ಕಡಿಮೆಯಾಗಿಲ್ಲ. ರಾಜಕಾಲುವೆ ಸೇರಿದಂತೆ ಸರ್ಕಾರಿ ಕಾಮಗಾರಿಗಳಲ್ಲಿ ದುಡ್ಡು ಹೊಡೆಯೋದನ್ನು ನಿಲ್ಲಿಸಿ.

‘ ಜಾಸ್ತಿ ಮಳೆ ಬಂದರೆ ಬಿಬಿಎಂಪಿ ಏನು ಮಾಡುತ್ತೆ ಅನ್ನೋದಾದ್ರೆ ನೀವು ಯಾಕೆ ಇದ್ದೀರಾ? ಸರ್ಕಾರ ಏನು ಮಾಡುತ್ತಿದೆ? ಬೆಂಗಳೂರು ಅಭಿವೃದ್ಧಿಗೆ ಪ್ರತಿವರ್ಷ ೬-೭ ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫುಲ್ ಪೇಜ್ ಜಾಹೀರಾತು ಹಾಕಿಸಿಕೊಳ್ಳುತ್ತಾರೆ. ಅಷ್ಟು ಹಣ ಕಾಮಗಾರಿಗಳಿಗೆ ಖರ್ಚಾಗಿದ್ದರೆ ಬೆಂಗಳೂರಿಗೆ ಈ ಗತಿ ಬರುತ್ತಿರಲಿಲ್ಲ. ಬೆಂಗಳೂರಿನಲ್ಲಿ ಎರಡು ದಿನಗಳಿಂದ ಬಹುತೇಕ ಕುಟುಂಬಗಳು ನಿದ್ದೆ ಮಾಡಲು ಸಾಧ್ಯವಾಗಿಲ್ಲ ‘ ಎಂದು ಮೈಸೂರಿನಲ್ಲಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

‘ ನನ್ನ ಆರೋಗ್ಯ ಚೆನ್ನಾಗಿಯೇ ಇದೆ. ಗಂಟಲು ನೋವಿನ ಸಮಸ್ಯೆಯಿಂದ ಸಿಂಗಪೂರ್ ಗೆ ತೆರಳಿದ್ದೆ. ಆರೋಗ್ಯ ಸುಧಾರಿಸಿದ್ದರಿಂದ ನೇರವಾಗಿ ಮೈಸೂರಿಗೆ ಆಗಮಿಸಿದ್ದೇನೆ. ನನಗೆ ಆತಂಕ ಆಗುವಂತಹ  ಯಾವುದೇ ರೋಗ ಇಲ್ಲ. ಅಥವಾ ಇತರೆ ರಾಜಕಾರಣಿಗಳ ಥರ ಕಾರ್ಯಕರ್ತರು ಕೈ ಮುಟ್ಟಿದ ತಕ್ಷಣ ಡೆಟಾಲ್ ಹಾಕಿ  ಕೈತೊಳೆದುಕೊಳ್ಳುವುದಿಲ್ಲ. ವೈದ್ಯರ ಸಲಹೆ ಸೂಚನೆಗಳನ್ನು ಸರಿಯಾಗಿ ಪಾಲಿಸದೆ ಇದ್ದುದ್ದಕ್ಕೆ ಗಂಟಲು ನೋವು ಜಾಸ್ತಿ ಆಗಿತ್ತು. ಇಲ್ಲಿನ ವೈದ್ಯರೇ ಸಿಂಗಪೂರ್ ನಲ್ಲಿ ಚಿಕಿತ್ಸೆ ಪಡೆಯಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಂಗಪೂರ್ ಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬಂದೆ. ಸದ್ಯ ನನ್ನ ಆರೋಗ್ಯ ಸ್ಥಿರವಾಗಿದೆ. ನನ್ನ ಆರೋಗ್ಯದ ಬಗ್ಗೆ ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಸುತ್ತೂರು ಶ್ರೀಗಳ ಜತೆ ಮಾತನಾಡಿಕೊಂಡು ಹೋಗುವುದಕ್ಕಾಗಿ ಮೈಸೂರಿಗೆ ಆಗಮಿಸಿದೆ ‘ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಎಚ್ಡಿಕೆ ಹೇಳಿಕೆ ನೀಡಿದ್ಧಾರೆ.

ಉಪೇಂದ್ರ ಹೊಸ ಪಕ್ಷ ಸ್ಥಾಪನೆ ವಿಚಾರ

‘ ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಪಕ್ಷ ಕಟ್ಟಬಹುದು. ಅವರಿಗೆ ಶುಭ ಹಾರೈಸುತ್ತೇನೆ. ಈ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ. ಅವರು ಸಲಹೆ ಕೇಳಿದರೆ ಖಂಡಿತಾ ಕೊಡುತ್ತೇನೆ. ರಾಜ್ಯಕ್ಕೆ ಒಳ್ಳೇಯದಾದರೆ ಖಂಡಿತಾ ಸಲಹೆ ಕೊಡುತ್ತೇನೆ.

ಅಮಿತ್ ಶಾ ರಿಂದ ನಿರ್ಮಲಾನಂದ ಶ್ರೀಗಳಿಗೆ ಅವಮಾನ ವಿಚಾರವಾಗಿ ಮಾತನಾಡಿ ‘ ಇದು ಟೀಕೆ ಮಾಡುವಷ್ಟು ದೊಡ್ಡ ವಿಷಯವಲ್ಲ. ಶ್ರೀಗಳೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ನು ಅದನ್ನೇ ಮುಂದುವರಿಸುವುದು ಸರಿಯಲ್ಲ. ಇನ್ನು 15 ದಿನ ರಾಜಕೀಯ ಮಾತನಾಡುವುದಿಲ್ಲ. ಆದರೆ ಎಲ್ಲಾ ಪಕ್ಷದ ನಡವಳಿಕೆ ಬೆಳವಣಿಗೆ ಗಮನಿಸುತ್ತಿದ್ದೇನೆ. ಬಂಡಾಯ ಶಾಸಕರು ಏನು ಮಾಡುತ್ತಿದ್ದಾರೆ?  ಎಲ್ಲಿಗೆ ಹೋಗುತ್ತಿದ್ದಾರೆ ಅನ್ನೋದು ನನಗೆ ಬೇಕಾಗಿಲ್ಲ.

ಶಾಸಕರು ಪಕ್ಷ ಬಿಟ್ಟು ಹೋಗುವ ವಿಚಾರವಾಗಿ ಮಾತನಾಡಿ ‘ ನನಗೆ ನಮ್ಮ ಎಲ್ಲಾ ಶಾಸಕರ ಮೇಲೂ ವಿಶ್ವಾಸವಿದೆ. ರಾಷ್ಟ್ರೀಯ ಪಕ್ಷಗಳಿಂದ ಅನಕೂಲವಾಗುತ್ತದೆ ಅಂತಾ ಕೆಲವರು ಹೋದರೆ ಹೋಗಬಹುದು. ಸದ್ಯ ಎರಡು ರಾಷ್ಟ್ರೀಯ ಪಕ್ಷಗಳಿಗೂ ಜೆಡಿಎಸ್ ಅನಿವಾರ್ಯವಾಗಿದೆ. 15 ದಿನಗಳವರೆಗೂ ನಾನು ಮೌನವಾಗಿರುತ್ತೇನೆ. ನಂತರ ಜನರಿಗೆ ಕೇಳಬೇಕಾದ ಸಾಕಷ್ಟು ಪ್ರಶ್ನೆಗಳಿವೆ. ಅದನ್ನು ಜನರ ಬಳಿ ಕೇಳುತ್ತೇನೆ.

ಸಿಎಂ ಸಿದ್ದರಾಮಯ್ಯ ಬೆಂಗಳೂರು ನಗರ ಪ್ರದಕ್ಷಿಣೆ

‘ ಸಿದ್ದರಾಮಯ್ಯ ಬೆಂಗಳೂರಿಗೆ ನೀಡಿದ ಕೊಡುಗೆ ಏನು?  ಸಿದ್ದರಾಮಯ್ಯ ಕೊಡುಗೆ ಜಾಹೀರಾತಿಗೆ ಸೀಮಿತವಾಗಿದೆ. ಕೆರೆಗಳ ವಿಚಾರವಾಗಿ ಕಳೆದ ಮೂರು ವರ್ಷಗಳಿಂದ ನಾನು ಧ್ವನಿ ಎತ್ತಿದ್ದೇನೆ. ಕೆರೆಗಳನ್ನು ರಾಜಕಾಲುವೆಯನ್ನು ನುಂಗಿ ಹಾಕಲಾಗಿದೆ. ನಾನು ಸಿಎಂ ಆಗಿದ್ದಾಗ ಬೆಂಗಳೂರಿಗರಿಗೆ ಮಳೆಯಿಂದ ಹಾನಿಯಾಗದಂತೆ ಕ್ರಮ ಕೈಗೊಂಡಿದ್ದೆ.

1500 ಕೆರೆ ಡಿ ನೋಟಿಫೈ ಮಾಡುವ ವಿಚಾರ
‘ ಸಚಿವ ಜಾರ್ಜ್ ದುಡ್ಡು ಮಾಡುವುದನ್ನು ನಿಲ್ಲಿಸಿ. ನಿಮ್ಮ ಸಾಕಷ್ಟು ತಲೆ ಮಾರು ಜೀವನ ಮಾಡುವಷ್ಟು ಆಸ್ತಿ ನಿಮ್ಮ ಬಳಿಯಿದೆ. ಇತ್ತೀಚೆಗೆ ಹೋರಾಟಗಳು ಬೆಲೆ ಕಳೆದುಕೊಂಡಿವೆ. ಜನರು ಕಾಂಗ್ರೆಸ್ ಬಿಜೆಪಿಗೆ ಮತ ಹಾಕುವುದನ್ನು ನಿಲ್ಲಿಸಿದರೆ ಎಲ್ಲವೂ ಸರಿಯಾಗುತ್ತದೆ. ಕೆರೆಗಳ ವಿಚಾರದಲ್ಲಿ ಕಾನೂನು ಹೋರಾಟದಿಂದ ತಾರ್ಕಿಕ ಅಂತ್ಯ ಸಾಧ್ಯವಿಲ್ಲ. ಮುಂದಿನ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಹೈಕಮಾಂಡ್ ಜೊತೆ ಚರ್ಚೆ ಮಾಡಿ ಪಟ್ಟಿ ಬಿಡುಗಡೆ ಮಾಡುತ್ತೇನೆ ‘ ಎಂದರು.

ರಾಜ್ಯದಲ್ಲಿ ಐಟಿ ದಾಳಿ ವಿಚಾರ
ಕೇಂದ್ರ ಸರ್ಕಾರ ಟಾರ್ಗೆಟ್ ಮಾಡ್ತಾ ಇದೆ ಅನ್ನೋ ಆರೋಪ ಸುಳ್ಳು. ಐಟಿ ದಾಳಿ ಬಗ್ಗೆ ಇವರಿಗೆ 6 ತಿಂಗಳ ಹಿಂದೆ ಗೊತ್ತಿತ್ತು. ಇದು ನಿರಂತರ ಪ್ರಕ್ರಿಯೆ.
ಮೈಸೂರು ಜಿಲ್ಲೆ ಬಗ್ಗೆ ನನಗೆ ವಿಶೇಷ ಆಸಕ್ತಿಯಿದೆ. ನನ್ನ ರಾಜಕೀಯ ಭವಿಷ್ಯಕ್ಕೆ ದೊಡ್ಡ ಕೊಡುಗೆ ನೀಡಿದ ಜಿಲ್ಲೆ ಮೈಸೂರು. ಮೈಸೂರಿಗೆ ನನಗೂ ಯಾವುದೋ ಜನ್ಮದ ಸಂಂಧವಿದೆ ‘ ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

9 thoughts on “ಬೆಂಗಳೂರಿಗೆ ಸಿದ್ದರಾಮಯ್ಯನವರ ಕೊಡುಗೆಯೇನು..? – ಕುಮಾರಸ್ವಾಮಿ

 • October 18, 2017 at 12:00 PM
  Permalink

  Hey I know this is off topic but I was wondering if you knew of any widgets I could add to my blog that automatically tweet my newest twitter updates. I’ve been looking for a plug-in like this for quite some time and was hoping maybe you would have some experience with something like this. Please let me know if you run into anything. I truly enjoy reading your blog and I look forward to your new updates.|

 • October 18, 2017 at 1:46 PM
  Permalink

  I know this if off topic but I’m looking into starting my own weblog and was wondering what all is needed to get setup? I’m assuming having a blog like yours would cost a pretty penny? I’m not very web smart so I’m not 100% sure. Any tips or advice would be greatly appreciated. Thank you|

 • October 18, 2017 at 3:29 PM
  Permalink

  Great work! That is the kind of info that are supposed to be shared across the net. Shame on the search engines for no longer positioning this put up upper! Come on over and consult with my website . Thank you =)|

 • October 20, 2017 at 6:18 PM
  Permalink

  I love it when people get together and share opinions. Great site, keep it up!|

 • October 20, 2017 at 10:49 PM
  Permalink

  It’s remarkable in favor of me to have a website, which is useful designed for my knowledge.
  thanks admin

 • October 20, 2017 at 11:07 PM
  Permalink

  Heya! I understand this is somewhat off-topic however I
  had to ask. Does building a well-established website like yours take a lot of work?
  I’m brand new to running a blog but I do write in my
  journal on a daily basis. I’d like to start
  a blog so I will be able to share my personal
  experience and views online. Please let me know if you
  have any kind of recommendations or tips for new aspiring bloggers.
  Thankyou!

 • October 21, 2017 at 12:38 AM
  Permalink

  What’s up everyone, it’s my first pay a quick visit at this site, and paragraph is in fact fruitful in favor of me, keep up posting these types of posts.|

 • October 25, 2017 at 9:10 AM
  Permalink

  I got this website from my buddy who told me
  regarding this website and at the moment this time
  I am browsing this web page and reading very informative articles at this time.

 • October 25, 2017 at 10:41 AM
  Permalink

  Hi there superb blog! Does running a blog such as this take a lot of work?
  I’ve very little understanding of coding but I was hoping to start my own blog in the near future.
  Anyways, if you have any recommendations or techniques
  for new blog owners please share. I understand
  this is off subject nevertheless I just needed to ask.
  Thanks a lot!

Comments are closed.